For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಚಿತ್ರದ ವಿಲನ್ ಈಗ ಸುದೀಪ್ ಗೂ ವಿಲನ್.! ಯಾರದು?

  |
  ದರ್ಶನ್ ಚಿತ್ರದ ವಿಲನ್ ಈಗ ಸುದೀಪ್ ಗೂ ವಿಲನ್.! ಯಾರದು? | FILMIBEAT KANNADA

  ಇತ್ತೀಚಿನ ದಿನಗಳಲ್ಲಿ ಕನ್ನಡ ಇಂಡಸ್ಟ್ರಿಗೆ ಹೊಸ ಹೊಸ ಖಳನಾಯಕರ ಆಗಮನವಾಗ್ತಿದೆ. ನಮ್ಮ ಹೀರೋಗಳೇ ವಿಲನ್ ಗಳಾಗಿ ಮಿಂಚುತ್ತಿದ್ದು, ಜೊತೆಗೆ ಪರಭಾಷೆಯ ಕೆಲವು ನಟರು ಕನ್ನಡದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ.

  ದರ್ಶನ್ ಸಿನಿಮಾದಲ್ಲಿ ಅಭಿನಯಿಸಿದ್ದ ಖಡಕ್ ನಟ ಈಗ ಸುದೀಪ್ ಅವರ ಹೊಸ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ಸುದೀಪ್ ಅಭಿನಯದ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಈ ಖಳನಟನ ಆಗಮನದಿಂದ ಮತ್ತಷ್ಟು ಕುತೂಹಲ ಹೆಚ್ಚಿದೆ.

  ದರ್ಶನ್ ಭಾಗಿಯಾಗಿದ್ದ 'ಉದ್ಘರ್ಷ' ಕಾರ್ಯಕ್ರಮಕ್ಕೆ ಸುದೀಪ್ ಬಂದಿಲ್ಲ ಯಾಕೆ?

  ವಿಶೇಷ ಅಂದ್ರೆ ಈ ವಿಲನ್ ಎರಡು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಆದ್ರೆ, ಇದುವರೆಗೂ ಈ ನಟ ಅಭಿನಯಿಸಿರುವ ಯಾವ ಚಿತ್ರವೂ ಇನ್ನು ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ಸುದೀಪ್ ಚಿತ್ರಕ್ಕೆ ಸೇರಿದ್ದಾರೆ. ಅಷ್ಟಕ್ಕೂ ಯಾರದು? ಮುಂದೆ ಓದಿ....

  ಕೋಟಿಗೊಬ್ಬನ ಜೊತೆ ಡ್ಯಾನಿಶ್

  ಕೋಟಿಗೊಬ್ಬನ ಜೊತೆ ಡ್ಯಾನಿಶ್

  ದರ್ಶನ್ ಅಭಿನಯದ ಕುರುಕ್ಷೇತ್ರದಲ್ಲಿ ನಟಿಸಿರುವ ಡ್ಯಾನಿಶ್ ಅಖ್ತರ್ ಸೈಫಿ ಈಗ ಸುದೀಪ್ ಅವರ ಕೋಟಿಗೊಬ್ಬ 3 ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಕುರುಕ್ಷೇತ್ರದಲ್ಲಿ ಡ್ಯಾನಿಶ್ ಭೀಮನ ಪಾತ್ರ ನಿರ್ವಹಿಸಿದ್ದರು.

  'ಬಾಸ್' ಆಸ್ಪತ್ರೆಯಿಂದ ಬಂದಿದ್ದಕ್ಕೆ ಸಂಭ್ರಮಿಸಿದ 'ಭೀಮ'

  ಇಬ್ಬರ ನಡುವೆ ಫೈಟ್ ದೃಶ್ಯ

  ಇಬ್ಬರ ನಡುವೆ ಫೈಟ್ ದೃಶ್ಯ

  ಈಗಾಗಲೇ ಕೋಟಿಗೊಬ್ಬ 3 ಚಿತ್ರದಲ್ಲಿ ಮಡೋನಾ ಸೆಬಾಸ್ಟಿನ್, ಶ್ರದ್ಧಾ ದಾಸ್, ರವಿಶಂಕರ್, ರಾಜೇಶ್ ನಟರಂಗ, ತಬಲ ನಾಣಿ ಅಂತಹ ಕಲಾವಿದರಿದ್ದು ಈಗ ಡ್ಯಾನಿಶ್ ಆಗಮನವಾಗಿದೆ. ಡ್ಯಾನಿಶ್ ಮತ್ತು ಸುದೀಪ್ ನಡುವೆ ಫೈಟ್ ಸೀನ್ ಇದ್ದು, ಸದ್ಯದಲ್ಲೇ ಚಿತ್ರೀಕರಣ ಆಗಲಿದೆಯಂತೆ.

  'ಭೀಮ'ನನ್ನ ಆಯ್ಕೆ ಮಾಡಿದ್ದು ದರ್ಶನ್! ದಚ್ಚು ಬಗ್ಗೆ 'ಡ್ಯಾನಿಶ್' ಹೇಳಿದ್ದೇನು?

  ಮೊದಲ ಹಂತದ ಶೂಟಿಂಗ್ ಆಗಿದೆ

  ಮೊದಲ ಹಂತದ ಶೂಟಿಂಗ್ ಆಗಿದೆ

  ಈಗಾಗಲೇ ಕೋಟಿಗೊಬ್ಬ 3 ಚಿತ್ರದ ಮೊದಲ ಹಂತದ ಶೂಟಿಂಗ್ ಆಗಿದೆ. ಈಗ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಎರಡನೇ ಹಂತದ ಶೂಟಿಂಗ್ ನಡೆಯಲಿದ್ದು, ಅದ್ಧೂರಿ ಸೆಟ್ ಹಾಕಲಾಗುತ್ತಿದೆಯಂತೆ. ಶಿವಕಾರ್ತಿಕ್ ಆಕ್ಷನ್ ಹೇಳ್ತಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ.

  ಮಂಡ್ಯದಲ್ಲಿ ಸುಮಲತಾ-ನಿಖಿಲ್ ಸ್ಪರ್ಧೆ: ದರ್ಶನ್, ಸುದೀಪ್, ಯಶ್ ನಿಲುವೇನು?

  ಡ್ಯಾನಿಶ್ ಮೂರನೇ ಸಿನಿಮಾ

  ಡ್ಯಾನಿಶ್ ಮೂರನೇ ಸಿನಿಮಾ

  ಕುರುಕ್ಷೇತ್ರದಲ್ಲಿ ಭೀಮನ ಪಾತ್ರ ಮಾಡಿದ್ದ ಡ್ಯಾನಿಶ್, ಸುನೀಲ್ ಕುಮಾರ್ ದೇಸಾಯಿ ಅವರ ಉದ್ಘರ್ಷ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಆ ಚಿತ್ರವೂ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಬಿಡುಗಡೆಗೆ ಸಜ್ಜಾಗಿದೆ. ಈಗ ಕೋಟಿಗೊಬ್ಬ 3 ಡ್ಯಾನಿಶ್ ಅವರ ಮೂರನೇ ಸಿನಿಮಾ. ಕನ್ನಡ ಸಿನಿಮಾಗಳಲ್ಲಿ ನಟಿಸುವ ಮುಂಚೆ ಡ್ಯಾನಿಶ್ ಹಿಂದಿಯ ಹುನುಮಾನ್ ಧಾರಾವಾಹಿಯಲ್ಲಿ ಆಂಜನೇಯನ ಪಾತ್ರ ಮಾಡುತ್ತಿದ್ದರು.

  ಸುಮಲತಾ ಜೊತೆ ದರ್ಶನ್ ಒಬ್ಬರಿದ್ದಾರೆ ಸಾಕು, ಬೇರೆ ಯಾರೂ ಅಗತ್ಯವಿಲ್ಲ: ಸುದೀಪ್

  English summary
  The small-screen sensation from Bollywood, Danish Akhtar Saifi has joined the team of Kotigobba 3. this actor is played the role of Bheema in Darshan's Kurukshetra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X