»   » ಹಾಲು-ಜೇನಿನಂತಿದ್ದ ಜೋಡಿ 'ಪ್ರೇಮ'ಕ್ಕೆ ಹುಳಿ ಹಿಂಡಿದ ನಟಿಯಾರು?

ಹಾಲು-ಜೇನಿನಂತಿದ್ದ ಜೋಡಿ 'ಪ್ರೇಮ'ಕ್ಕೆ ಹುಳಿ ಹಿಂಡಿದ ನಟಿಯಾರು?

Posted By:
Subscribe to Filmibeat Kannada

ಸಿನಿ ತಾರೆಯರು ನಿಂತರೂ ಸುದ್ದಿ...ಕುಂತರೂ ಸುದ್ದಿ...ಸೆಲೆಬ್ರಿಟಿಗಳು ರೀಲ್ ಮೇಲೆ ಮಾತ್ರವಲ್ಲದೆ ರಿಯಲ್ಲಾಗೂ ಪ್ರೀತಿ, ಪ್ರಣಯ ಅಂತ ಪ್ರೇಮದ ಅಮಲಿನಲ್ಲಿ ತೇಲುತ್ತಿರುತ್ತಾರೋ..ಇಲ್ಲವೋ, ಆದ್ರೆ ಅವರ ಲವ್ವಿ-ಡವ್ವಿ ವಿಷಯ ಮಾತ್ರ ಆಗಾಗ ಎಲ್ಲಾ ಕಡೆ ಸುದ್ದಿಯಾಗುತ್ತಲೇ ಇರುತ್ತದೆ.

ಬೇಕಾದ್ರೆ, ಟಾಲಿವುಡ್ ಬ್ಯೂಟಿ ಸಮಂತಾ ಮತ್ತು ಸಿದ್ಧಾರ್ಥ್ ರನ್ನೇ ತೆಗೆದುಕೊಳ್ಳಿ. ಇಬ್ಬರು ಒಟ್ಟಾಗಿ 'ಜಬರ್ದಸ್ತ್' ಸಿನಿಮಾದಲ್ಲಿ ನಟಿಸಿದ್ದಷ್ಟೇ. ರೀಲ್ ಮೇಲೆ ಮಾತ್ರವಲ್ಲ, ರಿಯಲ್ಲಾಗೂ ಈ ಜೋಡಿ 'ಪ್ರೇಮ ಪಕ್ಷಿಗಳು' ಅಂತ ಎಲ್ಲೆಡೆ ಹಬ್ಬಿಬಿಡ್ತು.

Samantha-Siddharth

ಎಲ್ಲೇ ಹೋದರೂ ಅಂಟಿಕೊಂಡೇ ಓಡಾಡುತ್ತಿದ್ದ ಈ ಜೋಡಿ ಅಂದಿನಿಂದ ಯಾವುದೇ ಗಾಸಿಪ್ ಗಳಿಗೆ ಕ್ಯಾರೆ ಅಂದಿಲ್ಲ. 'ಮೌನಂ ಸಮ್ಮತಿ ಲಕ್ಷಣಂ' ಅಂತಲೇ ಎಲ್ಲರೂ ಭಾವಿಸಿದ್ದರು ಬಿಡಿ. ಹೀಗಿರಬೇಕಾದ್ರೆ, ಕಾಲಿವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ಇಬ್ಬರು ಬ್ರೇಕಪ್ ಅನ್ನುವ ಬ್ರೇಕಿಂಗ್ ನ್ಯೂಸ್ ಬ್ರೇಕ್ ಆಗಿದೆ.

ಸಿದ್ಧಾರ್ಥ್ ಮತ್ತು ಸಮಂತಾ ನಡುವೆ ಈಗೇನಿಲ್ಲ, ಏನೇನೂ ಇಲ್ಲ ಅನ್ನುವ ಅಂತೆ ಕಂತೆಗಳು ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಹರಿದಾಡುತ್ತಿದೆ. ಇನ್ನೇನು ಮದುವೆ ಆಗ್ಬೇಕಿದ್ದ ಈ ಜೋಡಿ, 'ನಾನೊಂದು ತೀರಾ..ನೀನೊಂದು ತೀರಾ' ಅಂತ ಬೇರೆ ಬೇರೆ ಕಡೆ ಮುಖ ಮಾಡಿಕೊಂಡಿದ್ದಾರೆ ಅಂತೆಲ್ಲಾ ಗುಲ್ಲೆದ್ದಿದೆ.

Samantha-Siddharth2

ಈಗ ಇದೇ ಕಂತೆ ಪುರಾಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಾಲು-ಜೇನಿನಂತೆ ಸದಾ ಒಟ್ಟಾಗಿರುತ್ತಿದ್ದ ಸಮಂತಾ ಮತ್ತು ಸಿದ್ಧಾರ್ಥ್ ನಡುವೆ ಮನಸ್ತಾಪ ಮೂಡುವುದಕ್ಕೆ ಕಾರಣ ಓರ್ವ ನಟೀಮಣಿ ಅಂತೆ. ಅದ್ರಲ್ಲೂ ಬೆಂಗಳೂರು ಮೂಲದ ಕನ್ನಡದ ನಟಿ ಅನ್ನುವುದು ನಿಬ್ಬೆರಗಾಗಿಸುವ ಸುದ್ದಿ.

ಅಸಲಿಗೆ, ಸಮಂತಾ ಜೊತೆ ಹಸೆಮಣೆ ಏರಬೇಕಿದ್ದ ಸಿದ್ಧಾರ್ಥ್ ಪ್ರೀತಿಗೆ ಕೊಳ್ಳಿ ಇಟ್ಟಿರುವ ನಟಿ ಯಾರು ಅನ್ನುವ ಪ್ರಶ್ನೆಗೆ ಕಾಲಿವುಡ್ ನ ಗಾಸಿಪ್ ಪಂಡಿತರು ಕಂಡುಕೊಂಡಿರುವ ಉತ್ತರ, ನಟಿ ಕನ್ನಡದ ಕುವರಿ ದೀಪಾ ಸನ್ನಿಧಿ...! [ಸಮಂತಾ ಮನದಲ್ಲಿ ಸಿದ್ದಾರ್ಥ್ ಪ್ರೀತಿ ಹಚ್ಚೆ]

deepa

ಕನ್ನಡದಲ್ಲಿ 'ಸಾರಥಿ', 'ಪರಮಾತ್ಮ', 'ಸಕ್ಕರೆ' ಆದ್ಮೇಲೆ ತಮಿಳಿನಲ್ಲಿ ಸಿದ್ಧಾರ್ಥ್ ಜೊತೆ 'ಎನಕ್ಕುಳ್ ಒರುವನ್' ಚಿತ್ರದಲ್ಲಿ ನಟಿಸುತ್ತಿರುವ ದೀಪಾ ಸನ್ನಿಧಿ, ಪರದೆ ಮೇಲೆ ಮಾತ್ರವಲ್ಲ, ಪರದೆ ಹಿಂದೆ ಕೂಡ ತನ್ನ 'ಹೀರೋ' ಜೊತೆ 'ಕ್ಲೋಸ್' ಆಗಿದ್ದಾರಂತೆ. ಆಗಾಗ ಈ ಜೋಡಿ, ಪಬ್, ಕ್ಲಬ್ ಅಂತ ಔಟಿಂಗ್-ಡೇಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದೆ ಅನ್ನುತ್ತಿವೆ ಸಿದ್ಧಾರ್ಥ್ ಆಪ್ತ ಮೂಲಗಳು.

ಸಿದ್ಧಾರ್ಥ್ ಜೊತೆ ದೀಪಾ 'ಕ್ಲೋಸ್' ಆದ್ಮೇಲೆ ಸಮಂತಾ ನಡುವೆ ಗ್ಯಾಪ್ ಸೃಷ್ಟಿಯಾಗಿದೆ ಅಂತ ಈಗಷ್ಟೇ ಕಾಲಿವುಡ್ ನಲ್ಲಿ ಅಂಬೆಗಾಲಿಡುತ್ತಿರುವ ನಟಿ ದೀಪಾ ಸನ್ನಿಧಿ, ಗಾಸಿಪ್ ಕಾಲಂಗಳಿಗೆ ಆಹಾರವಾಗಿದ್ದಾರೆ.

deepa

ಇದರಲ್ಲಿ ಅದೆಷ್ಟು ಸತ್ಯ-ಮಿಥ್ಯವಿದೆ ಅಂತ ತಾಳೆ ಹಾಕುವ ಬದಲು, ದಿನಕ್ಕೊಂದರಂತೆ ಸಮಂತಾ-ಸಿದ್ಧಾರ್ಥ್ ಬ್ರೇಕಪ್ ಕಥೆ, ಮೆಗಾ ಸೀರಿಯಲ್ ಹಾಗೆ ನಡೆಯುತ್ತಲೇ ಇದೆ. ಬಂದಿರುವ ಸುದ್ದಿಯನ್ನ ಇದ್ದ ಹಾಗೆ ನಾವು ಹೇಳಿದ್ದೀವಿ ಅಷ್ಟೆ. (ಏಜೆನ್ಸೀಸ್)

English summary
Kannada Actress Deepa Sannidhi of Sarathi and Paramathma fame is being quoted by few Kollywood media as the heroine behind Sidd-Samantha Break-up.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada