»   » ಇನ್ನೊಂದು ಎಡವಟ್ಟು ಮಾಡಿಕೊಂಡ ಓಂಪ್ರಕಾಶ್ ರಾವ್

ಇನ್ನೊಂದು ಎಡವಟ್ಟು ಮಾಡಿಕೊಂಡ ಓಂಪ್ರಕಾಶ್ ರಾವ್

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ಡ್ ನ ಸದಾ ವಿವಾದಗಳಲ್ಲೇ ಸುದ್ದಿಯಲ್ಲಿರೋ ನಿರ್ದೇಶಕ ಅಂದ್ರೆ ಓಂಪ್ರಕಾಶ್ ರಾವ್. ಈಗ ಧರ್ಮಲಿಂಗಂ ಅನ್ನೋರಿಗೆ ಧರ್ಮಕ್ಕೆ ಮುಂಡಾಮೋಚಿದ್ದಾರೆ ಅನ್ನೋ ಸುದ್ದಿ ಸುಳಿದಾಡ್ತಿದೆ. ಓಂಪ್ರಕಾಶ್ ರಾವ್ ರ ಮತ್ತೊಂದು ಎಡವಟ್ಟು ಪುರಾಣ ಶುರುವಾಗೋದು ಮತ್ತೊಬ್ಬರಿಗೆ ಯಾಮಾರಿಸೋ ಮೂಲಕ.

2012ರಲ್ಲೇ ಧರ್ಮಲಿಂಗಂ ಅನ್ನೋ ನಿರ್ಮಾಪಕರಿಂದ ರು.50 ಲಕ್ಷ ಹಣ ಪಡೆದಿರೋ ಓಂಪ್ರಕಾಶ್ ರಾವ್ ಮೂರು ವರ್ಷಗಳಾಗ್ತಾ ಬಂದ್ರೂ ಸಿನಿಮಾ ಮಾಡಿಲ್ಲವಂತೆ. ಹಣವನ್ನಾದ್ರೂ ವಾಪಾಸು ಕೊಡಿ ಅಂದ್ರೆ ಅದನ್ನೂ ವಾಪಾಸು ಮಾಡಿಲ್ಲವಂತೆ.

ಇನ್ನು ಮೊದಲಿಗೆ ರಾಕ್ ಲೈನ್ ವೆಂಕಟೇಶ್ ರನ್ನ ನಾಯಕನನ್ನಾಗಿ ಮಾಡಿಕೊಂಡು ಸಿನಿಮಾ ಮಾಡ್ತೀವಿ ಅಂತ ಒಂದಷ್ಟು ಲಕ್ಷ ಪಡೆದಿದ್ದ ಓಂಪ್ರಕಾಶ್ ರಾವ್ ಆದಿತ್ಯನನ್ನ ಹೀರೋ ಮಾಡಿ 'ಒನ್' ಅನ್ನೋ ಸಿನಿಮಾ ಮಾಡ್ತೀನಿ ಅದೇ ನಿಮ್ಮ ಬಜೆಟ್ ನ ಸಿನಿಮಾ, ರಾಗಿಣಿ ಹೀರೋಯಿನ್ ಆದಿತ್ಯ ಹೀರೋ ಅಂತ ಬೂಕಾಳಿ ಬಿಟ್ರಂತೆ.

Director Om Prakash Rao again lands in controversy

ಈ ಕಥೆ ಹೇಳಿ ರು.50 ಲಕ್ಷ ಕಾಸು ತೊಗೊಳ್ಳೋದು ಮಾತ್ರವಲ್ಲ ಮನರಂಜನಾ ವಾಹಿನಿಯೊಂದರಿಂದ ರು.75 ಲಕ್ಷ ಹಣ ಪಡೆದು ಸ್ಯಾಟಲೈಟ್ ರೈಟ್ಸ್ ಕೂಡ ಮಾರಿಕೊಂಡಿದ್ದಾರೆ. ಈಗ ಮನರಂಜನಾ ವಾಹಿನಿಯವರು ಸಿನಿಮಾ ನೀಡದೇ ಇರೋ ಕಾರಣಕ್ಕೆ ನಿರ್ಮಾಪಕರಿಗೆ ನೋಟೀಸ್ ಕಳಿಸೋ ನಿರ್ಧಾರಕ್ಕೆ ಬಂದಿದ್ದಾರಂತೆ. [ಸ್ಯಾಂಡಲ್ ವುಡ್ ನಲ್ಲಿ ಕೈ ಬಿಡೋರೇ ಜಾಸ್ತಿ]

ಅತ್ತ ರು.50 ಲಕ್ಷ ಕೊಟ್ಟು ಸಿನಿಮಾವನ್ನೂ ಮಾಡದೆ ಅದರಿಂದ ಒಂದು ರುಪಾಯಿಯೂ ತಿರುಗಿ ಬಾರದೇ ಇತ್ತ ನಿರ್ಮಾಪಕ ಅನ್ನಿಸಿಕೊಂಡು ಸ್ಯಾಟಲೈಟ್ ರೈಟ್ಸ್ ವಿಷಯಕ್ಕೆ ನೊಟೀಸ್ ಪಡೀತಿರೋ ನಿರ್ಮಾಪಕ ಧರ್ಮಲಿಂಗಂಗೆ ಇದ್ಯಾವ ಧರ್ಮ ಸಂಕಟ ಅಂತ ಬೇಸರವಾಗಿದೆ.

ಇದೆಲ್ಲದ್ರ ನಡುವೆ ಒಂದೆರೆಡು ಬಾರಿ ಸಂಧಾನ ಮಾತುಕಥೆಯನ್ನೂ ಮಾಡಿಕೊಂಡಿರೋ ಓಂ ಪ್ರಕಾಶ್ ರಾವ್ ಭಾರೀ ತೊಂದರೆಯಲ್ಲಿದ್ದೀನಿ ಅಂತ ಗೋಗರೆದು ನಿರ್ಮಾಪಕರಿಂದ ತಪ್ಪಿಸಿಕೊಂಡಿದ್ದಾರಂತೆ.

ಆದ್ರೆ ಅಸಲಿ ವಿಷಯ ಅಂದ್ರೆ ಕೋಟಿ ಕೋಟಿ ಲೂಟಿ ಮಾಡಿರೋ ಓಂಪ್ರಕಾಶ್ ರಾವ್ ಈಗ ಸೈಲೆಂಟಾಗಿ ಆ ದುಡ್ಡಲ್ಲಿ ಬಂಗಲೆ ಕಟ್ಟಿಕೊಂಡು ಚಳಿಗಾಲ ಅಂತ ಸಿನಿಮಾವನ್ನೂ ಮಾಡದೇ ಕಂಬಳು ಹೊದ್ದು ಮಲಗಿದ್ದಾರೆ ಅಂತಿದ್ದಾರೆ ನಿರ್ಮಾಪಕರು ಧರ್ಮಲಿಂಗಂ. ಈ ಆರೋಪಕ್ಕೆ ಓಂಪ್ರಕಾಶ್ ರಾವ್ ಅವರೇ ಉತ್ತರ ಕೊಡಬೇಕು. ಆದ್ರೆ ನಿರ್ಮಾಪಕರು ಅಡಕತ್ತರಿಯಲ್ಲಿ ಸಿಕ್ಕಿ ಒದ್ದಾಡ್ತಿರೋದಂತೂ ನಿಜ ಅನ್ನುತ್ತಿದೆ ಗಾಂಧಿನಗರ.

English summary
It seems that controversy and Om Prakash Rao simply cannot live without each other. The controversal director Om Prakash Rao again lands in controversy. This time producer Dharma Lingam alleging that the director cheated him worth of Rs 50 lakhs by promising to direct a film in his banner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada