»   » ನಾಯಕನಟನಿಗೆ ಆಪರೇಷನ್, ಅಲ್ಲೇ ಅಡಗಿದ್ದ ನಾಯಕಿ

ನಾಯಕನಟನಿಗೆ ಆಪರೇಷನ್, ಅಲ್ಲೇ ಅಡಗಿದ್ದ ನಾಯಕಿ

By: ಉದಯರವಿ
Subscribe to Filmibeat Kannada

ಬಾಲಿವುಡ್ ಚಾಕೋಲೆಟ್ ಹೀರೋ ರಣವೀರ್ ಸಿಂಗ್ ಇತ್ತೀಚೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮುಂಬೈನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಅವರ ಭುಜಕ್ಕೆ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿಯಿತು. ಆಸ್ಪತ್ರೆಯಲ್ಲಿದ್ದುಕೊಂಡೇ ತನ್ನ ಬಗ್ಗೆ ಟ್ವಿಟ್ಟರ್ ನಲ್ಲಿ ರಣವೀರ್ ಹಂಚಿಕೊಂಡರು. ಆದರೆ ಒಂದು ವಿಚಾರವನ್ನು ಮಾತ್ರ ಅವರು ಗುಟ್ಟಾಗಿ ಇಟ್ಟಿದ್ದರಂತೆ.

ಶಸ್ತ್ರಚಿಕಿತ್ಸೆ ನಡೆದ ರಾತ್ರಿ 9 ಗಂಟೆಯಿಂದ ಮರುದಿನ ಮಧ್ಯಾಹ್ನದ ರಣವೀರ್ ಆಸ್ಪತ್ರೆಯಿಂದ ಬಿಡುಗಡೆಯಾಗುವ ತನಕ ದೀಪಿಕಾ ಪಡುಕೋಣೆ ಅವರ ಪಕ್ಕದಲ್ಲೇ ಇದ್ದರು ಎಂಬುದು. ರಣವೀರ್ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಆಸ್ಪತ್ರೆ ಹಿಂಬಾಲಿನಿಂದ ನಾಪತ್ತೆಯಾದರು ಎಂಬ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. [ಮದುವೆಗೆ ಮುನ್ನ ಸೆಕ್ಸ್ ನನ್ನಿಷ್ಟ: ದೀಪಿಕಾ ಪಡುಕೋಣೆ]

Deepika stayed by Ranveer Singh's side at hospital

ಆದರೆ ಇವರಿಬ್ಬರೂ ಮಾತ್ರ ಏನೂ ಗೊತ್ತಿಲ್ಲದಂತೆ ಇದ್ದಾರೆ. ಈ ಬಗ್ಗೆ ರಣವೀರ್ ಆಗಲಿ ದೀಪಿಕಾ ಆಗಲಿ ತುಟಿ ಪಿಟಿಕ್ ಎಂದಿಲ್ಲ. ಎರಡು ವರ್ಷಗಳ ಹಿಂದೆ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾಗ ರಣವೀರ್ ಆಸ್ಪತ್ರೆ ಪಾಲಾಗಿದ್ದರು. ಆಗಲೂ ಅವರ ಸನಿಹದಲ್ಲೇ ಇದ್ದು ಸೇವೆ ಮಾಡಿದ್ದರು ದೀಪಿಕಾ ಪಡುಕೋಣೆ.

ರಣವೀರ್ ಸಿಂಗ್ ಇತ್ತೀಚೆಗೆ ಗಾಯಗೊಂಡಿದ್ದು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶಿಸುತ್ತಿರುವ ಐತಿಹಾಸಿಕ ಕಥಾಹಂದರದ 'ಬಾಜೀರಾವ್ ಮಸ್ತಾನಿ' ಚಿತ್ರೀಕರಣದ ಆಕ್ಷನ್ ಸನ್ನಿವೇಶದಲ್ಲಿ. ಜೈಪುರ್ ನಲ್ಲಿ ಶೂಟಿಂಗ್ ನಡೆಯುತ್ತಿರಬೇಕಾದರೆ ಕುದುರೆ ಮೇಲಿಂದ ರಣವೀರ್ ಕೆಳಗೆ ಬಿದ್ದಿದ್ದರು.

ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದೃಷ್ಟವಶಾತ್ ಅವರು ಮೂಳೆಮುರಿತದಿಂದ ಪಾರಾಗಿದ್ದರು. "ಬಡೀ ಬಡೀ ಫಿಲ್ಮೋಂ ಮೇ ಐಸಿ ಛೋಟಿ ಛೋಟಿ ಬಾತೇಂ ಹೋತಿ ರಹಿತಿ ಹೈ" (ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಈ ರೀತಿಯ ಚಿಕ್ಕಚಿಕ್ಕವು ನಡೆಯುತ್ತಿರುತ್ತವೆ) ಎಂದು ಟ್ವೀಟಿಸಿದ್ದರು.

English summary
Deepika Padukone arrived at the hospital on Saturday night and kept watch over Ranveer through the night. Ranveer was discharged on Sunday afternoon, and exited the hospital via the front, posing for the paparazzi on his way out. But girlfriend Deepika, on the other hand, made a quiet slip-out from the back.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada