ರಾಗಿಣಿ ದ್ವಿವೇದಿ 'ನಾಟಿಕೋಳಿ' ಮೇಲೆ ಎರಗಿದ 'ಹುಲಿ'
ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ಕಿರಿಕಿರಿ ಪ್ರಸಂಗಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಈ ಬಾರಿ ತುಪ್ಪದ ಬೆಡಗಿ ರಾಗಿಣಿ ಅವರಿಗೆ ಒಂದು ಅಹಿತಕರ ಪ್ರಸಂಗ ಎದುರಾಗಿದೆ. ಅದು ನಡೆದದ್ದು 'ನಾಟಿಕೋಳಿ' ಚಿತ್ರದ ಫೋಟೋ ಶೂಟ್ ಸಂದರ್ಭದಲ್ಲಿ.
ಶ್ರೀನಿವಾಸರಾಜು ಆಕ್ಷನ್ ಕಟ್ ಹೇಳುತ್ತಿರುವ ನಾಟಿಕೋಳಿ ಚಿತ್ರದ ಹಾಟ್ ಫೋಟೋ ಶೂಟ್ ವಿಲ್ಸನ್ ಗಾರ್ಡನ್ ಸ್ಟುಡಿಯೋದಲ್ಲಿ ಸದ್ದಿಲ್ಲದಂತೆ ನಡೆಯುತ್ತಿತ್ತು. ಅಲ್ಲಿಗೆ ಏಕಾಏಕಿ ಆಗಮಿಸಿದ ಹುಲಿ ಚಿತ್ರದ ನಿರ್ಮಾಪಕ ಶಿವಪ್ರಕಾಶ್ ಅವರು ಶ್ರೀನಿವಾಸರಾಜು ಹಾಗೂ ಚಿತ್ರದ ನಿರ್ಮಾಪಕ ವೆಂಕಟ್ ಮೇಲೆ ಹಲ್ಲೆ ಮಾಡಿದ್ದಾನೆ. ['ನಾಟಿ ಕೋಳಿ' ಸಾರಿಗೆ 'ರಾಗಿಣಿ'ಯ ಮಿರ್ಚಿ ಮಸಾಲೆ]

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಗಿಣಿ, ನನಗೇನು ಗೊತ್ತಿಲ್ಲ. ಅವರು ಯಾಕೆ ಹಾಗೆ ಮಾಡಿದರೋ ಏನೋ ಎಂದಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿದಾಗ ತಾವು ಘಟನಾ ಸ್ಥಳದಲ್ಲಿ ಇರಲಿಲ್ಲ. ನಾನು ನೇರಾನೇರಾ ಮಾತನಾಡುವ ಹುಡುಗಿ. ನನಗೆ ಯಾವ ಬಾಯ್ ಫ್ರೆಂಡೂ ಇಲ್ಲ ಎಂದಿದ್ದಾರೆ.
ವೆಂಕಟ್ಮೂವೀಸ್ಸಂಸ್ಥೆಯ ನಿರ್ಮಾಪಕನಾದ ನಾನು 'ನಾಟಿಕೋಳಿ' ಚಲನಚಿತ್ರದ ಫೋಟೋಶೂಟನ್ನು ಏಪ್ರಿಲ್ 29ರ ಸಂಜೆ 4 ಗಂಟೆಯಿಂದ, ಫೋಟೋಗ್ರಾಫರ್ ಶೀತಲ್ಜೈನ್ ರವರ ನಂ. 26 ವಿಲ್ಸನ್ಗಾರ್ಡನ್ ನ ಸ್ಟುಡಿಯೋದಲ್ಲಿ ನಮ್ಮ ಚಿತ್ರದ ನಾಯಕಿ ರಾಗಿಣಿ, ನಾಯಕ ಅರುಗೌಡರ ಫೋಟೋಶೂಟ್ ಮಾಡುತ್ತಿರಬೇಕಾದ್ರೆ, ಸಂಜೆ 7.25ಕ್ಕೆ ಬಂದ 'ಹುಲಿ' ಚಿತ್ರದ ನಿರ್ಮಾಪಕ ಶಿವಪ್ರಕಾಶ ಎಂಬುವವರು ಅಪ್ಪಣೆಯಿಲ್ಲದೆ ಒಳಗೆ ಪ್ರವೇಶಿಸಿದ್ದಲ್ಲದೇ.
ನಮ್ಮ ಚಿತ್ರದ ನಿರ್ದೆಶಕ ಶ್ರೀನಿವಾಸರಾಜು ಅವರಿಗೆ 'ರಾಗಿಣಿ ನನ್ನ ಗರ್ಲ್ಫ್ರೆಂಡ್, ಈ ಚಿತ್ರವನ್ನು ನಿರ್ದೇಶಿಸಿದ್ರೆ ಕೊಲೆ ಮಾಡುತ್ತೇನೆ' ಎಂದು ಅವರ ಕುತ್ತಿಗೆಗೆ ಕೈ ಹಾಕಿರುತ್ತಾನೆ. ತಡೆಯಲು ಬಂದ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುತ್ತಾನೆ ಎಂದು ನಿರ್ಮಾಪಕ ವೆಂಕಟ್ ದೂರಿನಲ್ಲಿ ತಿಳಿಸಿದ್ದಾರೆ.


Click it and Unblock the Notifications











