»   »  ಕನ್ನಡ ನಟರಲ್ಲಿ ಯಾರಿಗೆ ಹೆಚ್ಚು ಅಭಿಮಾನಿಗಳು?ನಿಮ್ಮ ಆಯ್ಕೆ?

ಕನ್ನಡ ನಟರಲ್ಲಿ ಯಾರಿಗೆ ಹೆಚ್ಚು ಅಭಿಮಾನಿಗಳು?ನಿಮ್ಮ ಆಯ್ಕೆ?

Posted By:
Subscribe to Filmibeat Kannada

ಅಭಿಮಾನಿಗಳು ದೇವರು, ನಿರ್ಮಾಪಕರು ಅನ್ನದಾತರು ಎನ್ನುತ್ತಿದ್ದರು ಡಾ. ರಾಜಕುಮಾರ್. ಒಂದು ರೀತಿಯಲ್ಲಿ ಸಿನಿಮಾ ಜಗತ್ತಿನವರಿಗೆ ಅಭಿಮಾನಿಗಳೇ ಎಲ್ಲಾ, ಅಭಿಮಾನದ ಹೊಳೆ ಹರಿದರೆನೇ ಅವರಿಗೂ ಎಲ್ಲಾ..

ತಮ್ಮ ನೆಚ್ಚಿನ ನಟರ ಸಿನಿಮಾಗಳು ತೆರೆಕಂಡಾಗ ಅಭಿಮಾನಿಗಳು ತೋರಿಸುವ ಪ್ರೀತಿ, ಅದು ಕಟೌಟ್‌ಗಳಿಗೆ ಹಾರ ಹಾಕುವುದು ಇರಬಹುದು ಅಥವಾ ಹಾಲಿನ ಅಭಿಷೇಕ ಮಾಡುವುದು ಇರಬಹುದು.ಒಟ್ಟಿನಲ್ಲಿ ಇವರು ತೋರಿಸುವ ಅಭಿಮಾನದ ಪರಾಕಾಷ್ಟೆಗೆ ಬೆಲೆಕಟ್ಟಲಾಗದು.

ಈ ರೀತಿ ಸೆಲೆಬ್ರಿಟಿಗಳ ಮೇಲೆ ಅಭಿಮಾನಿಗಳ ಅಗತ್ಯಕ್ಕಿಂತೆ ಹೆಚ್ಚಿನ ಅಭಿಮಾನ ದಕ್ಷಿಣಭಾರತದಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತವೆ. ಇಲ್ಲಿ ಸಿನಿಮಾದವರ ಹೆಸರಿನಲ್ಲಿ ದೇವಾಲಯಗಳೂ ಹುಟ್ಟುತ್ತವೆ. ರಾಜಕೀಯ ನಾಯಕರು, ಸಮಾಜ ಸೇವೆಯಲ್ಲಿ ತೊಡಗಿದವರು ಮಾಡಲಾಗದ ಕೆಲಸವನ್ನು ಸಿನಿಮಾದವರಿಂದ ಸಾಧ್ಯ ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ಗೋಕಾಕ್ ಚಳುವಳಿಯಲ್ಲಿ ರಾಜಕುಮಾರ್ ಧುಮುಕಿದ ನಂತರ ಸಿಕ್ಕ ಭಾರೀ ಜನಬೆಂಬಲ.

ಇದಕ್ಕೆ ವ್ಯತಿರಿಕ್ತವಾಗಿ ಅಭಿಮಾನಿಗಳ ಅತಿರೇಕದ ವರ್ತನೆಗೂ ಬಹಳಷ್ಟು ಉದಾಹರಣೆ ಸಿಗುತ್ತದೆ. ಅದಕ್ಕೂ ಕೊಡಬಹುದಾದ ಉದಾಹರಣೆಯೆಂದರೆ ರಾಜ್ ಅಂತ್ಯಸಂಸ್ಕಾರದ ವೇಳೆ ನಡೆದ ಹಿಂಸಾಚಾರ, ವಿಷ್ಣು ಅಂತ್ಯಸಂಸ್ಕಾರದ ವೇಳೆ ನಡೆದ ದೊಂಬಿ, ಕಲ್ಲುತೂರಾಟ.

ನೊಂದಣಿಯಾಗಿರುವ ಮತ್ತು ನೊಂದಣಿಯಾಗದ ಬಹಳಷ್ಟು ಅಭಿಮಾನಿ ಸಂಘಗಳು ಹುಟ್ಟತ್ತಲೇ ಇರುತ್ತವೆ. ಅದರಲ್ಲಿ ಕೆಲವು ಕಾರ್ಯಪ್ರವೃತ್ತವಾಗಿರುತ್ತವೆ ಕೆಲವೊಂದು ಬರೀ ಒಂದು ಚಿತ್ರಕ್ಕಷ್ಟೇ ಸೀಮತವಾಗಿರುತ್ತದೆ.

ನಾವು ನೋಡಿದ ನಟರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರಾರು? ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿ ಈ ಲೇಖನ ಬರೆಯಲಾಗಿದೆ. ಎಲ್ಲಾ ಮಾಹಿತಿಗಳನ್ನು ಕಲೆ ಹಾಕುವುದು ನಮಗೂ ತ್ರಾಸದ ಕೆಲಸ. ಹಾಗಾಗಿ ಸ್ಲೈಡಿನಲ್ಲಿರುವ ತೋರಿಸಿದ ಕ್ರಮಕ್ಕೆ ನಿಮ್ಮ ಸಹಮತವಿದೆಯಾ?

ಡಾ. ರಾಜಕುಮಾರ್

ಪ್ರಶಸ್ತಿ/ಬಿರುದು: ಪದ್ಮಭೂಷಣ, ಕರ್ನಾಟಕ ರತ್ನ, ದಾದಾಸಾಹೇಬ್ ಫಾಲ್ಕೆ, ವರನಟ, ಚತುಷ್ಕೋಟಿ ಕನ್ನಡಿಗರ ಅಭಿಮಾನಿ, ರಸಿಕರ ರಾಜ, ಅಣ್ಣಾವ್ರು, ಗಾನಗಂಧರ್ವ, ನಟ ಸಾರ್ವಭೌಮ

ಡಾ. ಅಂಬರೀಶ್

ಪ್ರಶಸ್ತಿ/ಬಿರುದು: ಕಲಿಯುಗದ ಕರ್ಣ, ಮಂಡ್ಯದ ಗಂಡು

ಶಿವರಾಜ್ ಕುಮಾರ್

ಪ್ರಶಸ್ತಿ/ಬಿರುದು: ಹ್ಯಾಟ್ರಿಕ್ ಹೀರೋ, ನಾಟ್ಯ ಸಾರ್ವಭೌಮ, ಶಿವಣ್ಣ, ಸೆಂಚುರಿ ಸ್ಟಾರ್

ದರ್ಶನ್

ಪ್ರಶಸ್ತಿ/ಬಿರುದು: ಚಾಲೆಂಜಿಂಗ್ ಸ್ಟಾರ್

ಡಾ. ವಿಷ್ಣುವರ್ಧನ್

ಪ್ರಶಸ್ತಿ/ಬಿರುದು: ಪದ್ಮಶ್ರೀ, ಅಭಿನಯ ಭಾರ್ಗವ, ಸಾಹಸಸಿಂಹ

ಶಂಕರನಾಗ್

ಪ್ರಶಸ್ತಿ/ಬಿರುದು: ಕರಾಟೆ ಕಿಂಗ್, ಆಟೋರಾಜ

ಪುನೀತ್ ರಾಜಕುಮಾರ್

ಪ್ರಶಸ್ತಿ/ಬಿರುದು: ಪವರ್ ಸ್ಟಾರ್, ಅಪ್ಪು

ಸುದೀಪ್

ಪ್ರಶಸ್ತಿ/ಬಿರುದು: ಕಿಚ್ಚ, ಅಭಿನವ ಚಕ್ರವರ್ತಿ

ರವಿಚಂದ್ರನ್

ಪ್ರಶಸ್ತಿ/ಬಿರುದು: ಕ್ರೇಜಿಸ್ಟಾರ್ , ಕನಸುಗಾರ, ಕಲಾವಿದ

ಉಪೇಂದ್ರ

ಪ್ರಶಸ್ತಿ/ಬಿರುದು: ರಿಯಲ್ ಸ್ಟಾರ್

ವಿಜಯ್

ಪ್ರಶಸ್ತಿ/ಬಿರುದು: ಕರಿಚಿರತೆ, ದುನಿಯಾ ವಿಜಯ್, ಬ್ಲ್ಯಾಕ್ ಕೋಬ್ರಾ

ಜಗ್ಗೇಶ್

ಪ್ರಶಸ್ತಿ/ಬಿರುದು: ನವರಸನಾಯಕ

ಗಣೇಶ್

ಪ್ರಶಸ್ತಿ/ಬಿರುದು: ಗೋಲ್ಡನ್ ಸ್ಟಾರ್, ಕಾಮಿಡಿ ಟೈಮ್

English summary
Which of these Kannada actors has highest numbers of fan followers. What is your opinion?
Please Wait while comments are loading...