Don't Miss!
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಾಯಿ ಪಲ್ಲವಿ ಬಗ್ಗೆ ಇದೇನಿದು ಗಾಸಿಪ್: 'ಪ್ರೇಮಂ' ಬ್ಯೂಟಿ ಸುತ್ತ ಮತ್ತೊಂದು ಗಾಳಿ ಸುದ್ದಿ!
ಸಾಯಿ ಪಲ್ಲವಿ ದಕ್ಷಿಣ ಭಾರತದ ಅತ್ಯದ್ಭುತ ನಟಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈಕೆಗೆ ತೆಲುಗು, ತಮಿಳು, ಕನ್ನಡ ಸೇರಿದಂತೆ ಮಲಯಾಳಂನಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. 'ಪ್ರೇಮಂ' ಸಿನಿಮಾ ನೋಡಿದವರೆಲ್ಲರೂ ಸಾಯಿ ಪಲ್ಲವಿ ಅಭಿನಯ ಕಂಡು ಥ್ರಿಲ್ ಆಗಿದ್ದರು.
ಅಂದಿನಿಂದ ಸಾಯಿ ಪಲ್ಲವಿ ಮತ್ತೆ ತಿರುಗಿ ನೋಡಲಿಲ್ಲ. ಸಿಕ್ಕಾ ಅವಕಾಶಗಳನ್ನು ಅದ್ಭುತವಾಗಿಯೇ ಬಳಸಿಕೊಂಡರು. ತೆಮಿಳು, ತೆಲುಗು, ಮಲಯಾಳಂ ಯಾವುದೇ ಭಾಷೆಯ ಸಿನಿಮಾವಿದ್ದರೂ, ಸಾಯಿ ಪಲ್ಲವಿ ಅಲ್ಲಿನ ಪ್ರೇಕ್ಷಕರಿಗೆ ಇಷ್ಟವಾಗಿಬಿಡುತ್ತಿದ್ದರು.
ಆದರೆ, ಇತ್ತೀಚೆಗೆ ಯಾಕೋ ಸಾಯಿ ಪಲ್ಲವಿ ಸೈಲೆಂಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಹಲವು ಗಾಳಿಸುದ್ದಿಗಳು ಹರಿದಾಡುತ್ತಲೇ ಇದ್ದವು. ಸಾಯಿ ಪಲ್ಲವಿ ಮದುವೆ ಆಗುತ್ತಾರಂತೆ. ಸಾಯಿ ಪಲ್ಲವಿ ಇನ್ಮುಂದೆ ಗ್ಲಾಮರ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುವುದಿಲ್ವಂತೆ ಅನ್ನೋ ಮಾತು ಕೇಳಿ ಬಂದಿತ್ತು. ಈ ಬೆನ್ನೆಲ್ಲೆ ಮತ್ತೊಂದು ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ.

ಸಾಯಿ ಪಲ್ಲವಿ ಬಗ್ಗೆ ಇದೇನಿದು ಗಾಸಿಪ್?
ಸಿನಿಮಾ ಸ್ಟಾರ್ ಅಂದ್ಮೇಲೆ ಗಾಸಿಪ್‌ಗಳಿಗೇನು ಕಮ್ಮಿ ಇರೋದಿಲ್ಲ. ಒಂದಲ್ಲ ಒಂದು ಸುದ್ದಿ ಅವರ ಹಿಂದೆ ಓಡಾಡುತ್ತಲೇ ಇರುತ್ತೆ. ಇನ್ನು ಸಾಯಿ ಪಲ್ಲವಿ ಅಂದ್ಮೇಲೆ ವಿಶೇಷ ಗಮನ ಇದ್ದೇ ಇರುತ್ತೆ. ಇಷ್ಟು ದಿನ ಸಾಯಿ ಸುತ್ತಮುತ್ತ ಓಡಾಡಿದ್ದ ಗಾಳಿಸುದ್ದಿಗಳಿಗಿಂತ ಇದು ಕೊಂಚ ಡಿಫ್ರೆಂಟ್. ಅದೇನಂದ್ರೆ, ಸಾಯಿ ಪಲ್ಲವಿ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರಂತೆ. ಆದರೆ, ದಕ್ಷಿಣ ಭಾರತದ ಚಿತ್ರರಂಗ ಅಲ್ಲ. ಬಾಲಿವುಡ್ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಾರಂತೆ. ಅದೂ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ರಾಮಾಯಾಣ ಸಿನಿಮಾದಲ್ಲಿ ಸಾಯಿ ಪಲ್ಲವಿ 'ಸೀತೆ'
ಬಾಲಿವುಡ್‌ನಲ್ಲಿ ಈಗಾಗಲೇ ರಾಮಾಯಣ ಕುರಿತಾದ ಸಿನಿಮಾ 'ಆದಿಪುರುಷ್' ನಿರ್ಮಾಣ ಹಂತದಲ್ಲಿದೆ. ಇದರಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದರೆ, ಅತ್ತ ಸೀತೆಯಾಗಿ ಕೃತಿ ಸೆನನ್ ಕಾಣಿಸುತ್ತಾರೆ. ಈ ಮಧ್ಯೆ ಮತ್ತೊಂದು ರಾಮಾಯಣ ಹಿನ್ನೆಲೆಯುಳ್ಳ ಸಿನಿಮಾ ಸೆಟ್ಟೇರುತ್ತೆ ಅನ್ನೋದೇ ಸುದ್ದಿ. ಇದು ಸೀತೆಯ ದೃಷ್ಟಿಕೋನವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆಯಂತೆ. ಈ ಸೀತೆಯ ಪಾತ್ರ ಮಾಡುವುದಕ್ಕೆ ಸಾಯಿ ಪಲ್ಲವಿಯನ್ನು ಅಪ್ರೋಚ್ ಮಾಡಲಾಗಿದೆ ಅಂತ ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

ಸಾಯಿ ಪಲ್ಲವಿ 'ಸೀತೆ' ಅವತಾರವೆತ್ತೋದು ನಿಜವೇ?
ಈಗಾಗಲೇ ಬಾಲಿವುಡ್‌ನಲ್ಲಿ 'ಆದಿಪುರುಷ್' ಸಿನಿಮಾ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಹೀಗಿದ್ದೂ ಮತ್ತೊಂದು ರಾಮಾಯಾಣವನ್ನು ತೆರೆಮೇಲೆ ತರುತ್ತಾರಾ? ಅನ್ನೋ ಅನುಮಾನವಿದೆ. ಆದರೆ, ಸೀತೆ ಬಾಲ್ಯ, ಹುಟ್ಟು, ಶ್ರೀರಾಮನೊಂದಿಗೆ ವೈವಾಹಿಕ ಜೀವನ ಅಪಹರಣ ಹೀಗೆ ಆ ದೃಷ್ಟಿಕೋನದಲ್ಲಿ ಸಿನಿಮಾ ಮಾಡಬಹುದಾದ ಸಾಧ್ಯತೆಗಳೂ ಇವೆ. ಸದ್ಯ ನಿರ್ದೇಶಕರು ಯಾರು? ನಿರ್ಮಾಪಕರು ಯಾರು? ಅನ್ನೋ ಮಾಹಿತಿ ಕೂಡ ಇಲ್ಲ. ಹೀಗಾಗಿ ಇದು ಬರೀ ಗಾಳಿ ಸುದ್ದಿನಾ? ಇಲ್ಲ ನಿಜಕ್ಕೂ ಸೀತೆ ಅವತಾರವೆತ್ತುತ್ತಿದ್ದಾರಾ? ಅನ್ನೋದು ಅವರೇ ಹೇಳಬೇಕಿದೆ.

'ಗಾರ್ಗಿ' ಬಳಿಕ ರೌಡಿ ಬೇಬಿ ಸಿನಿಮಾ ಯಾವುದು?
2022 ಸಾಯಿ ಪಲ್ಲವಿಗೆ ಆಶಾದಾಯಕವಾಗೇನೂ ಇರಲಿಲ್ಲ. ಈ ವರ್ಷ ಬಿಡುಗಡೆಯಾದ ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿಲ್ಲ. 'ವಿರಾಟ ಪರ್ವಂ' ಹಾಗೂ ' ಗಾರ್ಗಿ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನೀರಸ ಪ್ರದರ್ಶನ ಕಂಡಿವೆ. ಅಲ್ಲದೆ ಇದೂವರೆಗೂ ಸಾಯಿ ಪಲ್ಲವಿ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಹೀಗಾಗಿ ರೌಡಿ ಬೇಬಿ ಮುಂದಿನ ಸಿನಿಮಾ ಯಾವುದು ಅನ್ನೋದು ಅಭಿಮಾನಿಗಳ ನಿದ್ದೆ ಕೆಡಿಸಿದೆ. ಇತ್ತ ಒಂದರ ಹಿಂದೊಂದು ಗಾಳಿ ಸುದ್ದಿನೂ ಓಡಾಡುತ್ತಿದ್ದು, ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.