For Quick Alerts
  ALLOW NOTIFICATIONS  
  For Daily Alerts

  ಹರ್ಷ ನಿರ್ದೇಶನದ 'ರಾಣ' ಚಿತ್ರವನ್ನು ಮಾಡಲ್ಲ ಅಂದ್ರಾ ಯಶ್?

  |

  Recommended Video

  ಹರ್ಷ ನಿರ್ದೇಶನದ 'ರಾಣಾ' ಚಿತ್ರವನ್ನು ಮಾಡಲ್ಲ ಅಂದ್ರಾ ಯಶ್? | FILMIBEAT KANNADA

  ಎಷ್ಟೋ ಬಾರಿ ಸಿನಿಮಾಗಳು ಶುರುವಿಗೆ ಮುಂಚೆ ದೊಡ್ಡ ಸುದ್ದಿ ಮಾಡುತ್ತವೆ. ಆದರೆ, ಏನೋ ಒಂದು ಕಾರಣಕ್ಕೆ ಸಿನಿಮಾ ನಿಂತು ಹೋಗುತ್ತದೆ. ಅದೇ ರೀತಿ ಈಗ 'ರಾಣ' ಸಿನಿಮಾ ಠುಸ್ ಪಟಾಕಿ ಆಗಿದೆ ಎನ್ನವ ಮಾತು ಕೇಳಿ ಬರುತ್ತಿದೆ.

  ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಎ ಹರ್ಷ ಕಾಂಬಿನೇಶನ್ ನಲ್ಲಿ ಬರಬೇಕಿದ್ದ ಸಿನಿಮಾವೇ 'ರಾಣ'. ಈ ಚಿತ್ರ ಯಶ್ ಮುಂಬರುವ ಸಿನಿಮಾಗಳ ಪಟ್ಟಿಯಲ್ಲಿ ಇತ್ತು. ಆದರೆ, ಇದೀಗ ಈ ಸಿನಿಮಾ ಶುರು ಆಗುವುದೇ ಅನುಮಾನವಾಗಿದೆ.

  'ಸೀತಾರಾಮ ಕಲ್ಯಾಣ' ರೀಮೇಕ್ ? : ಪತ್ರಕರ್ತೆ ಪ್ರಶ್ನೆಗೆ ಹರ್ಷ ತಬ್ಬಿಬ್ಬು! 'ಸೀತಾರಾಮ ಕಲ್ಯಾಣ' ರೀಮೇಕ್ ? : ಪತ್ರಕರ್ತೆ ಪ್ರಶ್ನೆಗೆ ಹರ್ಷ ತಬ್ಬಿಬ್ಬು!

  ಈ ಚಿತ್ರದ ಮೂಲಕ ಮೊದಲ ಬಾರಿಗೆ ಯಶ್ ಗೆ ಹರ್ಷ ನಿರ್ದೇಶನ ಮಾಡಬೇಕಿತ್ತು. ಸಿನಿಮಾದ ಫ್ಯಾನ್ ಮೇಡ್ ಪೋಸ್ಟರ್ ಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇಷ್ಟೆಲ್ಲಾ ಆಗಿದ್ದರು, ಈ ಸಿನಿಮಾವನ್ನು ಯಶ್ ಮಾಡುತ್ತಿಲ್ಲ ಎಂಬ ಗುಸು ಗುಸು ಇದೀಗ ಹರಿದಾಡಿದೆ. ಹಾಗಿದ್ದರೆ, ಅದಕ್ಕೆ ಕಾರಣಗಳು ಏನಿರಬಹುದು ಎಂಬ ಪ್ರಶ್ನೆ ಮೂಡಿದೆ. ಮುಂದೆ ಓದಿ..

  'ಸೀತಾರಾಮ ಕಲ್ಯಾಣ' ಎಫೆಕ್ಟ್

  'ಸೀತಾರಾಮ ಕಲ್ಯಾಣ' ಎಫೆಕ್ಟ್

  ಹರ್ಷ ನಿರ್ದೇಶನದಲ್ಲಿ ಬಂದ 'ಸೀತಾರಾಮ ಕಲ್ಯಾಣ' ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಬಿಡುಗಡೆಗೆ ಮೊದಲ ಕೊಂಚ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ರಿಲೀಸ್ ಬಳಿಕ ಅನೇಕರಿಗೆ ನಿರಾಸೆ ಮಾಡಿತು. ಅಲ್ಲದೆ, ಈ ಸಿನಿಮಾ ತೆಲುಗಿನ 'ರರಾಂಡೋಯ್ ವೇಡುಕ ಚೂದ್ದಂ' ಚಿತ್ರದ ಅನೇಕ ದೃಶ್ಯಗಳಿಗೆ ಹೋಲುತಿದೆ ಎಂಬ ದೂರ ಕೂಡ ಬಂದಿತ್ತು.

  'ಕೆಜಿಎಫ್' ಸೃಷ್ಟಿಸಿದ ಮೈಲಿಗಲ್ಲು

  'ಕೆಜಿಎಫ್' ಸೃಷ್ಟಿಸಿದ ಮೈಲಿಗಲ್ಲು

  'ಕೆಜಿಎಫ್' ಸಿನಿಮಾ ಬಳಿಕ ಯಶ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಬದಲಾಗಿವೆ. ಒಂದು ದೊಡ್ಡ ಸಿನಿಮಾ ನೀಡಿದ ನಂತರ ಅದಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಭಾವನೆ ಯಶ್ ಆವರದ್ದಾಗಿರಬಹುದು. ಸಿನಿಮಾದಿಂದ ಸಿನಿಮಾಗೆ ಎತ್ತರಕ್ಕೆ ಹೋಗುವುದು ಕಲಾವಿದನ ಆಸೆ ಆಗಿರುತ್ತದೆ ಕೂಡ. ಆ ಕಾರಣ 'ರಾಣ' ಬಗ್ಗೆ ಯಶ್ ಗೆ ಮನಸ್ಸು ಇಲ್ಲದೆ ಇರಬಹುದು.

  'ರಾಣ' ಆಗ್ತಾರಾ ಶಿವಣ್ಣ

  'ರಾಣ' ಆಗ್ತಾರಾ ಶಿವಣ್ಣ

  ಯಶ್ ನಿರಾಕರಿಸಿದ 'ರಾಣ' ಸಿನಿಮಾಗೆ ಶಿವರಾಜ್ ಕುಮಾರ್ ದಿಕ್ಕು ತೋರಿಸುತ್ತಾರ ಎನ್ನುವ ಕುತೂಹಲ ಮತ್ತೊಂದು ಕಡೆ ಇದೆ. ಶಿವರಾಜ್ ಕುಮಾರ್ ಜೊತೆಗೆ ಹರ್ಷ ಎರಡು ಸಿನಿಮಾಗಳನ್ನು ಮಾಡಿದ್ದು, 'ರಾಣ' ಹ್ಯಾಟ್ರಿಕ್ ಚಿತ್ರ ಆಗುತ್ತದೆ ಎಂಬ ಸುದ್ದಿ ಇದೆ.

  ಹರ್ಷ 9ನೇ ಸಿನಿಮಾ

  ಹರ್ಷ 9ನೇ ಸಿನಿಮಾ

  'ರಾಣ' ಎ ಹರ್ಷ ನಿರ್ದೇಶನದ 9ನೇ ಸಿನಿಮಾವಾಗಿದೆ. 'ಗೆಳೆಯ' ಸಿನಿಮಾ ಮೂಲಕ ನೃತ್ಯ ನಿರ್ದೇಶಕ ಹರ್ಷ ಡೈರೆಕ್ಟರ್ ಆದರು. 'ಬಿರುಗಾಳಿ', 'ಚಿಂಗಾರಿ', 'ಭಜರಂಗಿ', 'ವಜ್ರಕಾಯ', 'ಮಾರುತಿ 800', 'ಅಂಜನೀಪುತ್ರ' ಹಾಗೂ 'ಸೀತಾರಾಮ ಕಲ್ಯಾಣ' ಹರ್ಷ ನಿರ್ದೇಶನದ ಸಿನಿಮಾವಾಗಿವೆ.

  English summary
  Did actor Yash reject director A Harsha's 'Raana' kannada movie.
  Tuesday, February 12, 2019, 15:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X