»   » ಖಾಸಗಿ ವಾಹಿನಿ ವರದಿಗಾರ್ತಿಯರ ಬೆನ್ನು ಬಿದ್ದ ಹುಚ್ಚ ವೆಂಕಟ್!

ಖಾಸಗಿ ವಾಹಿನಿ ವರದಿಗಾರ್ತಿಯರ ಬೆನ್ನು ಬಿದ್ದ ಹುಚ್ಚ ವೆಂಕಟ್!

By: ಹರಾ
Subscribe to Filmibeat Kannada

ಪುಣ್ಯಕ್ಕೆ ಯ್ಯೂಟ್ಯೂಬ್ ನಲ್ಲಿ ಮತ್ತು ಫೇಸ್ ಬುಕ್ ನಲ್ಲಿ 'ಹುಚ್ಚ ವೆಂಕಟ್' ಆರ್ಭಟ ಈಗ ತಣ್ಣಗಾಗಿದೆ. ಹಾಗಂದ ಮಾತ್ರಕ್ಕೆ 'ಹುಚ್ಚ ವೆಂಕಟ್' ಮತ್ತವನ 'ಹುಚ್ಚ ವೆಂಕಟ್ ಸೇನೆ' ನಿದ್ರಿಸುತ್ತಿದೆ ಅಂತಲ್ಲ. ಯಾರಿಗೂ ಗೊತ್ತಾಗದ ಹಾಗೆ, 'ಹುಚ್ಚ ವೆಂಕಟ್-2' ಸಿನಿಮಾಗೆ ತಯಾರಿ ನಡೆಸುತ್ತಿದೆ.

ಶತಯಗತಾಯ 'ಹುಚ್ಚ ವೆಂಕಟ್-2' ಸಿನಿಮಾ ಮಾಡಲೇಬೇಕು ಅಂತ ಪಣ ತೊಟ್ಟಿರುವ ಹುಚ್ಚ ವೆಂಕಟ್, ಬಜೆಟ್ ಗೋಸ್ಕರ ಬೆಂಗಳೂರಿನಿಂದ ಚೆನ್ನೈಗೆ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಓಡಾಡುತ್ತಿದ್ದಾರಂತೆ.

'ಹುಚ್ಚ ವೆಂಕಟ್' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಸೇಲ್ ಆದ್ರೆ, ಅದರಿಂದ ಬರುವ ದುಡ್ಡಲ್ಲಿ 'ಹುಚ್ಚ ವೆಂಕಟ್ -2' ರೆಡಿ ಮಾಡ್ತಾರಂತೆ. ಆದ್ರೆ, ದುರಾದೃಷ್ಟಕ್ಕೆ ಯಾವ ಚಾನೆಲ್ ನವರೂ 'ಹುಚ್ಚ ವೆಂಕಟ್' ಸಿನಿಮಾವನ್ನ ಕೊಂಡುಕೊಳ್ಳುತ್ತಿಲ್ಲ. [ಜನಪ್ರಿಯ ಕನ್ನಡ ಟಿವಿ ವಾಹಿನಿಗಳಿಗೆ ಧಮ್ಕಿ ಹಾಕಿದ ಹುಚ್ಚ ವೆಂಕಟ್]

huccha venkat

''ಸಿನಿಮಾ ಕೊಂಡುಕೊಳ್ಳದೆ ಹೋದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ'' ಅಂತ ಬ್ಲಾಕ್ ಮೇಲ್ ಮಾಡುತ್ತಿರುವ ವೆಂಕಟ್, ಹಾಗೂ ಹೀಗೂ ಸಾಲ ಮಾಡಿ ಬಜೆಟ್ ಹೊಂದಿಸಿಕೊಂಡಿದ್ದಾನಂತೆ. ಕಥೆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ದರೂ ಹೀರೋಯಿನ್ ಗಾಗಿ ತಲಾಶ್ ಮಾಡುತ್ತಿದ್ದಾನಂತೆ.

ಖಾಸಗಿ ವಾಹಿನಿಯ ಆಂಕರ್ ಮತ್ತು ವರದಿಗಾರ್ತಿಯರಿಗೆ ''ನೀವು ನನ್ನ ಸಿನಿಮಾಗೆ ಹೀರೋಯಿನ್ ಆಗಿ'' ಅಂತ ಬೆನ್ನುಬಿದ್ದಿದ್ದಾನಂತೆ. ಇದನ್ನ ಕೇಳಿಸಿಕೊಂಡ ಮಹಿಳಾ ವರದಿಗಾರರು ''ನಮ್ಮ ನಂಬರ್ ಅವರಿಗೆ ಕೊಟ್ಟವರ್ಯಾರಪ್ಪಾ'' ಅಂತ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. [ಫೇಸ್ ಬುಕ್ ನಲ್ಲಿ ''ಹುಚ್ಚು'' ವೆಂಕಟನಿಗೆ ಮಹಾ ಮಂಗಳಾರತಿ]

ಅಪ್ಪಿತಪ್ಪಿ ಈ ಕಡೆಯಿಂದ ರಿಪ್ಲೈ ಹೋದರೆ, ವೆಂಕಟನ ಕಡೆಯಿಂದ ಪೇಜ್ ಲೆಕ್ಕದಲ್ಲಿ ಮೆಸೇಜ್ ಗಳು ಬಂದು ಬೀಳುತ್ವೆ. ಒಂದ್ವೇಳೆ ಪ್ರತಿಕ್ರಿಯೆ ನೀಡದೆ ಹೋದರೆ ''ನಾನು ಸೂಸೈಡ್ ಮಾಡಿಕೊಳ್ಳುತ್ತೀನಿ'' ಅಂತ ಮೊಸಳೆ ಕಣ್ಣೀರು ಶುರುವಾಗುತ್ತಂತೆ. ಏನು ಮಾಡ್ಬೇಕು ಅಂತ ಗೊತ್ತಾಗದೆ ಪಾಪ, ಕೆಲ ವರದಿಗಾರ್ತಿಯರು ಕಕ್ಕಾಬಿಕ್ಕಿಯಾಗಿದ್ದಾರೆ. [ನಾಯಕಿಯನ್ನೇ ಕಿಡ್ನಾಪ್ ಮಾಡ್ತವ್ನಂತೆ ಹುಚ್ಚ ವೆಂಕಟ!]

'ಹುಚ್ಚ ವೆಂಕಟ್' ನಿಜವಾಗಲೂ ಸಿನಿಮಾ ಮಾಡ್ತಾನೋ ಇಲ್ವೋ ಗೊತ್ತಿಲ್ಲ. ಮಾಡಿದರೂ ಅದನ್ನ ನೋಡೋರು ಯಾರೋ ದೇವರೇ ಬಲ್ಲ! ಆದ್ರೆ, ಸಿನಿಮಾ ಹೆಸರಲ್ಲಿ ಹುಡುಗಿಯರನ್ನ ಧಂಗು ಬಡಿಸುತ್ತಿರುವುದು ಕೊಂಚ ಆತಂಕಕಾರಿ ವಿಷಯ.

English summary
Huccha Venkat is in news again. After being popular on Youtube, Huccha Venkat is forcing Leading Kannada Channels' Female Reporters to play lead in his 'Huccha Venkat-2' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada