»   » 'ಡಿ-ಬಾಸ್' ಅಭಿಮಾನಿಗಳಿಗೆ ಪಂಚಾಮೃತ ಸವಿದಷ್ಟೇ ಸಿಹಿ ಸುದ್ದಿ ಇದು!

'ಡಿ-ಬಾಸ್' ಅಭಿಮಾನಿಗಳಿಗೆ ಪಂಚಾಮೃತ ಸವಿದಷ್ಟೇ ಸಿಹಿ ಸುದ್ದಿ ಇದು!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಯುಗಾದಿ ಹಬ್ಬಕ್ಕಾಗಿ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಯಾಕಂದ್ರೆ, ಯುಗಾದಿ ಹಬ್ಬಕ್ಕೆ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಚಕ್ರವರ್ತಿ' ಟ್ರೈಲರ್ ಬಿಡುಗಡೆಯಾಗುತ್ತಿದೆ.

ಯುಗಾದಿ ಹಬ್ಬ ಮುಗಿದ 16ನೇ ದಿನಕ್ಕೆ ದರ್ಶನ್ ಅಭಿಮಾನಿ ಬಳಗ ಮತ್ತೊಂದು ದೊಡ್ಡ ಹಬ್ಬವನ್ನ ಆಚರಿಸಲು ಸಿದ್ದವಾಗುತ್ತಿದ್ದಾರೆ. ಹೌದು, 'ಚಕ್ರವರ್ತಿ' ಟ್ರೈಲರ್ ನೋಡಿ ಆ ಖುಷಿಯಲ್ಲಿ ತೇಲಾಡುತ್ತಿರುವಾಗಲೇ ಆ ಸಂಭ್ರಮವನ್ನ ಹೆಚ್ಚಿಸಲು ಸಿನಿಮಾನೇ ಬರುತ್ತಿದೆ. ಮುಂದೆ ಓದಿ...[ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]

'ಚಕ್ರವರ್ತಿ' ರಿಲೀಸ್ ಡೇಟ್ ಫಿಕ್ಸ್!

ಸದ್ಯ 'ಚಕ್ರವರ್ತಿ' ಚಿತ್ರದ ಟ್ರೈಲರ್ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಯುಗಾದಿ' ಹಬ್ಬಕ್ಕೆ ಟ್ರೈಲರ್ ಬಿಡುಗಡೆಯಾಗುತ್ತಿದ್ರೆ, ಏಪ್ರಿಲ್ ನಲ್ಲಿ ಸಿನಿಮಾ ತೆರೆಕಾಣುತ್ತಿದೆ.

ಏಪ್ರಿಲ್ 14ಕ್ಕೆ ದರ್ಶನ್ ಎಂಟ್ರಿ!

ಮೂಲಗಳ ಪ್ರಕಾರ ಏಪ್ರಿಲ್ 14 ರಂದು ದರ್ಶನ್ 'ಚಕ್ರವರ್ತಿ' ಬಿಡುಗಡೆಯಾಗಲಿದೆಯಂತೆ. ವಿಶೇಷ ಅಂದ್ರೆ, ಏಪ್ರಿಲ್ 14 ಅಂಬೇಡ್ಕರ್ ಜಯಂತಿ.['ಚಕ್ರವರ್ತಿ' ಅಭಿಮಾನಿಗಳಿಗೆ 'ತ್ರಿಬಲ್' ಧಮಾಕ!]

'ಚಕ್ರವರ್ತಿ' ಚಿತ್ರದ ಸ್ಟೆಷಾಲಿಟಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೀಪಾ ಸನ್ನಿಧಿ ಅಭಿನಯದ ಚಿತ್ರ 'ಚಕ್ರವರ್ತಿ'. ಈ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ, ಆದಿತ್ಯ, ಯಶಸ್ ಸೂರ್ಯ, ದಿನಕರ್ ತೂಗುದೀಪ ಸೇರಿದಂತೆ ದೊಡ್ಡ ಕಲಾವಿದರ ಬಳಗ ಇದೆ. ಈ ಚಿತ್ರಕ್ಕೆ ಚಿಂತನ್ ಆಕ್ಷನ್ ಕಟ್ ಹೇಳಿದ್ದಾರೆ.

ಅಧಿಕೃತ ಘೋಷಣೆ ಮಾತ್ರ ಬಾಕಿ!

ಅಂದ್ಹಾಗೆ, ಚಿತ್ರತಂಡದ ಮೂಲಗಳಿಂದ 'ಚಕ್ರವರ್ತಿ' ಚಿತ್ರದ ರಿಲೀಸ್ ಡೇಟ್ ಖಚಿತವಾಗಿದ್ದರೂ, ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯ, ಟ್ರೈಲರ್ ಸಿದ್ದ ಮಾಡುತ್ತಿರುವ 'ಚಕ್ರವರ್ತಿ' ಟೀಮ್, ಯುಗಾದಿ ಹಬ್ಬದಂದೇ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡುವ ಸಾಧ್ಯತೆಯಿದೆ.[ದರ್ಶನ್ 'ಚಕ್ರವರ್ತಿ' ಬಿಡುಗಡೆ ಡೇಟ್ ಫಿಕ್ಸ್ ಆಯ್ತಾ?]

English summary
According to source Challenging Star Darshan Starrer 'Chakravarthy' is all set to release on the 14th of April. The Movie Dierected by Chinthan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada