»   » 'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಜೊತೆ ಅಂಬರೀಶ್?

'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಜೊತೆ ಅಂಬರೀಶ್?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ಮತ್ತು ರೆಬೆಲ್ ಸ್ಟಾರ್ ಕಾಂಬಿನೇಷನ್ ಫ್ಲಾಪ್ ಆದ ಉದಾಹರಣೆಯೇ ಇಲ್ಲ. 'ಅಣ್ಣಾವ್ರು', 'ಬುಲ್ ಬುಲ್' ಮತ್ತು 'ಅಂಬರೀಶ' ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸೀನಿಯರ್ ಸ್ಟಾರ್ ಅಂಬರೀಶ್ ತೆರೆಹಂಚಿಕೊಂಡು ನಿಮ್ಮನ್ನೆಲ್ಲಾ ರಂಜಿಸಿದ್ದರು.

ಇಬ್ಬರ ಜುಗಲ್ಬಂದಿ 'ಜಗ್ಗು ದಾದಾ' ಸಿನಿಮಾದಲ್ಲೂ ಮುಂದುವರೆಯಲಿದೆಯಾ? ಹೀಗೊಂದು ಅನುಮಾನ ನಮಗೆ ಮೂಡಲು ಕಾರಣ ಈ ಫೋಟೋ....

in-pic-darshan-and-ambareesh-in-jaggu-dada-shooting-spot

ದರ್ಶನ್ ಅಭಿನಯಿಸುತ್ತಿರುವ 'ಜಗ್ಗು ದಾದಾ' ಶೂಟಿಂಗ್ ಸ್ಪಾಟ್ ನಲ್ಲಿ ಕ್ಲಿಕ್ ಆಗಿರುವ ಫೋಟೋ ಇದು. ದರ್ಶನ್, ನಿರ್ದೇಶಕ ರಾಘವೇಂದ್ರ ಹೆಗಡೆ ಜೊತೆ ಅಂಬರೀಶ್ ರನ್ನ ನೀವು ಫೋಟೋದಲ್ಲಿ ಕಾಣಬಹುದು. [ದರ್ಶನ್ ಅಭಿಮಾನಿಗಳಿಗೆ 'ಜಗ್ಗುದಾದ' ಟೀಸರ್ ಗಿಫ್ಟ್]

in-pic-darshan-and-ambareesh-in-jaggu-dada-shooting-spot

ಹಾಗಾದ್ರೆ, 'ಜಗ್ಗು ದಾದಾ' ಚಿತ್ರದಲ್ಲಿ ಅಂಬರೀಶ್ ಮಿಂಚ್ತಾರಾ? ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. 'ಜಗ್ಗು ದಾದಾ' ಚಿತ್ರತಂಡ ಹೇಳುವ ಪ್ರಕಾರ, ಶೂಟಿಂಗ್ ಸ್ಪಾಟ್ ಗೆ ಅಂಬರೀಶ್ ಭೇಟಿ ನೀಡಿದ್ದರು ಅಷ್ಟೆ. [ಮತ್ತೆ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ ರೋಮ್ಯಾನ್ಸ್]

ರಾಜಕೀಯ, ಎಲೆಕ್ಷನ್ ಕಿರಿಕಿರಿ ಮಧ್ಯೆ 'ಜಗ್ಗು ದಾದಾ' ಶೂಟಿಂಗ್ ನೋಡಲು ಅಂಬಿ ಬಂದಿದ್ದಾರೆ ಅಂದ್ರೆ ಏನಾದರೂ ಸ್ಪೆಷಲ್ ಇರಲೇಬೇಕು. ನೋಡೋಣ, 'ಜಗ್ಗು ದಾದಾ' ಅಡ್ಡದಿಂದ ಏನೇನು ಸ್ಪೆಷಲ್ ಕಾದಿದೆ ಅಂತ. ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Is Kannada Actor, Congress Politician, Housing Minister Ambareesh acting in Darshan starrer 'Jaggu Dada'? This question has arised as Ambareesh visited 'Jaggu Dada' shooting spot recently.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada