»   » ಚಾಲೆಂಜಿಂಗ್ ಸ್ಟಾರ್ 'ವಿರಾಟ' ದರ್ಶನಕ್ಕೆ ಮತ್ತೆ ಜೀವ

ಚಾಲೆಂಜಿಂಗ್ ಸ್ಟಾರ್ 'ವಿರಾಟ' ದರ್ಶನಕ್ಕೆ ಮತ್ತೆ ಜೀವ

By: ಜೀವನರಸಿಕ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಚಿತ್ರ 2011ರಲ್ಲಿ ಶುರುವಾಗಿತ್ತು. ಎಲ್ಲವೂ ಅಂದುಕೊಂಡಂತೇ ಆಗಿದ್ರೆ 'ಸಾರಥಿ' ಚಿತ್ರದ ನಂತರ 'ಚಿಂಗಾರಿ'ಗೂ ಮೊದಲು 'ವಿರಾಟ್' ದರ್ಶನ ಆಗಬೇಕಿತ್ತು. ಆದ್ರೆ ಹಲವು ಕಾರಣಗಳಿಂದ ಸಿನಿಮಾ ನಿಂತು ಹೋಯ್ತು.

ಆ ಸಿನಿಮಾಗಾಗಿ ದರ್ಶನ್ ಒಂದಷ್ಟು ದಿನ ಖಾಲಿ ಡೇಟ್ಸ್ ಇಟ್ಟು ಬೇಸರ ಮಾಡಿಕೊಂಡ್ರು. ಆದ್ರೆ ಹೆಚ್ ವಾಸು ನಿರ್ದೇಶಕರಾಗಿ ಸಿನಿಮಾವನ್ನ ಮುಗಿಸೋ ಮನಸ್ಸು ಮಾಡಿದ್ದಾರೆ. ಮೂರು ಹೀರೋಯಿನ್ ಗಳಿದ್ದ ಈ ಗ್ಲಾಮರಸ್ ಕಥೆಯ ತುಡಿತ ಈಗಲೂ ಚಿತ್ರತಂಡಕ್ಕಿದೆ. ದರ್ಶನ್ ಕೂಡ ಅರ್ಧ ಶೂಟಿಂಗ್ ಮುಗಿಸಿರೋ ಚಿತ್ರಕ್ಕೆ ಡೇಟ್ಸ್ ಕೊಡೋ ಯೋಚನೆಯಲ್ಲಿದ್ದಾರಂತೆ. [ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಜಗ್ಗು ದಾದಾ]

Challenging Star Darshan's Viraat to re-start

'ಜಗ್ಗೂದಾದ' ಸಿನಿಮಾದ ಮುಹೂರ್ತ ಫೆಬ್ರವರಿ 16ಕ್ಕೆ ನಡೆದ್ರೂ ಚಿತ್ರದ ಶೂಟಿಂಗ್ ಗೂ ಮೊದಲು ವಿರಾಟ್ ಶೂಟಿಂಗ್ ನಡೆಯಲಿದೆ ಅನ್ನೋದು ಮೂಲಗಳಿಂದ ಬಂದಿರೋ ಸುದ್ದಿ. ವಿರಾಟ್ ಅದ್ಧೂರಿ ಬಜೆಟ್ ಚಿತ್ರ. ಕರೆಂಟ್ ಮಾಫಿಯಾ ಬಗ್ಗೆ ಕಥೆ ಹೊಂದಿರೋ ಚಿತ್ರ.

ದರ್ಶನ್ ಅವರ ಜಬರ್ದಸ್ತ್ ಆಕ್ಷನ್ ಚಿತ್ರವಾಗಿದ್ದು ತೆರೆಗೆ ಬಂದ್ರೆ ಪ್ರೇಕ್ಷಕರಿಗೆ 2015ರಲ್ಲಿ 'ಐರಾವತ' ಜೊತೆ ಮತ್ತೊಂದು ಬೋನಸ್ ಸಿಗೋದ್ರಲ್ಲಿ ಅನುಮಾನವಿಲ್ಲ. ಆದರೆ ಕಾಲವೇ ಉತ್ತರ ಹೇಳಬೇಕು.

ಇನ್ನು ವಿರಾಟ್ ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗಿರೋದು ಇಷಾ ಚಾವ್ಲಾ, ವಿದಿಷಾ ಶ್ರೀವಾಸ್ತವ್, ಮತ್ತು ಡಿಕೆ ಚಿತ್ರದಲ್ಲಿ ಪ್ರೇಮ್ ಗೆ ಜೋಡಿಯಾಗಿರೋ ಚೈತ್ರ ಚಂದ್ರನಾಥ್. ಈ ಮೂರು ಗ್ಲಾಮರ್ ಡಾಲ್ ಗಳು ಚಾಲೆಂಜಿಂಗ್ ಸ್ಟಾರ್ ಜೊತೆ ರೋಮ್ಯಾನ್ಸ್ ಮಾಡ್ತಿದ್ರೆ ನೋಡೋದು ಸೂಪರ್ ಅಲ್ವಾ.

English summary
Afterwards a long gap stalled Kannada action movie 'Viraat' all set to re-start as soon, which has Challenging Star in lead role. H. Vasu is directing the film while Sandesh Nagaraj and Tollywood based Ratnakumar is producing the venture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada