»   » ಕೋಡಿ ಚಿತ್ರದಲ್ಲಿ ದೂದ್ ಪೇಡಾ ದಿಗಂತ್ ಕಾಯಕ?

ಕೋಡಿ ಚಿತ್ರದಲ್ಲಿ ದೂದ್ ಪೇಡಾ ದಿಗಂತ್ ಕಾಯಕ?

Posted By:
Subscribe to Filmibeat Kannada

ದೂದ್ ಪೇಡಾ ದಿಗಂತ್ ಈಗ 'ರಾಕ್ ಸಿಂಗರ್' ಆಗಿದ್ದಾರೆ. ಇತ್ತೀಚಿನವರೆಗೂ, ಅವರು ಸಂಗೀತ ಕಲಿಯುತ್ತಿರುವ ಸುದ್ದಿಯೇ ಇರಲಿಲ್ಲವಲ್ಲ ಎಂದು ಗಾಬರಿಯಾಗಬೇಡಿ. ಅವರು ರಾಕ್ ಸಂಗೀತಗಾರ ಆಗಿರುವುದು ಕೋಡಿ ರಾಮಕೃಷ್ಣ ನಿರ್ದೇಶನದ ಚಿತ್ರೀಕರಣ ಹಂತದಲ್ಲಿರುವ ಇನ್ನೂ ಹೆಸರಿಡದ ಕನ್ನಡದ ಹೊಸ ಚಿತ್ರದಲ್ಲಿ.

ಈ ರಾಕ್ ಆರ್ಟಿಸ್ಟ್ ಗೆ ಚಿತ್ರದಲ್ಲಿ ಜೋಡಿಯಾಗಿರುವುದು ಕನ್ನಡದ ಗೋಲ್ಡನ್ ಗರ್ಲ್ ರಮ್ಯಾ. ರಮ್ಯಾ ಇತ್ತೀಚಿಗೆ ಅಳೆದು, ತೂಗಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರ 'ಅರುಂಧತಿ'ಯನ್ನು ನಿರ್ದೇಶಿಸಿದ್ದ ಕೋಡಿ ರಾಮಕೃಷ್ಣ ಚಿತ್ರವಾದರೂ ರಮ್ಯಾ ತಕ್ಷಣಕ್ಕೆ ಒಪ್ಪಿಕೊಂಡಿರಲಿಲ್ಲ. ಕಥೆ ಕೇಳಿ, ತಮ್ಮ ಪಾತ್ರದ ಸಂಪೂರ್ಣ ವಿವರ ಪಡೆದ ಮೇಲಷ್ಟೇ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ 'ಮೀರಾ ಮಾಧವ ರಾಘವ' ನಂತರ ರಮ್ಯಾ, ದಿಗಂತ್ ಗೆ ಮತ್ತೆ ಜೊತೆಯಾಗಿದ್ದಾರೆ.

ಇದೀಗ ಚಿತ್ರತಂಡವು ಶೂಟಿಂಗ್ ನಲ್ಲಿ ನಿರತವಾಗಿದೆ. ಚಿತ್ರದಲ್ಲಿ ದಿಗಂತ್ ರಾಕ್ ಸಂಗೀತಗಾರರಾಗಿ ಭಾರಿ ರಾಕ್ ಸಂಗೀತದ ಸುಧೆ ಹರಿಸಲಿದ್ದಾರಾ ಅಥವಾ ಗಿಟಾರ್ ಹಿಡಿದುಕೊಂಡು ಸುತ್ತುತ್ತಿರುತ್ತಾರಾ ಎಂಬ ಪ್ರಶ್ನೆ ಕೆಲವರದು. ಈ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲವಾದರೂ, ದಿಗಂತ್ ಈ ಚಿತ್ರಕ್ಕಾಗಿ ಉದ್ದ ಕೂದಲು ಬಟ್ಟಿದ್ದಾರೆ, ಸಂಗೀತಗಾರನ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ ಎಂಬುದಂತೂ ಸತ್ಯ. ಅದೇ ಪಾತ್ರವೆಂದ ಮೇಲೆ ಸಂಗೀತ ಖಂಡಿತವಾಗಿಯೂ ಇರಲೇಬೇಕು!

ಇತ್ತೀಚಿಗೆ ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ನಾಯಕತ್ವದಲ್ಲಿ 'ರಾಕ್ ಸ್ಟಾರ್' ಚಿತ್ರ ತೆರೆಗೆ ಬಂದಿತ್ತು. ಅದರಲ್ಲಿ ರಣಬೀರ್ ಕಪೂರ್ ಗೆಟಪ್ ಹಾಗೂ ಪಾತ್ರ ಏನಿದೆಯೋ ಅದನ್ನೇ ಕೋಡಿ ನಿರ್ದೇಶನದ ಚಿತ್ರದಲ್ಲಿ ದಿಗಂತ್ ಅಳವಡಿಸಿಕೊಂಡಿದ್ದಾರೆ. ಈ ಬಗ್ಗೆ ಎದುರಾದ ಪ್ರಶ್ನೆಗೆ ದಿಗಂತ್, "ಇದು ರಾಕ್ ಸ್ಟಾರ್ ರೀಮೇಕ್ ಅಥವಾ ನಕಲು ಅಲ್ಲ" ಎಂದು ಸ್ಪಷ್ಟವಾಗಿ ಉತ್ತರಿಸಿದ್ದಾರೆ.

ಬೆಂಗಳೂರಿನ ಹುಡುಗನೊಬ್ಬ ರಾಕ್ ಬ್ಯಾಂಡ್ ಕಟ್ಟಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಂಗೀತಗಾರನ ಪಾತ್ರ ದಿಗಂತ್ ಅವರದು. ಕನ್ನಡದಲ್ಲಿ ಈ ಮೊದಲು ಬಂದ 'ಕಾರಂಜಿ' ಎಂಬ ಚಿತ್ರದಲ್ಲಿ ಇದೇ ರೀತಿಯ ಪಾತ್ರವಿತ್ತು. ಆದರೆ ಕೋಡಿ ರಾಮಕೃಷ್ಣ ಅವರ ಚಿತ್ರದಲ್ಲಿ ಈ ಪಾತ್ರದ ಮೂಲಕ ಯಾವ ರೀತಿಯ ಕಥೆ ಪ್ರೇಕ್ಷಕರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ರಮ್ಯಾ ಪಾತ್ರದ ಬಗ್ಗೆ ಮಾಹಿತಿ ರಸಹ್ಯವಾಗಿದೆ. (ಒನ್ ಇಂಡಿಯಾ ಕನ್ನಡ)

English summary
Kannada actor Diganth is acting in Rock Star role at famous Telugu director Kodi Ramakrishna's upcoming movie. Golden Girl Ramya is heroine for Diganth in this movie. Now, this movie is under shooting. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada