For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಹೊಸ ಸಿನಿಮಾದಲ್ಲಿ ಇನ್ನಿಬ್ಬರು ಸ್ಟಾರ್ ನಟರು

  |

  ಭಾರತದ ಬಿಗ್ಗೆಸ್ಟ್ ಸೂಪರ್‌ ಸ್ಟಾರ್‌ಗಳ ಪಟ್ಟಿಯಲ್ಲಿ ಪ್ರಭಾಸ್ ಹೆಸರು ಸೇರಿದೆ. 'ಬಾಹುಬಲಿ' ಬಳಿಕ ಪ್ರಭಾಸ್ ಬಾಲಿವುಡ್‌ನ ಖಾನ್‌ಗಳ ಸ್ಟಾರ್‌ಗಿರಿಯನ್ನೂ ಹಿಂದಿಕ್ಕುವ ಮಟ್ಟಕ್ಕೆ ಏರಿದ್ದಾರೆ.

  ಇದೀಗ ಪ್ರಭಾಸ್ ಒಟ್ಟೊಟ್ಟಿಗೆ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್', ಓಂ ರಾವತ್ ನಿರ್ದೇಶನದ 'ಆದಿಪುರುಷ್' ಸಂದೀಪ್ ವಂಗ ನಿರ್ದೇಶನದ 'ಸ್ಪಿರಿಟ್' ಇದರ ಜೊತೆಗೆ ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ.

  ನಾಗ್ ಅಶ್ವಿನ್ ಅಂತೂ ಪ್ರಭಾಸ್‌ಗಾಗಿ ಬಹಳ ಭಿನ್ನವಾದ ಕತೆಯನ್ನು ಹೆಣೆದಿದ್ದು ಪೌರಾಣಿಕ ಹಾಗೂ ಭವಿಷ್ಯ ಎರಡೂ ರೀತಿಯ ಕತೆಯನ್ನು ಸಿನಿಮಾ ಒಳಗೊಂಡಿರಲಿದೆ. ಸಿನಿಮಾದಲ್ಲಿ ಪ್ರಭಾಸ್ ಎರಡು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಇನ್ನೂ ಹಲವು ಸ್ಟಾರ್‌ಗಳು ಇರಲಿದ್ದಾರೆ. ನಟಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರುಗಳ ಜೊತೆಗೆ ಇನ್ನಿಬ್ಬರು ಸ್ಟಾರ್‌ಗಳು ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ.

  ಪ್ರಭಾಸ್-ನಾಗ್ ಅಶ್ವಿನ್ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರ ಎಂಟ್ರಿ ಆಗಿದೆ. ಅವರೇ ಮಲಯಾಳಂನ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹಾಗೂ ತಮಿಳಿನ ಸ್ಟಾರ್ ನಟ ಸೂರ್ಯ. ಈ ಇಬ್ಬರೂ ಸಹ ಪ್ರಭಾಸ್-ನಾಗ್ ಅಶ್ವಿನ್‌ರ ಇನ್ನೂ ಹೆಸರಿಡ 'ಪ್ರಾಜೆಕ್ಟ್ ಕೆ' ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಈ ಇಬ್ಬರು ಸ್ಟಾರ್ ನಟರ ಪಾತ್ರಗಳಿಗೆ ಬಹಳ ಮಹತ್ವ ಕತೆಯಲ್ಲಿದೆಯಂತೆ. ಈ ಇಬ್ಬರದ್ದು ಕೇವಲ ಅತಿಥಿ ಪಾತ್ರ ಮಾತ್ರ ಆಗಿರದೆ ಎಕ್ಸೆಟೆಂಡೆಡ್ ಕ್ಯಾಮಿಯೋ ಮಾದರಿಯ ಪಾತ್ರ ಆಗಿರದೆಯಂತೆ. ಕತೆಗೆ ಪ್ರಮುಖ ತಿರುವು ನೀಡುವ ಪಾತ್ರ ಇವರದ್ದಾಗಿರಲಿದೆ. ಅದರಲ್ಲಿಯೂ ನಟ ಸೂರ್ಯ ಅವರು ನೆಗೆಟಿವ್ ಶೇಡ್‌ ಇರುವ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರಂತೆ.

  ಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಉಡೀಸ್: ರೀ ರಿಲೀಸ್‌ ಆಗಿದ್ದ 'ಜಲ್ಸಾ' ಕಲೆಕ್ಷನ್ ಎಷ್ಟು ಕೋಟಿ?ಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಉಡೀಸ್: ರೀ ರಿಲೀಸ್‌ ಆಗಿದ್ದ 'ಜಲ್ಸಾ' ಕಲೆಕ್ಷನ್ ಎಷ್ಟು ಕೋಟಿ?

  'ಪ್ರಾಜೆಕ್ಟ್ ಕೆ' 500 ಕೋಟಿ ರುಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಆಗಿದ್ದು, ಭವಿಷ್ಯದ ಪ್ರಪಂಚವನ್ನು ತೋರಿಸುವ ಅದ್ಧೂರಿ ಸೆಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾಕ್ಕಾಗಿ ಆಧುನಿಕವಾದ ಕಾರುಗಳನ್ನು ವಿನ್ಯಾಸ ಮಾಡಿಸಲಾಗುತ್ತಿದೆ. ಇದಕ್ಕಾಗಿ ಮಹೀಂದ್ರಾ ಸಂಸ್ಥೆಯ ನೆರವನ್ನು ನಾಗ್ ಅಶ್ವಿನ್ ಪಡೆಯುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಪೌರಾಣಿಕ ಕತೆಯ ಭಾಗವೂ ಇದ್ದು ಅದಕ್ಕಾಗಿಯೂ ವಿಶೇಷ ಸೆಟ್‌ಗಳ ವಿನ್ಯಾಸ ನಡೆಯುತ್ತಿದೆ.

  ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಬಾಲಿವುಡ್ ನಟಿ ದಿಶಾ ಪಟಾನಿ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಭವಿಷ್ಯದ ಕುರಿತಾದ ಕತೆಗೆ ದೀಪಿಕಾ ಪಡುಕೋಣೆ ಹಾಗೂ ಪೌರಾಣಿಕ ಕತೆಗೆ ದಿಶಾ ಪಟಾನಿ ನಾಯಕಿಯಾಗಿರಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟ ಅಮಿತಾಬ್ ಬಚ್ಚನ್, ಪ್ರಭಾಸ್‌ರ ಮಾರ್ಗದರ್ಶಕನ ಪಾತ್ರದಲ್ಲಿ ಮಿಂಚಲಿದ್ದಾರಂತೆ.

  English summary
  Dulquer Salmaan, Suriya to act in Prabhas-Nag Ashwin's new movie. Deepika Padukone, Amitabh Bachchan also there in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X