Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹನ್ಸಿಕಾ- ಸೋಹೈಲ್ ಮದುವೆ ಖರ್ಚು 20 ಕೋಟಿನಾ? ಯಾರು ಹೆಚ್ಚು ಖರ್ಚು ಮಾಡಿದ್ದು?
ಡಿಸೆಂಬರ್ 4ರಂದು ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಬಹುಕಾಲದ ಗೆಳೆಯ ಸೋಹೈಲ್ ಕಥುರಿಯಾ ಕೈ ಹಿಡಿದರು. ನಾಲ್ಕೈದು ದಿನಗಳ ಕಾಲ ಬಹಳ ಅದ್ಧೂರಿಯಾಗಿ ಈ ವಿವಾಹ ಮಹೋತ್ಸವ ನಡೆದಿತ್ತು. ಮದುವೆಗೆ ಬರೋಬ್ಬರಿ 20 ಕೋಟಿ ರೂ. ಖರ್ಚು ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
ಜೈಪುರದ ಮುಂದೋಟ ಕೋಟೆಯಲ್ಲಿ ಬಹಳ ಅದ್ಧೂರಿಯಾಗಿ ಹನ್ಸಿಕಾ ಹಾಗೂ ಸೋಹೈಲ್ ಮದುವೆ ಶಾಸ್ತ್ರಗಳು ನಡೆದಿದ್ದವು. ಇಬ್ಬರ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರು, ಚಿತ್ರರಂಗದ ಆತ್ಮೀಯರು, ರಾಜಕೀಯ ಮುಖಂಡರು ಈ ಮದುವೆ ಸಮಾರಂಭದಲ್ಲಿ ಭಾಗಿ ಆಗಿ ವಧು- ವರರನ್ನು ಆಶೀರ್ವದಿಸಿದ್ದರು. ಮುಂಬೈ ಮೂಲದ ಉದ್ಯಮಿ ಸೋಹೈಲ್‌ಗೆ ಈ ಹಿಂದೆ ಒಂದು ಮದುವೆ ಆಗಿತ್ತು. ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟು ಹನ್ಸಿಕಾ ಮೊಟ್ವಾನಿ ಕೈ ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಹನ್ಸಿಕಾ ಟ್ರೋಲ್ ಆಗುವಂತಾಗಿತ್ತು.
ಹನ್ಸಿಕಾ
ಮೋಟ್ವಾನಿ
ಮದುವೆ:
ನಡೆದಿದ್ದೆಲ್ಲಿ?
ಏನು
ವಿಶೇಷತೆ?
ತಿಂಗಳುಗಳ ಹಿಂದೆಯೇ ಐಷಾರಾಮಿ ಮುಂದೋಟ ಕೋಟೆಯನ್ನು ಮದುವೆಗಾಗಿ ಕಾಯ್ದಿರಿಸಲಾಗಿತ್ತು. 4 ದಿನ ಮೊದಲೇ ಹನ್ಸಿಕಾ ಫ್ಯಾಮಿಲಿ ಸಮೇತ ಜೈಪುರ ಫ್ಲೈಟ್ ಏರಿದ್ದರು. ಅದಕ್ಕೂ ಮೊದಲೇ ಮುಂಬೈನಲ್ಲಿ ಮಾತಾ ಕಿ ಚೌಕಿ ಮೂಲಕ ಹನ್ಸಿಕಾ ಹಾಗೂ ಸೊಹೈಲ್ ಕಥುರಿಯಾ ಮದುವೆ ಶಾಸ್ತ್ರಗಳಿಗೆ ಚಾಲನೆ ಸಿಕ್ಕಿತ್ತು.

ಮದುವೆ ಖರ್ಚು 20 ಕೋಟಿ?
ಸೋಶಿಯಲ್ ಮೀಡಿಯಾದಲ್ಲಿ ಹನ್ಸಿಕಾ ಹಾಗೂ ಸೋಹೈಲ್ ಮದುವೆಯ ಖರ್ಚು ಎಷ್ಟು ಎನ್ನುವ ಚರ್ಚೆ ನಡೀತಿದೆ. ಗ್ರೀಸ್‌ನಲ್ಲಿ ಶುರುವಾದ ಹನ್ಸಿಕಾ ಬ್ಯಾಚುಲರ್ ಪಾರ್ಟಿಯಿಂದ ಹಿಡಿದು ಮದುವೆ ಮದುವೆವರೆಗೆ ಬರೋಬ್ಬರಿ 20 ಕೋಟಿ ರೂ. ಖರ್ಚು ಆಗಿದೆ ಎನ್ನಲಾಗುತ್ತಿದೆ. ಬ್ಯಾಚುಲರ್ ಪಾರ್ಟಿ, ಮೆಹಂದಿ, ಅರಶಿನ ಶಾಸ್ತ್ರ, ಪ್ರೀ ವೆಡ್ಡಿಂಗ್ ಪಾರ್ಟಿ, ಸೂಫಿ ನೈಟ್, ಮದುವೆ ಹೀಗೆ ಪ್ರತಿಯೊಂದನ್ನು ವಿಜೃಂಬಣೆಯಿಂದ ನೆರವೇರಿಸಲಾಗಿತ್ತು.

₹3 ಲಕ್ಷ ಲೆಹಂಗಾ ತೊಟ್ಟಿದ್ದ ಹನ್ಸಿಕಾ
ಜೈಪುರದ ಮುಂದೋಟ ಕೋಟೆಯ 4 ದಿನಗಳ ಬಾಡಿಗೆ, ಅತಿಥಿಗಳಿಗೆ ಉಳಿದುಕೊಳ್ಳಲು ಮಾಡಿದ್ದ ವ್ಯವಸ್ಥೆಯ ಜೊತೆಗೆ ನಡೆದ ಮದುವೆ ಶಾಸ್ತ್ರಗಳು, ಕಾರ್ಯಕ್ರಮಗಳಿಗೆ ನೀರಿನಂತೆ ಚೆಲ್ಲಿದ್ದರು. ಸೂಫಿ ನೈಟ್‌ಗಾಗಿ ಹನ್ಸಿಕಾ ತೊಟ್ಟಿದ್ದ ಗೋಲ್ಡನ್ ಲೆಹಂಗಾ ಬೆಲೆಯೇ 3 ಲಕ್ಷ ರೂ. ಎನ್ನುವ ಮಾತುಗಳು ಕೇಳಿಬರ್ತಿದೆ. ಮದುವೆಗಾಗಿ ಹನ್ಸಿಕಾ- ಸೋಹೈಲ್ ಖರೀದಿಸಿದ್ದ, ಡಿಸೈನ್ ಮಾಡಿಸಿದ್ದ ಉಡುಗೆ ತೊಡುಗೆಗಳ ಬೆಲೆಯೇ ಬಹಳ ಹೆಚ್ಚು ಎನ್ನಲಾಗ್ತಿದೆ.

ಹೆಚ್ಚು ಹಣ ವ್ಯಯಿಸಿದ್ದು ಯಾರು?
ಬಾಲಿವುಡ್ ಸಿನಿಮಾಗಳಲ್ಲಿ ತೋರಿಸುವಂತೆ ಬಹಳ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಹನ್ಸಿಕಾ- ಸೋಹೈಲ್ ಕುಣಿದು ಸಂಭ್ರಮಿಸಿದ್ದರು. ಬಡ ಮಕ್ಕಳನ್ನು ಕೂಡ ಮದುವೆಗೆ ಆಹ್ವಾನಿಸಿದ್ದರು ಹನ್ಸಿಕಾ. ಇನ್ನು ಮದುವೆಗೆ ಖರ್ಚಾಗಿದೆ ಎನ್ನುಲಾಗುತ್ತಿರುವ 20 ಕೋಟಿಯಲ್ಲಿ ಯಾರು ಹೆಚ್ಚು ಖರ್ಚು ಮಾಡಿದ್ದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ನಟಿ ಹನ್ಸಿಕಾ ಕುಟುಂಬ ಸದಸ್ಯರು ಹೆಚ್ಚು ವ್ಯಯಿಸಿದ್ರಾ? ಇಲ್ಲ ಸೊಹೈಲ್ ಕುಟುಂಸ್ಥರು ಹೆಚ್ಚು ಖರ್ಚು ಮಾಡಿದ್ರಾ? ಎನ್ನುವ ಚರ್ಚೆ ನಡೀತಿದೆ.

ಕನ್ನಡ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ
ನಟಿ ಹನ್ಸಿಕಾ ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದವರು. ತೆಲುಗಿನ 'ದೇಶಮುದುರು' ಆಕೆ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ. ಮುಂದೆ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಾಯಕಿಯಾಗಿ ಮೋಡಿ ಮಾಡಿದರು. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಬಿಂದಾಸ್' ಚಿತ್ರದಲ್ಲೂ ಹನ್ಸಿಕಾ ನಟಿಸಿ ಗೆದ್ದಿದ್ದರು. ಇನ್ನು ತಮಿಳು ಸಿಂಬು ಜೊತೆ ಆಕೆಯ ಹೆಸರು ತಳುಕು ಹಾಕಿಕೊಂಡಿತ್ತು.