»   » ಶುಕ್ರವಾರ ಬಿರಿಯಾನಿ ಬಿಟ್ಟ ಆಕ್ಷನ್ ಕ್ವೀನ್ ಮಾಲಾಶ್ರೀ

ಶುಕ್ರವಾರ ಬಿರಿಯಾನಿ ಬಿಟ್ಟ ಆಕ್ಷನ್ ಕ್ವೀನ್ ಮಾಲಾಶ್ರೀ

Posted By: ಜೀವನರಸಿಕ
Subscribe to Filmibeat Kannada

ಲೇಡಿ ಟೈಗರ್ ಮಾಲಾಶ್ರೀ ಅವರಿಗೆ ಬಿರಿಯಾನಿ ಅಂದ್ರೆ ಫೇವರೀಟ್. ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಫೈಟ್ಸ್ ಮಾಡೋ ಆಕ್ಷನ್ ಕ್ವೀನ್ ಗೆ ಹಾಗೆ ಫೈಟ್ ಮಾಡೋಕೆ ತಾಕತ್ತು ಬರೋದೇ ಈ ಬಿರಿಯಾನಿಯಿಂದ ಅನ್ಸುತ್ತೆ. ಈ ಬಿರಿಯಾನಿಯನ್ನ ಇಷ್ಟಪಟ್ಟು ತಿನ್ನೋ ಮಾಲಾಶ್ರೀ ಬಿರಿಯಾನಿ ದೂರಮಾಡೋ ಪ್ರಸಂಗ ಬಂದಿದೆ.

ಈ ಪ್ರಸಂಗ ಬಂದಿದ್ದು ಇದೀಗೆ ತೆರೆಗೆ ಬರಲು ಸಿದ್ಧವಾಗಿರುವ 'ಮಹಾಕಾಳಿ' ಸಿನಿಮಾದಿಂದ. ಮುಹೂರ್ತದ ದಿನದಿಂದ್ಲೇ 'ಮಹಾಕಾಳಿ'ಗೆ ಸಿಕ್ಕಾಪಟ್ಟೆ ವಿಘ್ನಗಳು ಎದುರಾಗಿದ್ದವು. ಮಹಾಕಾಳಿ ಸಿನಿಮಾ ಬ್ಯಾಕ್ ಟು ಬ್ಯಾಕ್ ಅವಘಡಗಳನ್ನ ಎದುರಿಸ್ತಿದ್ದಾಗ ಭಯದಿಂದ ಶುಕ್ರವಾರ ಮಾಂಸಾಹಾರವನ್ನ ತಿನ್ನೋದನ್ನ ಬಿಡೋ ಯೋಚನೆ ಮಾಡಿದ್ರಂತೆ. [ಕಾರಣವಿಲ್ಲದೇ ಕಣ್ಣೀರಿಟ್ಟ 'ಮಹಾಕಾಳಿ' ಮಾಲಾಶ್ರೀ]

Actress Malashri

ಪಾಪ ಬಿರಿಯಾನಿ ಅಂದ್ರೆ ಪಂಚಪ್ರಾಣ ಅನ್ನೋ ಈ ಕನಸಿನ ರಾಣಿ ಮಹಾಕಾಳಿ ಸಿನಿಮಾಗಾಗಿ ಇದೆಲ್ಲವನ್ನೂ ತ್ಯಾಗ ಮಾಡಿದ್ದಾರೆ. ಇದ್ರಿಂದ ಮಾಲಾಶ್ರೀಯವರಿಗೆ 'ಮಹಾಕಾಳಿ'ಯ ಮೇಲಿದ್ದ ಭಕ್ತಿ ಹೆಚ್ಚಾಗಿದೆ.

ಅಂದಹಾಗೆ 'ಮಹಾಕಾಳಿ' ಚಿತ್ರ ಈ ವಾರ (ಏ. 24) ರಾಜ್ಯಾದ್ಯಂತ ತೆರೆಕಾಣ್ತಿದೆ, ಇನ್ನು ಸಿನಿಮಾ ಗೆದ್ರೆ ಖುಷಿಯಲ್ಲಿ ಮಾಲಾಶ್ರೀಯವ್ರು ಶುಕ್ರುವಾರಾನೂ ಬಿರಿಯಾನಿ ತಿನ್ನಬಹುದು.

ಮಾಲಾಶ್ರೀ ಅಂದಮಾತ್ರಕ್ಕೆ ಕೇವಲ ಫೈಟ್ಸ್ ಮತ್ತು ಆಕ್ಷನ್ ಮಾತ್ರ ಚಿತ್ರದಲ್ಲಿಲ್ಲ. ಸೆಂಟಿಮೆಂಟ್ ಜೊತೆ ಒಂದು ಕ್ಯೂಟ್ ಕ್ಯೂಟ್ ಲವ್ ಸ್ಟೋರೀನೂ ಇದೆ. ಒಂದು ಹೊಸ ಜೋಡಿ ಕೂಡ ಚಿತ್ರದಲ್ಲಿದೆ. ಬಹಳ ದಿನಗಳ ನಂತರ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಚಿತ್ರ ಇದೇ 24ರಂದು ತೆರೆಗೆ ಬರ್ತಿದೆ ಎಂಜಾಯ್ ಮಾಡಿ.

English summary
Sandalwood action queen Malashri gives up Biryani on Fridays for god-fearing. Because the actress playing a lead role in the movie titled as 'Mahakali'. So she decided to quit eating biryani on Fridays. The movie is slated for release on 24th of April, directed by S Mahendar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada