»   » ಗಣೇಶ್ 'ಬುಗುರಿ' ಆಟ, ದಿನೇಶ್ ಗಾಂಧಿಗೆ ಪ್ರಾಣ ಸಂಕಟ!

ಗಣೇಶ್ 'ಬುಗುರಿ' ಆಟ, ದಿನೇಶ್ ಗಾಂಧಿಗೆ ಪ್ರಾಣ ಸಂಕಟ!

Posted By: ಹರಾ
Subscribe to Filmibeat Kannada

ಇರಲಾರದೆ ಇರುವೆ ಬಿಟ್ಟುಕೊಳ್ಳುವುದು ಅನ್ನುವುದು ಇದಕ್ಕೆ. ನಿರ್ಮಾಪಕ ದಿನೇಶ್ ಗಾಂಧಿ ತಾವಾಯ್ತು, ವಾಣಿಜ್ಯ ಮಂಡಳಿ ಆಯ್ತು. ಆಗಾಗ ಸುದ್ದಿ ವಾಹಿನಿಗಳಲ್ಲಿ ಒಂದಲ್ಲೊಂದು ವಿವಾದಗಳಿಂದ ಅಬ್ಬರಿಸುತ್ತಿದ್ದನ್ನ ಬಿಟ್ಟರೆ ಸಿನಿಮಾ ನಿರ್ಮಾಣದ ತಂಟೆಗೆ ಹೋಗಿರ್ಲಿಲ್ಲ.

ಯಾವುದೋ ಗ್ಯಾಪ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರನ್ನ ಮೀಟ್ ಮಾಡಿದ್ದೇ ಬಂತು ನೋಡಿ, ದಿನೇಶ್ ಗಾಂಧಿಗೆ ದೊಡ್ಡ ತಲೆನೋವು. 'ನಿಮಗಾಗಿ ಒಂದು ಸಿನಿಮಾ ನಿರ್ಮಾಣ ಮಾಡ್ಬೇಕು'' ಅಂತ ದಿನೇಶ್ ಗಾಂಧಿ ಕೇಳಿಕೊಂಡಿದ್ದಕ್ಕೆ 'ದಬ್ಬಂಗ್' ಚಿತ್ರದ ರೀಮೇಕ್ ರೈಟ್ಸ್ ತಂದರೆ ಕಾಲ್ ಶೀಟ್ ಗ್ಯಾರೆಂಟಿ ಅಂತ ಗಣಿ ಬಿಳಿ ಕಾಗೆ ಹಾರಿಸಿದ್ದಾರೆ.

ಚಾನ್ಸ್ ಸಿಕ್ಕಿದ್ದೇ ಸಾಕು ಅಂತ ಸೀದಾ ಮುಂಬೈಗೆ ತೆರಳಿದ ದಿನೇಶ್ ಗಾಂಧಿ, ಲಕ್ಷ ಲಕ್ಷ ಕೊಟ್ಟು 'ದಬ್ಬಂಗ್' ರೀಮೇಕ್ ಹಕ್ಕುಗಳನ್ನ ಪಡೆದುಕೊಂಡು ಬಂದರು. ತಂದಿದ್ದಾಯ್ತಲ್ಲಾ ಅಂತ ಆಡಿದ ಮಾತಿಗೆ ತಕ್ಕ ಹಾಗೆ, ಗಣಿ ಖಾಕಿ ಧರಿಸುವುದಕ್ಕೆ ಒಪ್ಪಿಕೊಂಡರು. [ಖಾಕಿ ತೊಟ್ಟು 'ಕನ್ವರ್ ಲಾಲ್' ಆದ ಗಣೇಶ್]

Ganesh out of Kanvarlal-Dinesh Gandhi Files complaint

ಸಾಲ್ದು ಅಂತ ತಾವೇ ಮೂಗು ತೂರಿಸಿ, ನಿರ್ದೇಶಕರಾಗಿ ಎಂ.ಡಿ.ಶ್ರೀಧರ್ ಇರಲಿ ಅಂತ ಅವರನ್ನ ಫಿಕ್ಸ್ ಮಾಡಿಸಿದರು. ಸದ್ಯಕ್ಕೆ 'ಬುಗುರಿ' ಮುಗೀಲಿ, ಆಮೇಲೆ 'ಕನ್ವರ್ ಲಾಲ್' ಮಾಡೋಣ ಅಂತ ಎಂ.ಡಿ.ಶ್ರೀಧರ್ ಜೊತೆ ಗಣೇಶ್ 'ಬುಗುರಿ' ಆಟ ಆಡಿದರು. [ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಕನಸು ಭಗ್ನ]

ಇನ್ನೇನು 'ಕನ್ವರ್ ಲಾಲ್' ಶೂಟಿಂಗ್ ಶುರುಮಾಡೋಣ ಅಂದ್ರೆ, 'ZOOಮ್', 'ಸ್ಟೈಲ್ ಕಿಂಗ್' ಅಡ್ಡಕ್ಕೆ ಸೇರಿಕೊಂಡ ಗಣೇಶ್, 'ಕನ್ವರ್ ಲಾಲ್' ಬಗ್ಗೆ ಕ್ಯಾರೆ ಅನ್ನಲಿಲ್ಲ. ಹಾಗೂ ಹೀಗೂ, ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ 'ಕನ್ವರ್ ಲಾಲ್' ಚಿತ್ರ ಸೆಟ್ಟೇರಬೇಕಾಗಿತ್ತು. ['ಕನ್ವರ್ ಲಾಲ್'ಗೆ ರೀಮೇಕ್ ಸ್ಪೆಷಲಿಸ್ಟ್ ಕೆ.ಮಾದೇಶ್..?]

ಆದ್ರೆ, ಅಷ್ಟರಲ್ಲಿ ನಿರ್ದೇಶಕ ಎಂ.ಡಿ.ಶ್ರೀಧರ್ 'ಕನ್ವರ್ ಲಾಲ್' ನಿಂದ ಹೊರನಡೆದು ಶಾಕ್ ನೀಡಿದರು. ಬೇರೆ ನಿರ್ದೇಶಕರ ಹುಡುಕಾಟದಲ್ಲಿರುವಾಗಲೇ ಖುದ್ದು ಗಣೇಶ್ ಈಗ 'ಕನ್ವರ್ ಲಾಲ್' ಆಗುವುದಕ್ಕೆ ಆಗಲ್ಲ ಅಂತ ಹಿಂದೆ ಸರಿದಿದ್ದಾರೆ.

Ganesh out of Kanvarlal-Dinesh Gandhi Files complaint

ಆರೆಂಟು ತಿಂಗಳಿನಿಂದ ಲಕ್ಷಾಂತರ ರೂಪಾಯಿ ದುಡ್ಡು ಸುರಿದಿರುವ ನಿರ್ಮಾಪಕ ದಿನೇಶ್ ಗಾಂಧಿ ಈಗ ರೊಚ್ಚಿಗೆದ್ದು ಗಣಿ ವಿರುದ್ಧ ದೂರು ದಾಖಲಿಸಿದ್ದಾರೆ. ಗಣಿ 'ಕನ್ವರ್ ಲಾಲ್' ಆಗಲೇಬೇಕು ಅಂತ ವಾಣಿಜ್ಯ ಮಂಡಳಿಯಲ್ಲಿ ಬೇಡಿಕೆ ಇಟ್ಟಿದ್ದಾರೆ.

ಯಾರು ಏನೇ ಅಂದರು, ''ನಾನು 'ಕನ್ವರ್ ಲಾಲ್' ಸಿನಿಮಾ ಮಾಡಲ್ಲ'' ಅಂತಿದ್ದಾರೆ ಗಣಿ. ಇದಕ್ಕೆ ದಿನೇಶ್ ಗಾಂಧಿ 'ಕಿರಿಕ್ ಪಾರ್ಟಿ' ಅಂತ ಕೆಲವರು ಗಣಿ ಕಿವಿಕಚ್ಚಿರುವುದು ಕಾರಣ ಅಂತ ಗಾಂಧಿನಗರದಲ್ಲಿ ಅಂತೆ ಕಂತೆ ಶುರುವಾಗಿದೆ.

''ಯಾವುದೇ ಆಂಗಲ್ ನಲ್ಲೂ ಗಣಿಗೆ ಖಾಕಿ ಸೂಟ್ ಆಗಲ್ಲ, ಅದಕ್ಕೆ ಬೇಡ ಅಂದವ್ರೆ'' ಅಂತ ಇನ್ನೂ ಕೆಲವರು ಆಡಿಕೊಳ್ಳುತ್ತಿದ್ದಾರೆ. ನಿಜವಾದ ಕಾರಣವೇನೋ, ದೇವರೇ ಬಲ್ಲ. ಆದ್ರೆ, ಗಣೇಶ್ ನ ನಂಬಿ ಲಕ್ಷ ಲಕ್ಷ ಸುರಿದಿರುವ ದಿನೇಶ್ ಗಾಂಧಿ ಈಗಿನ ಸ್ಥಿತಿ ಏಕ್ ಕೇಳ್ತೀರಾ..!?

English summary
Producer Dinesh Gandhi has filed a complaint against Actor Ganesh in Kannada Film Producers Association as well as Karnataka Film Chamber of Commerce for walking out of 'Kanvarlal' project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada