»   » ನಟ ರವಿಚಂದ್ರನ್ ಆತ್ಮಹತ್ಯೆ ಸುದ್ದಿ ಹಬ್ಬಿಸಲು ಸಂಚು

ನಟ ರವಿಚಂದ್ರನ್ ಆತ್ಮಹತ್ಯೆ ಸುದ್ದಿ ಹಬ್ಬಿಸಲು ಸಂಚು

By Rajendra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಾವಿನ ಸುದ್ದಿ ಹಬ್ಬಿಸಲು ಸಂಚು ರೂಪಿಸಿದ ವ್ಯಕ್ತಿಯೊಬ್ಬ ಪರಾರಿಯಾದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗುರುವಾರ (ಜೂ.13) ನಡೆದಿದೆ. ಬದುಕಿದ್ದಾಗಲೇ ರವಿಚಂದ್ರನ್ ಅವರನ್ನು ಸಾಯಿಸಿದ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ.

  ನಟನೊಬ್ಬ ಬದುಕಿದ್ದಾಗಲೇ ಅವರ ಸಾವಿನ ಸುದ್ದಿಗಳನ್ನು ಹಬ್ಬಿಸುತ್ತಿರುವುದು ಇದೇ ಮೊದಲಲ್ಲ ಬಿಡಿ. ಈ ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹಬ್ಬಿತ್ತು. ರವಿಚಂದ್ರನ್ ಅವರ ಬಗ್ಗೆಯೂ ಇದೇ ರೀತಿಯ ಸುದ್ದಿ ಹಬ್ಬಿಸಲಾಗಿತ್ತು. ಈಗಲೂ ಹಬ್ಬಿಸುವ ಪ್ರಯತ್ನ ಮಾಡಲಾಗಿದೆ.

  ಅಂದಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಏನೂ ಆಗಿಲ್ಲ. ಅವರು ದುಂಡುಗುಂಡಾಗಿ ಕ್ಷೇಮವಾಗಿಯೇ ಇದ್ದಾರೆ. ತಮ್ಮ ಆತ್ಮಹತ್ಯೆ ಸುದ್ದಿಯ ಬಗ್ಗೆ ವಿವರ ನೀಡಲು ಸ್ವತಃ ರವಿಚಂದ್ರನ್ ಅವರು ಸುವರ್ಣ ನ್ಯೂಸ್ ಚಾನಲ್ ನಲ್ಲಿ ಕಾಣಿಸಿಕೊಂಡರು. ಸ್ಲೈಡ್ ಗಳಲ್ಲಿ ವಿವರಗಳು...

  ಅದೇ ಕ್ಯಾಪ್, ಅದೇ ತುಂಟನಗೆಯೊಂದಿಗೆ ಪ್ರತ್ಯಕ್ಷ

  ಅದೇ ಕ್ಯಾಪ್, ಅದೇ ತುಂಟನಗೆಯೊಂದಿಗೆ ಸುವರ್ಣ ನ್ಯೂಸ್ ಜೊತೆ ಮಾತಿಗಿಳಿದ ಕ್ರೇಜಿಸ್ಟಾರ್ ರವಿಚಂದ್ರನ್, ನಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ಅಲ್ಲ. ಒಂದು ವೇಳೆ ಆತ್ಮಹತ್ಯೆ ಮಾಡಿಕೊಳ್ಳುವಂತಿದ್ದರೆ 'ಶಾಂತಿ ಕ್ರಾಂತಿ' ಚಿತ್ರದ ಸಮಯದಲ್ಲೇ ಮಾಡಿಕೊಳ್ಳುತ್ತಿದ್ದೆ. ಇಷ್ಟು ದಿನ ಬೇಕಾಗಿರಲಿಲ್ಲ" ಎಂದರು.

  ನನ್ನ ತಮ್ಮನ ಹೆಸರು ಬಳಸಿಕೊಂಡಿದ್ದಾರೆ

  ಈ ರೀತಿಯ ಸುದ್ದಿಗಳನ್ನು ಈಗಾಗಲೆ ಅನೇಕ ಬಾರಿ ಹಬ್ಬಿಸಿದ್ದಾರೆ. ನಾನು ತಲೆಕೆಡಿಸಿಕೊಂಡಿಲ್ಲ. ಆದರೆ ಈ ದಿನ ನನ್ನ ತಮ್ಮನ ಹೆಸರನ್ನು ಬಳಸಿಕೊಂಡಿದ್ದಾರೆ. ಹಾಗಾಗಿ ನಾನು ಸ್ಟುಡಿಯೋಗೆ ಬರಬೇಕಾಯಿತು ಎಂದರು ವಿವರ ನೀಡಿದರು.

  ಇದೆಲ್ಲಾ ಹೇಗಾಯಿತು ಎಂದರೆ?

  ತನ್ನನ್ನು ತಾನು ಹನುಮಂತನಗರದ ಶಿವಕುಮಾರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಚಾಮರಾಜಪೇಟೆಯ ನಂದಗೋಕುಲ ಪ್ರಿಂಟರ್ಸ್ ಮಾಲೀಕ ವೆಂಕಟರಮಣಪ್ಪ ಅವರನ್ನು ಭೇಟಿಯಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು. ಹತ್ತು ಸಾವಿರ ಕರಪತ್ರಗಳನ್ನು ಮುದ್ರಿಸಿಕೊಡಿ ಎಂದು ಕೇಳಿದ್ದಾನೆ.

  ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯಂತೆ!

  ಈ ವಿಷಯವನ್ನು ಸ್ವತಃ ರವಿಚಂದ್ರನ್ ಅವರ ತಮ್ಮ ಬಾಲಾಜಿ ಅವರು ತಮಗೆ ದೂರವಾಣಿ ಮೂಲಕ ತಿಳಿಸಿದ್ದಾಗಿಯೂ. ಹಾಗಾಗಿ ತಾವು ಕರಪತ್ರ ಮುದ್ರಿಸಿಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳಿದ್ದಾನೆ. ರವಿಚಂದ್ರನ್ ಅವರು ಸಿಕ್ಕಾಪಟ್ಟೆ ಸಾಲ ಮಾಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾಗಿ ಹೇಳಿದ್ದಾನೆ.

  ಕ್ರಾಸ್ ಚೆಕ್ ಮಾಡಿಕೊಳ್ಳುತ್ತಿದ್ದಾಗ ವ್ಯಕ್ತಿ ಪರಾರಿ

  ಮೊನ್ನೆ ತಾನೆ ಅವರು ಹುಟ್ಟುಹಬ್ಬ ಆಚರಿಸಿಕೊಂಡರಲ್ಲಪ್ಪಾ. ಇಷ್ಟು ಬೇಗ ಈ ರೀತಿ ಆಯಿತಲ್ಲ ಎಂದು ವೆಂಕಟರಮಣಪ್ಪ ಅವರಿಗೆ ಕೊಂಚ ಬೇಸರವಾಯಿತಂತೆ. ಆದರೂ ಈತನ ಮೇಲೆ ಕೊಂಚ ಸಂದೇಹ ಬಂದು ಕ್ರಾಸ್ ಚೆಕ್ ಮಾಡಿಕೊಳ್ಳಲು ಮುಂದಾಗಿ, ಯಾವುದಕ್ಕೂ ಇರಲಿ ಎಂದು ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರಂತೆ.

  ಕಡೆಗೆ ಸುವರ್ಣ ವಾಹಿಗೆ ಆಗಮಿಸಿದ ರವಿಚಂದ್ರನ್

  ಇದನ್ನು ಗಮನಿಸಿದ ಶಿವಕುಮಾರ್ ಅಲ್ಲಿಂದ ಕಾಲು ಕಿತ್ತಿದ್ದಾನೆ. ಬಳಿಕ ಈ ವಿಷಯ ಸುವರ್ಣ ನ್ಯೂಸ್ ಮೂಲಕ ರವಿಚಂದ್ರನ್ ಅವರ ಕಿವಿಗೂ ಬಿದ್ದು ಅವರು ವಾಹಿನಿಯ ಸ್ಟುಡಿಯೋದಲ್ಲಿ ಪ್ರತ್ಯಕ್ಷವಾದರು. ತಮ್ಮ ಆತ್ಮಹತ್ಯೆ ಸುದ್ದಿ ಬಗ್ಗೆ ಅವರು ನಗುನಗುತ್ತಲೇ ಉತ್ತರಿಸಿದರು.

  ಚಿದಂಬರ ರಹಸ್ಯವಾಗಿ ಉಳಿದ ಪ್ರಶ್ನೆ

  ಅಂದಹಾಗೆ ರವಿಚಂದ್ರನ್ ಅವರ ಬಗ್ಗೆಯೇ ಈ ರೀತಿ ಸುದ್ದಿ ಹಬ್ಬಿಸಲು ಅನಾಮಧೇಯ ವ್ಯಕ್ತಿ ಪ್ರಯತ್ನಿಸಿದ್ದಾದರೂ ಏಕೆ ಎಂಬ ಪ್ರಶ್ನೆ ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಇದಕ್ಕೆಲ್ಲಾ ನಮ್ಮ ಓದುಗರ ಉತ್ತರ Rumours mongers are national enemies, ಏನಂತೀರಾ?

  English summary
  An unknown person introduced himself as Shivakumar went on printing press requests obituary pamphlets saying that the actor has committed suicide and his fans mourns his death.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more