For Quick Alerts
  ALLOW NOTIFICATIONS  
  For Daily Alerts

  ಮೆಗಾ ಸ್ಟಾರ್ ಚಿರಂಜೀವಿ ಹೊಸ ಪ್ರಯತ್ನಕ್ಕೆ ಮಗಳ ಸಾರಥ್ಯ

  |

  ಮೆಗಾ ಸ್ಟಾರ್ ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಚಾರ್ಯ ಚಿತ್ರೀಕರಣ ಮುಗಿಯುತ್ತಿದ್ದಂತೆ ಮಲಯಾಳಂನ ಸೂಪರ್ ಹಿಟ್ ಲೂಸಿಫರ್ ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಈಗ ಮೆಗಾ ಸ್ಟಾರ್ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

  ಮೆಗಾಸ್ಟಾರ್ ಚಿರಂಜೀವಿ ಸಖತ್ತಾಗಿ ಮನೆಕೆಲಸ ಮಾಡ್ತಾರೆ ನೋಡಿ.ನಿಮ್ಗೂ ಆಗುತ್ತಾ? | Chiranjeevi | Filmibeat Kannada

  ಹೌದು, ಚಿರಂಜೀವಿ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಸಿನಿಮಾದಷ್ಟೆ ಖ್ಯಾತಿಗಳಿಸಿರುವ ವೆಬ್ ಸೀರಿಸ್ ಲೋಕದಲ್ಲಿ ಸಾಕಷ್ಟು ಸ್ಟಾರ್ ಕಲಾವಿದರು ಮಿಂಚುತ್ತಿದ್ದಾರೆ. ಅನೇಕರು ಸಿನಿಮಾಗಿಂತ ಹೆಚ್ಚು ವೆಬ್ ಸೀರಿಸ್ ಲೋಕದಲ್ಲಿ ಹೆಚ್ಚು ಖ್ಯಾತಿಗಳಿಸಿದ್ದಾರೆ. ಪ್ರೇಕ್ಷಕರ ಗಮನ ಸೆಳೆಯುತ್ತಿರುವ ವೆಬ್ ಸೀರಿಸ್ ಲೋಕಕ್ಕೆ ಟಾಲಿವುಡ್ ಮೆಗಾ ಸ್ಟಾರ್ ಸಹ ಎಂಟ್ರಿ ಕೊಡುತ್ತಿದ್ದಾರೆ. ಮುಂದೆ ಓದಿ...

  ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ಚಿರಂಜೀವಿ

  ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ಚಿರಂಜೀವಿ

  ಮೆಗಾ ಸ್ಟಾರ್ ಚಿರಂಜೀವಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಚಿರು ಈಗ ವೆಬ್ ಸೀರಿಸ್ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ನಿಲ್ಲಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೆಗಾ ಸ್ಟಾರ್ ಕೈಯಲ್ಲಿ ಈಗಾಗಲೆ ಸಾಕಷ್ಟು ಸಿನಿಮಾಗಳಿವೆ. ಹಾಗಾಗಿ ವೆಬ್ ಸೀರಿಸ್ ಯಾವಾಗ ಪ್ರಾರಂಭಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಚಿರಂಜೀವಿ ಯಾವುದೆ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.

  ಮಲಯಾಳಂನ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ-ಅಲ್ಲು ಅರ್ಜುನ್ಮಲಯಾಳಂನ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ-ಅಲ್ಲು ಅರ್ಜುನ್

  ಚಿರು ವೆಬ್ ಸೀರಿಸ್ ಗೆ ಮಗಳ ನಿರ್ದೇಶನ

  ಚಿರು ವೆಬ್ ಸೀರಿಸ್ ಗೆ ಮಗಳ ನಿರ್ದೇಶನ

  ಚಿರಂಜೀವಿ ದೊಡ್ಡ ಮಗಳು ಸುಶ್ಮಿತಾ ಚಿರಂಜೀವಿ ಅಪ್ಪನ ಮೊದಲ ವೆಬ್ ಸೀರಿಸ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೆ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಸುಶ್ಮಿತಾ ಅಪ್ಪನಿಗಾಗಿ ವೆಬ್ ಸೀರಿಸ್ ಮಾಡಲು ತಯಾರಿ ನಡೆಸುತ್ತಿದ್ದಾರಂತೆ. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗಪಡಿಸಿಲ್ಲ.

  'ಲೂಸಿಫರ್' ಸಿನಿಮಾದ ತೆಲುಗು ರಿಮೇಕ್ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು?'ಲೂಸಿಫರ್' ಸಿನಿಮಾದ ತೆಲುಗು ರಿಮೇಕ್ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು?

  ಸ್ಕ್ರಿಪ್ಟ್ ಕೆಲಸದಲ್ಲಿ ಸುಶ್ಮಿತಾ ಬ್ಯುಸಿ

  ಸ್ಕ್ರಿಪ್ಟ್ ಕೆಲಸದಲ್ಲಿ ಸುಶ್ಮಿತಾ ಬ್ಯುಸಿ

  ಸುಶ್ಮಿತಾ ಚಿರಂಜೀವಿ ಸದ್ಯ ವೆಬ್ ಸೀರಿಸ್ ನ ಕಥೆ ಬರೆಯುತ್ತಿದ್ದಾರೆ. ಈಗಾಗಲೆ ಸಾಕಷ್ಟು ಕೆಲಸ ಮುಗಿದಿದ್ದು, ಲಾಕ್ ಡೌನ್ ನಂತರ ಪ್ರಾರಂಭಿಸಲಿದ್ದಾರಂತೆ. ಅಂದ್ಹಾಗೆ ಸುಶ್ಮಿತಾ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿರಂಜೀವಿ ಅಭಿನಯದ ಸಾಕಷ್ಟು ಸಿನಿಮಾಗಳಿಗೆ ಸುಶ್ಮಿತಾ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಸೈರಾ ನರಸಿಂಹ ರೆಡ್ಡಿ ಚಿತ್ರ ಮತ್ತು ಸದ್ಯ ಆಚಾರ್ಯ ಸಿನಿಮಾಗೂ ಸುಶ್ಮಿತಾ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

  ಇವರು ನನ್ನ ತಾಯಿ ಅಲ್ಲ, ಮಹಾನ್ ಕೆಲಸ ಮಾಡುತ್ತಿರುವ ಈ ತಾಯಿಗೆ ಧನ್ಯವಾದ: ನಟ ಚಿರಂಜೀವಿಇವರು ನನ್ನ ತಾಯಿ ಅಲ್ಲ, ಮಹಾನ್ ಕೆಲಸ ಮಾಡುತ್ತಿರುವ ಈ ತಾಯಿಗೆ ಧನ್ಯವಾದ: ನಟ ಚಿರಂಜೀವಿ

  ಆಚಾರ್ಯ ಸಿನಿಮಾದ ಚಿತ್ರೀಕರಣಲ್ಲಿ ಚಿರಂಜೀವಿ

  ಆಚಾರ್ಯ ಸಿನಿಮಾದ ಚಿತ್ರೀಕರಣಲ್ಲಿ ಚಿರಂಜೀವಿ

  ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಿಲಾಗಿದೆ. ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ಅಗರವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಆಚಾರ್ಯ ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ವೆಬ್ ಸೀರಿಸ್ ಪ್ರಾರಂಭಿಸಲಿದ್ದಾರಾ ಅಥವಾ ಲೂಸಿಫರ್ ರಿಮೇಕ್ ಮಾಡಲಿದ್ದಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

  ಚಿರು ಸಿನಿಮಾದಿಂದ ಹೊರ ನಡೆದ ತ್ರಿಷಾ: ಅಸಲಿ ಕಾರಣ ಬಹಿರಂಗ ಪಡಿಸಿದ ಮೆಗಾಸ್ಟಾರ್ಚಿರು ಸಿನಿಮಾದಿಂದ ಹೊರ ನಡೆದ ತ್ರಿಷಾ: ಅಸಲಿ ಕಾರಣ ಬಹಿರಂಗ ಪಡಿಸಿದ ಮೆಗಾಸ್ಟಾರ್

  English summary
  Actor Chiranjeevi will make digital debut with web series directed by his daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X