For Quick Alerts
  ALLOW NOTIFICATIONS  
  For Daily Alerts

  ಕರಾವಳಿ ಸುಂದರಿ ಕೃತಿ ಶೆಟ್ಟಿ ವಿರುದ್ಧ ಗರಂ ಆಗಿದ್ದೇಕೆ ನಿರ್ದೇಶಕರು?

  |

  ಕರಾವಳಿ ಸುಂದರಿ, ತೆಲುಗು ನಟಿ ಕೃತಿ ಶೆಟ್ಟಿ ವಿರುದ್ಧ ನಿರ್ದೇಶಕರು ಗರಂ ಆಗಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಗುಲ್ಲಾಗಿದೆ. ಮೊದಲ ಸಿನಿಮಾದಲ್ಲೇ ಸಂಚಲನ ಸೃಷ್ಟಿ ಮಾಡಿರುವ ನಟಿ ಕೃತಿ ಈಗ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಉಪ್ಪೇನಾ ಸಿನಿಮಾ ಮೂಲಕ ತೆಲುಗು ಮಾತ್ರವಲ್ಲದೇ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಕೃತಿ ಈಗ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕೃತಿ ಸದ್ಯ ತೆಲುಗು ನಟ ರಾಮ್ ಪೋತಿನೇನಿ ನಟನೆಯ 19ನೇ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಗಟ್ಟಿಮೇಳ' ನಟಿ ನಿಶಾ ಹೊಸ ಧಾರಾವಾಹಿಯಲ್ಲಿ ಕೃತಿ ಶೆಟ್ಟಿ: ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ'ಗಟ್ಟಿಮೇಳ' ನಟಿ ನಿಶಾ ಹೊಸ ಧಾರಾವಾಹಿಯಲ್ಲಿ ಕೃತಿ ಶೆಟ್ಟಿ: ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

  ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ತೆಲುಗು ನಿರ್ದೇಶಕ ಲಿಂಗುಸಾಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಚಿತ್ರದ ಕೃತಿ ಶೆಟ್ಟಿ ಮತ್ತು ಹಿರಿಯ ನಟ ನಾಸರ್ ನಡುವಿನ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಇದೊಂದು ಭಾವನಾತ್ಮಕ ದೃಶ್ಯವಾಗಿದೆಯಂತೆ. ಆದರೆ ಕೃತಿ ಈ ಭಾವನಾತ್ಮಕ ದೃಶ್ಯದಲ್ಲಿ ಸರಿಯಾದ ಭಾವನೆ ಮತ್ತು ಅಭಿವ್ಯಕ್ತ ಪಡಿಸಲು ಸಾಧ್ಯವಾಗಲಿಲ್ಲವಂತೆ. ಅಲ್ಲದೆ ಒಂದು ಗಂಟೆಗೂ ಅಧಿಕ ಸಮಯ ಈ ದೃಶ್ಯಕ್ಕಾಗಿ ತೆಗೆದುಕೊಂಡಿದ್ದು, ರೀಟೇಕ್ ಮೇಲೆ ರೀಟೇಕ್ ತೆಗೆದುಕೊಳ್ಳುತ್ತಿದ್ದಂತೆ.

  ಆದರೆ ಕೃತಿಯ ರೀಟೇಕ್ ಹಿರಿಯ ನಟ ನಾಸರ್ ಅವರಿಗೆ ಕಿರಿಕಿರಿ ಉಂಟು ಮಾಡಿದೆ. ಒಂದು ದೃಶ್ಯಕ್ಕೆ ತುಂಬಾ ಸಮಯ ತೆಗೆದುಕೊಂಡಿದ್ದರಿಂದ ನಾಸರ್ ಅವರಿಗೆ ಹಿಂಸೆ ಆಗುತ್ತಿರುವುದನ್ನು ಗಮನಿಸಿ ತಾಳ್ಮೆ ಕಳೆದುಕೊಂಡ ನಿರ್ದೇಶಕ ಲಿಂಗುಸಾಮಿ, ಚಿತ್ರೀಕರಣ ಸೆಟ್‌ನಲ್ಲಿ ಕೂಗಾಡಿದ್ದಾರಂತೆ. ಎಲ್ಲರ ಮುಂದೆ ಕೃತಿ ವಿರುದ್ಧ ಸಿಡಿದೆದ್ದಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

  ಆದರೆ ಈ ಬಗ್ಗೆ ನಿರ್ದೇಶಕ ಲಿಂಗುಸಾಮಿ ಅಥವಾ ಕೃತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ನಿರ್ದೇಶಕರು ಗರಂ ಆದ ವಿಚಾರ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ರಾಮ್ ಪೋತಿನೇನಿ ನಟನೆಯ ಈ ಸಿನಿಮಾದಲ್ಲಿ ವಿಲನ್ ಆಗಿ ಆದಿ ಪಿಣಿಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿದೆ ಸಿನಿಮಾತಂಡ. ಕೊರೊನಾ ಕಾರಣದಿಂದ ಬ್ರೇಕ್ ನೀಡಿ ಮತ್ತೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದೆ ತಂಡ.

  Director lingusamy upsets on Krithi Shetty because of takes after retakes

  ಅಂದಹಾಗೆ ಕೃತಿ ಶೆಟ್ಟಿ ಇತ್ತೀಚಿಗಷ್ಟೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡಿದ್ದರು. ಝೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ಯಮಂತ ಧಾರಾವಾಹಿಯ ಪ್ರೋಮೋದಲ್ಲಿ ಕೃತಿ ನಟಿಸಿದ್ದಾರೆ. ಈ ಧಾರಾವಾಹಿಯಲ್ಲಿ ಕನ್ನಡದ ನಟ ನಿಶಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರೂ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಈ ಧಾರಾವಾಹಿಯ ಪ್ರಮೋಷನ್‌ನಲ್ಲಿ ಕಾಣಿಸಿಕೊಂಡಿರುವ ಕೃತಿ ಪುಟ್ಟ ಪ್ರೋಮೋದಲ್ಲಿ ನಟಿಸಲು ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿಯೂ ಇದೆ. ಕೃತಿ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ತೆಲುಗಿನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹೊಂದಿರುವ ಕೃತಿ ತನ್ನ ಸಿನಿಮಾಗಿಂತ ಹೆಚ್ಚಿನ ಸಂಭಾವನೆ ಜೀಬಿಗಿಳಿಸಿರುವುದು ಅಚ್ಚರಿ ಮೂಡಿಸಿದೆ.

  ಉಪ್ಪೇನಾ ಸೂಪರ್ ಸಕ್ಸಸ್ ಬಳಿಕ ಬಾರಿ ಬೇಡಿಕೆ ಸೃಷ್ಟಿಸಿಕೊಂಡಿರುವ ಕೃತಿ ಈಗಾಗಲೇ ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾವನ್ನು ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಜೊತೆ ನಟಿ ಸಾಯಿ ಪಲ್ಲವಿ ಕೂಡ ನಟಿಸಿದ್ದಾರೆ. ಇಬ್ಬರು ಬೇಡಿಕೆಯ ನಟಿಯರಿರುವ ಶ್ಯಾಮ್ ಸಿಂಗ ರಾಯ್ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Telugu Director Lingusamy upset on Krithi Shetty because of takes after retakes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X