For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ ಹುಡ್ಗ' ಚಿತ್ರದ ಬಗ್ಗೆ ಕೇಳಿಬಂದಿರುವ ಹೊಸ ಗಾಸಿಪ್ ಇದೇ...

  By Harshitha
  |

  ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್ ಅಭಿನಯದ ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡ್ಗ' ಚಿತ್ರ ಸೆಪ್ಟೆಂಬರ್ 30 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

  ''ಎಲ್ಲೆಡೆ 'ದೊಡ್ಮನೆ ಹುಡ್ಗ'ನ ಹವಾ ಬಲು ಜೋರು ಗುರು'' ಅಂತಿರೋವಾಗಲೇ, ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಇದೇ ಚಿತ್ರದ ಸಲುವಾಗಿ ಹೊಸ ಗಾಸಿಪ್ ಹರಿದಾಡುತ್ತಿದೆ.

  ಆ ಗಾಸಿಪ್ ಕುರಿತ ಕಂಪ್ಲೀಟ್ ಡೀಟೇಲ್ಸ್ ನ ನಾವ್ ಹೇಳ್ತೀವಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  ಏನು ಆ ಗಾಸಿಪ್?

  ಏನು ಆ ಗಾಸಿಪ್?

  ಕನ್ನಡದ 'ದೊಡ್ಮನೆ ಹುಡ್ಗ' ಚಿತ್ರ ತೆಲುಗು ಭಾಷೆಗೆ ರೀಮೇಕ್ ಆಗಲಿದ್ಯಂತೆ. ಗಾಂಧಿನಗರದ ಅಂಗಳದಲ್ಲಿ ಸದ್ಯ ಹರಿದಾಡುತ್ತಿರುವ ಸುದ್ದಿ ಇದೇ.! ['ದೊಡ್ಮನೆ ಹುಡ್ಗ' ಯಾವಾಗ ತೆರೆಗೆ ಬರುತ್ತೆ ಗೊತ್ತಾಯ್ತಾ?]

  ಸಿನಿಮಾ ರಿಲೀಸ್ ಗೂ ಮುನ್ನವೇ ರೀಮೇಕ್.!

  ಸಿನಿಮಾ ರಿಲೀಸ್ ಗೂ ಮುನ್ನವೇ ರೀಮೇಕ್.!

  ಅಚ್ಚರಿ ಅಂದ್ರೆ ಇದೇ ನೋಡಿ, 'ದೊಡ್ಮನೆ ಹುಡ್ಗ' ಚಿತ್ರ ಇನ್ನೂ ಬಿಡುಗಡೆ ಆಗಿಲ್ಲ. ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಅಂತ ತಿಳಿದುಕೊಳ್ಳುವ ಮೊದಲೇ ತೆಲುಗಿನ ಕೆಲ ನಿರ್ಮಾಪಕರು 'ದೊಡ್ಮನೆ ಹುಡ್ಗ' ರೀಮೇಕ್ ರೈಟ್ಸ್ ಪಡೆಯಲು ಕ್ಯೂ ನಿಂತಿದ್ದಾರಂತೆ.

  ರೀಮೇಕ್ ಆದ್ರೆ ಅಲ್ಲಿ ಹೀರೋ ಯಾರು?

  ರೀಮೇಕ್ ಆದ್ರೆ ಅಲ್ಲಿ ಹೀರೋ ಯಾರು?

  ಸದ್ಯ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ, ತೆಲುಗು ಭಾಷೆಗೆ 'ದೊಡ್ಮನೆ ಹುಡ್ಗ' ರೀಮೇಕ್ ಆದರೆ, ಇಲ್ಲಿ ಪುನೀತ್ ರಾಜ್ ಕುಮಾರ್ ನಿರ್ವಹಿಸಿರುವ ಪಾತ್ರವನ್ನ ಅಲ್ಲಿ ಅಲ್ಲು ಅರ್ಜುನ್ ನಿಭಾಯಿಸಲಿದ್ದಾರಂತೆ.

  ಅಂಬರೀಶ್ ಪಾತ್ರಕ್ಕೆ?

  ಅಂಬರೀಶ್ ಪಾತ್ರಕ್ಕೆ?

  ಅಲ್ಲು ಅರ್ಜುನ್ ತಂದೆ ಪಾತ್ರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಕರೆತಂದ್ರೆ ಹೇಗೆ ಎಂಬ ಐಡಿಯಾ ಕೆಲ ನಿರ್ಮಾಪಕರಿಗೆ ಹೊಳೆದಿದೆ.

  ಅಫೀಶಿಯಲ್ ಕನ್ ಫರ್ಮೇಷನ್ ಇಲ್ಲ!

  ಅಫೀಶಿಯಲ್ ಕನ್ ಫರ್ಮೇಷನ್ ಇಲ್ಲ!

  'ದೊಡ್ಮನೆ ಹುಡ್ಗ' ರೀಮೇಕ್ ಬಗ್ಗೆ ಸದ್ಯ ಸುದ್ದಿಗಳು ಹರಿದಾಡುತ್ತಿದ್ದರೂ ನಿರ್ದೇಶಕ ಸೂರಿ ಮಾತ್ರ ಈ ಬಗ್ಗೆ ತುಟಿ ಎರಡು ಮಾಡಿಲ್ಲ.

  English summary
  According to the Grapevine, Kannada Movie 'Dodmane Huduga' remake rights are in demand in Tollywood. Few Telugu Producers wants to cast Allu Arjun and Chiranjeevi in lead in the telugu remake version of 'Dodmane Huduga'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X