»   » 'ಡಿ' ಬಾಸ್ 51ನೇ ಸಿನಿಮಾ ಯಾರಿಗೆ.? ಪೋಸ್ಟರ್ ತಂದಿಟ್ಟ ಅನುಮಾನ.!

'ಡಿ' ಬಾಸ್ 51ನೇ ಸಿನಿಮಾ ಯಾರಿಗೆ.? ಪೋಸ್ಟರ್ ತಂದಿಟ್ಟ ಅನುಮಾನ.!

Posted By:
Subscribe to Filmibeat Kannada

ಕಳೆದ ಒಂದು ವಾರದಿಂದ ಗಾಂಧಿನಗರದ ಮೂಲೆ ಮೂಲೆಯಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳದ್ದೇ ಸುದ್ದಿ. ಅದರಲ್ಲೂ, ನಿನ್ನೆಯಂತೂ (ಫೆಬ್ರವರಿ 16) ಕೇಳೋದೇ ಬೇಡ.... 'ದಾಸ'ನ ಜನ್ಮದಿನದ ಸಡಗರ.... ಇದೇ ಸಂಭ್ರಮ-ಸಡಗರವನ್ನು ಇಮ್ಮಡಿಗೊಳಿಸಲು ದರ್ಶನ್ ರವರ ಮುಂಬರುವ ಚಿತ್ರಗಳನ್ನು ನಿನ್ನೆ ಅನೌನ್ಸ್ ಮಾಡಲಾಯ್ತು. ಅದರಲ್ಲಿ ದರ್ಶನ್ ರವರ 51ನೇ ಸಿನಿಮಾ ಕೂಡ ಒಂದು.

ದರ್ಶನ್ ರವರ 51ನೇ ಸಿನಿಮಾ...

ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ರವರು ದರ್ಶನ್ ರವರ 51ನೇ ಚಿತ್ರವನ್ನ ನಿನ್ನೆ (ದರ್ಶನ್ ರವರ ಹುಟ್ಟುಹಬ್ಬದ ಪ್ರಯುಕ್ತ) ಅನೌನ್ಸ್ ಮಾಡಿದ್ರು.[ದರ್ಶನ್ 'ಬಾಸ್' ಹುಟ್ಟುಹಬ್ಬ ವಿಶೇಷ: 51ನೇ ಸಿನಿಮಾ ಅನೌನ್ಸ್]

ಇತ್ತ ಸಂದೇಶ್ ನಾಗರಾಜ್ ಕೊಟ್ಟ ಸಂದೇಶ

ಇತ್ತ ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ದರ್ಶನ್ ರವರ ಜನ್ಮದಿನದ ಪ್ರಯುಕ್ತ ದರ್ಶನ್ ಗಾಗಿ ನಿರ್ಮಾಣ ಮಾಡುವ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 52ನೇ ಸಿನಿಮಾನೂ ಫಿಕ್ಸ್!]

ಪೇಪರ್ ನಲ್ಲಿ ಜಾಹೀರಾತು

ದರ್ಶನ್ ಗಾಗಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡಲಿರುವ ಚಿತ್ರದ ಕುರಿತು ಇವತ್ತಿನ 'ಉದಯವಾಣಿ' ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿದೆ.

ಪೋಸ್ಟರ್ ನಲ್ಲಿ ಏನಿದೆ.?

''ಪ್ರೊಡಕ್ಷನ್ ನಂ.51' - ನಿರ್ಮಾಪಕರು ಎನ್.ಸಂದೇಶ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51ನೇ ಚಿತ್ರ'' ಎಂಬ ಬರಹ ಪೋಸ್ಟರ್ ನಲ್ಲಿದೆ. ಸಂದೇಶ್ ಪ್ರೊಡಕ್ಷನ್ಸ್ ರವರ 25ನೇ ಚಿತ್ರ 'ಒಡೆಯರ್' ಅಂತಲೂ ಬರೆಯಲಾಗಿದೆ.

ದರ್ಶನ್ 51ನೇ ಸಿನಿಮಾ.!

ಈ ಪೋಸ್ಟರ್ ನೋಡ್ತಿದ್ರೆ, ದರ್ಶನ್ ರವರ 51ನೇ ಚಿತ್ರವನ್ನ ಸಂದೇಶ್ ನಾಗರಾಜ್ ನಿರ್ಮಾಣ ಮಾಡಬಹುದಾ ಎಂಬ ಅನುಮಾನ ಮೂಡದೇ ಇರಲ್ಲ.

ಆದ್ರೆ... ಬಿ.ಸುರೇಶ್ ಇದ್ದಾರಲ್ಲ

ಅತ್ತ ಬಿ.ಸುರೇಶ್ ಕೂಡ ದರ್ಶನ್ ರವರ 51ನೇ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ಇತ್ತ ಸಂದೇಶ್ ನಾಗರಾಜ್ ನೀಡಿರುವ ಜಾಹೀರಾತಿನಲ್ಲೂ ದರ್ಶನ್ ರವರ 51ನೇ ಚಿತ್ರದ ಬಗ್ಗೆ ಉಲ್ಲೇಖ ಇದೆ. ಇದನ್ನ ನೋಡಿ ದರ್ಶನ್ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿರೋದು ಮಾತ್ರ ಸುಳ್ಳಲ್ಲ.

ಹಾಗಾದ್ರೆ, 'ದರ್ಶನ್ 51' ಯಾರಿಗೆ.?

'ದರ್ಶನ್ 51' ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ದರ್ಶನ್ ಬಾಯಿಂದಲೇ ಬರಬೇಕು.

English summary
Two Posters/Adds have created Confusion over Challenging Star Darshan's 51st Movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada