»   » ಗಂಡ ಹೆಂಡತಿಯಾದ ಬಿಪಾಶಾ-ರಾಣಾ ದಗ್ಗುಬಾಟಿ!

ಗಂಡ ಹೆಂಡತಿಯಾದ ಬಿಪಾಶಾ-ರಾಣಾ ದಗ್ಗುಬಾಟಿ!

Posted By:
Subscribe to Filmibeat Kannada

ಹ್ಯಾಂಡ್ಸಮ್ ಹಂಕ್ ಜಾನ್ ಅಬ್ರಹಾಂ ಜೊತೆಗಿನ ರಿಲೇಷನ್ ಶಿಪ್ ಗೆ ಫುಲ್ ಸ್ಟಾಪ್ ಇಟ್ಟಮೇಲೆ, ಟಾಲಿವುಡ್ ಹೀರೋ ರಾಣಾ ದಗ್ಗುಬಾಟಿ ಜೊತೆ ಕೈಕೈ ಹಿಡಿದುಕೊಂಡು ಓಡಾಡಿದ್ದ ಬಿಪಾಶಾ ಬಸು ಈಗ ಹಸೆಮಣೆ ಏರ್ತಿದ್ದಾರೆ. ಅದು ರಾಣಾ ದಗ್ಗೂಬಾಟಿ ಜೊತೆಗೆ ಅನ್ನೋದು ಬ್ರೇಕಿಂಗ್ ನ್ಯೂಸ್.

ಅರೆ, ಬಿಪಾಶಾ ಬಸು ಮದುವೆಯಾಗ್ತಿದ್ದಾರಾ ಅಂತ ಬಾಯಿ ಮೇಲೆ ಬೆರಳಿಡೋಕು ಮುಂಚೆ ಇದು ರೀಲ್ ಸುದ್ದಿ ಅನ್ನೋದನ್ನ ಮರೀಬೇಡಿ. ಬಿಪಾಶಾ ಬಸು-ರಾಣಾ ದಗ್ಗೂಬಾಟಿ ಮದುವೆಯಾಗುತ್ತಿರುವುದು ರೀಲ್ ನಲ್ಲಿ. ಅದೂ 'NIA' ಅನ್ನೋ ಸಿನಿಮಾದಲ್ಲಿ.

Ex-flames Bipasha and Rana Daggubati are back togethe2

ಇತ್ತೀಚೆಗಂತೂ ತೆರೆಮೇಲೆ ಅಪರೂಪವಾಗಿಬಿಟ್ಟಿರುವ ಬಿಪಾಶಾ, ಕ್ರಿಯೇಚರ್ 3D ನಂತರ ಒಪ್ಪಿಕೊಂಡಿರುವ ಸಿನಿಮಾ NIA. ''ಕಥೆ ಮತ್ತು ನನ್ನ ಪಾತ್ರಕ್ಕೆ ಸ್ಕೋಪ್ ಇರೋ ಕಾರಣ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟೆ'' ಅಂತ ಹೇಳೋ ಬಿಪ್ಸ್, ಎಕ್ಸ್ ಬಾಯ್ ಫ್ರೆಂಡ್ ಗೆ ಹೆಂಡತಿ ಪಾತ್ರ ಮಾಡುವ ಬಗ್ಗೆ ಕಮೆಂಟ್ ಮಾಡಲಿಲ್ಲ.

ಇನ್ನೂ ಒಂದು ವರ್ಷದ ಬಳಿಕ ರಾಣಾ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿರೋದು ಈ ಚಿತ್ರದಿಂದಲೇ. ಪಕ್ಕಾ ಫ್ಯಾಮಿಲಿ ಸ್ಟೋರಿಯಾಗಿರುವ NIA ಕಥೆ ಕೇಳಿ, ರಾಣಾ ಕ್ಲೀನ್ ಬೋಲ್ಡ್ ಆಗಿದ್ದಾರಂತೆ. ಅದಕ್ಕೆ ಹೀರೋಯಿನ್ ಬಗ್ಗೆ ತುಟಿಕ್ ಪಿಟಿಕ್ ಅನ್ನದೇ ಸಿನಿಮಾಗೆ ಯೆಸ್ ಅಂದಿದ್ದಾರೆ ಅನ್ನೋದು ಮೂಲಗಳಿಂದ ಬಂದಿರುವ ಮಾಹಿತಿ.

Ex-flames Bipasha and Rana Daggubati are back togethe

ಗಂಡ-ಹೆಂಡತಿಯ ಕ್ಯೂಟ್ ಸ್ಟೋರಿಯಿರೋ NIA ಗೆ ಕಥೆ ರಚಿಸಿ ಚೊಚ್ಚಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿರುವುದು ವಿಕ್ರಂ ಫಡ್ನಿಸ್. ಬಹುತೇಕ ಚಿತ್ರೀಕರಣ ಆಸ್ಟೇಲಿಯಾದಲ್ಲೇ ನಡೆಯಲಿದ್ದು, ಇಡೀ ಚಿತ್ರತಂಡ ಸದ್ಯದಲ್ಲೇ ಫ್ಲೈಟ್ ಹತ್ತಲಿದೆ. (ಏಜೆನ್ಸೀಸ್)

English summary
The alleged ex-flames Bipasha Basu and Rana Daggubati come together again for the movie NIA. Choreographer turned Fasion designer Vikram Phadnis is directing this movie. Bipasha and Rana are playing husband and wife in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada