For Quick Alerts
  ALLOW NOTIFICATIONS  
  For Daily Alerts

  'ಮುಗುಳುನಗೆ' ಬಿಡುಗಡೆ ಯಾವಾಗ ಅಂತ ಗೊತ್ತಾಯ್ತು.!

  By Bharath Kumar
  |

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರದ ಹಾಡುಗಳನ್ನ ಕೇಳಿ ಗುನುಗುತ್ತಿರುವ ಚಿತ್ರಪ್ರೇಮಿಗಳು, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯುತ್ತಿರುವುದಂತೂ ಸುಳ್ಳಾಲ್ಲ. 'ಗಾಳಿಪಟ' ಚಿತ್ರದ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಒಂದಾಗಿರುವುದು ಈ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

  ಅಂದ್ಹಾಗೆ, 'ಮುಗುಳುನಗೆ' ಚಿತ್ರವನ್ನ ಆಗಸ್ಟ್ ತಿಂಗಳಲ್ಲೇ ತೆರೆಗೆ ತರುವ ಯೋಚನೆ ಮಾಡಲಾಗಿದೆ ಎನ್ನಲಾಗಿತ್ತು. ಈಗ ಆ ಸುದ್ದಿ ನಿಜವಾಗಿದ್ದು, ಆಗಸ್ಟ್ 25 ರಂದು 'ಮುಗುಳುನಗೆ' ಚಿತ್ರಮಂದಿರಕ್ಕೆ ಕಾಲಿಡುವುದು ಪಕ್ಕಾ ಆಗಿದೆಯಂತೆ.

  ಗಣೇಶ್ ಜೋಡಿಯಾಗಿ ಚಿತ್ರದಲ್ಲಿ ಒಟ್ಟು ನಾಲ್ಕು ನಾಯಕಿಯರಿದ್ದು, 'ಸಿದ್ಧಾರ್ಥ್' ಖ್ಯಾತಿಯ ಅಪೂರ್ವ ಆರೋರ, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್ ಮತ್ತು ವಿಶೇಷ ಪಾತ್ರದಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

  'ಮುಗುಳುನಗೆ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಯೋಗರಾಜ್ ಭಟ್ ನಿರ್ದೇಶನವಿದ್ದು, ಸೈಯಾದ್ ಸಲಾಂ ನಿರ್ಮಾಣ ಮಾಡಿದ್ದಾರೆ.

  English summary
  Golden Star Ganesh starrer Kannada Movie 'Mugulunage' Likely to release on August 25th. The movie is directed by Yogaraj Bhat, features Nikhitha Narayan, Ashika Ranganath, Apoorva, Amulya the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X