»   » ಗೋಲ್ಡನ್ ಗರ್ಲ್ ರಮ್ಯಾ ಸಂಬಳ ಈಗ ಅರ್ಧ ಕೋಟಿ

ಗೋಲ್ಡನ್ ಗರ್ಲ್ ರಮ್ಯಾ ಸಂಬಳ ಈಗ ಅರ್ಧ ಕೋಟಿ

By: ರವಿಕಿಶೋರ್
Subscribe to Filmibeat Kannada
ಗೋಲ್ಡನ್ ಗರ್ಲ್ ರಮ್ಯಾ ಅವರೂ ಸಂಬಳ ಎಣಿಸುತ್ತಾರಾ? ಹೌದು. ಹಾಗಿದ್ದರೆ ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಾನೆ ನಿಮ್ಮ ಡೌಟು. ತಿಂಗಳಿಗೆ ಅರ್ಧ ಕೋಟಿ ಸಂಬಳ ಕೊಡುವ ಕೆಲಸ ನಮ್ಮ ದೇಶದಲ್ಲಿ ಯಾವುದಿದೆ ಸ್ವಾಮಿ. ಚಿತ್ರರಂಗ ಬಿಟ್ಟರೆ...

ರಮ್ಯಾ ಅವರ ಸಂಭಾವನೆ ಏರಿಕೆಯಾಗಿರುವ ಅಂಶ ಗಾಂಧಿನಗರಲ್ಲಿ ಲೀಕ್ ಆಗಿದೆ. ಮೂಲಗಳ ಪ್ರಕಾರ ಈಗವರು ಚಿತ್ರವೊಂದಕ್ಕೆ ರು.50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಬಗ್ಗೆ ರಮ್ಯಾ ಅವರನ್ನು ಕೇಳಿದರೆ ನಿರ್ಮಾಪಕರನ್ನೇ ಕೇಳಿ, ನನ್ನ ಸಂಭಾವನೆ ಎಷ್ಟು ಎಂದು ಗೊತ್ತಾಗುತ್ತದೆ ಎನ್ನುತ್ತಾರೆ.

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಚಲಾವಣೆಯಲ್ಲಿರುವ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ನಟಿ ಎಂದರೆ ರಮ್ಯಾ. ಅವರ ಬಳಿಕ ರಾಗಿಣಿ ದ್ವಿವೇದಿ ರು.20ರಿಂದ 25 ಲಕ್ಷ ಎಣಿಸುತ್ತಾರೆ. ರಾಧಿಕಾ ಪಂಡಿತ್ ರು.15 ಲಕ್ಷಕ್ಕೆ, ಚಿಗರೆ ಕಂಗಳ ತಾರೆ ಐಂದ್ರಿತಾ ರೇ ರು.15 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ.

ಬಹುಶಃ ಸಂಭಾವನೆಯಲ್ಲಿ ಕೊಂಚ ಲೆಕ್ಕಾಚಾರ ತಪ್ಪಿದ್ದಕ್ಕೋ ಏನೋ ಅವರು 'ನೀರ್ ದೋಸೆ' ಚಿತ್ರದಿಂದ ಹೊರಬಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ರಮ್ಯಾ ಮಾತ್ರ ತಾವು ಆ ರೀತಿಯ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಲಿಕ್ಕಾಗಲ್ಲ. ಅದಕ್ಕಾಗಿ ಪಾತ್ರ ಬೇಡ ಎಂದಿದ್ದೇನೆ ಎನ್ನುತ್ತಿದ್ದಾರೆ.

ಇನ್ನು ಕೋಡಿ ರಾಮಕೃಷ್ಣ ಅವರ ಇನ್ನೂ ಹೆಸರಿಡ ಚಿತ್ರಕ್ಕೆ ರು.54 ಲಕ್ಷ ಹಾಗೂ 'ಆರ್ಯನ್' ಎಂಬ ಚಿತ್ರಕ್ಕೆ ರು.50 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಚಿತ್ರವೊಂದರಲ್ಲಿ ರಮ್ಯಾ ಇದ್ದಾರೆ ಎಂದರೆ ಕಿರಿಕಿರಿಗಳ ಮೂಲಕ ಒಂದಷ್ಟು ಬಿಟ್ಟಿ ಪ್ರಚಾರವೂ ಸಿಗುತ್ತದೆ. ಬಹುಶಃ ಇದೆಲ್ಲಾ ಸೇರಿಸಿ ರು.50 ಲಕ್ಷದ ಪ್ಯಾಕೇಜ್ ಅನ್ನಿಸುತ್ತದೆ.

English summary
Golden Girl Ramya has always been the highest paid actress in Kannada filmdom. The actress reported to have charged Rs. 54 lacs as remuneration. This would certainly make her the costliest actress in Sandalwood.
Please Wait while comments are loading...