For Quick Alerts
  ALLOW NOTIFICATIONS  
  For Daily Alerts

  'ಏನೋ ಏನೋ ಆಗಿದೆ...' ಕೃತಿಗೆ ಸಂಥಿಂಗ್ ಶುರುವಾಗಿದೆ?!

  By ಹರಾ
  |

  'ಏನೋ ಏನೋ ಆಗಿದೆ...ನನಗೆ ಗೊತ್ತೇ ಆಗದೆ...' ಅಂತ 'ಗೂಗ್ಲಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ರೋಡು-ಮಾಲು ಸುತ್ತಿದ್ದ ನಟಿ ಕೃತಿ ಖರಬಂಧಗೆ ನಿಜ ಜೀವನದಲ್ಲೂ ಸಂಥಿಂಗ್ ಸಂಥಿಂಗ್ ಶುರುವಾಗಿದ್ಯಂತೆ.

  ಹಾಗಂತ, ಗಾಸಿಪ್ ಪಂಡಿತರ ನಾಲಿಗೆ ಮೇಲೆ ನುಲಿದಾಡುತ್ತಿದ್ದಾರೆ ಕೃತಿ ಖರಬಂಧ.

  ಇದುವರೆಗೂ ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಕೃತಿ ಖರಬಂಧ ಇದೀಗ ಬಾಲಿವುಡ್ ಕಡೆ ಮುಖ ಮಾಡಿರೋದು ನಿಮಗೆ ಗೊತ್ತಿದೆ. ಮಹೇಶ್ ಭಟ್ ನಿರ್ಮಾಣದಲ್ಲಿ ವಿಕ್ರಮ್ ಭಟ್ ನಿರ್ದೇಶಿಸುತ್ತಿರುವ 'Raaz 4' (Raaz Reboot) ಚಿತ್ರದ ಮೂಲಕ ಬಿಟೌನ್ ಗೆ ಪದಾರ್ಪಣೆ ಮಾಡಿದ್ದಾರೆ ಕೃತಿ ಖರಬಂಧ. [ಬಿಟೌನ್ ನ ಕಿಸ್ಸರ್ ಬಾಯ್ ಜೊತೆ 'ಗೂಗ್ಲಿ' ಬೆಡಗಿ ರೊಮ್ಯಾನ್ಸ್..!]

  ಈ ಗ್ಯಾಪ್ ನಲ್ಲೇ 'Raaz 4' ಚಿತ್ರದ ನಾಯಕ ಗೌರವ್ ಅರೋರ ಜೊತೆ ಕೃತಿ ಖರಬಂಧ ರವರ ಲವ್ ಟ್ರ್ಯಾಕ್ ಓಪನ್ ಆಗಿದೆ ಅಂತಾರೆ ಅವರನ್ನ ಬಲ್ಲವರು. ಮುಂದೆ ಓದಿ....

  ರೊಮೇನಿಯಾದಲ್ಲಿ ಇಬ್ಬರ ಪ್ಯಾರ್.!

  ರೊಮೇನಿಯಾದಲ್ಲಿ ಇಬ್ಬರ ಪ್ಯಾರ್.!

  'Raaz 4' ಚಿತ್ರದ ಬಹುತೇಕ ಚಿತ್ರೀಕರಣ Romania ದಲ್ಲೇ ನಡೆದಿದೆ. ಇಲ್ಲೇ ಇಬ್ಬರ ಹೃದಯದಲ್ಲಿ ಗಿಟಾರ್ ಗುನುಗಲು ಆರಂಭವಾಗಿದ್ದಂತೆ. [ಕುರುಡಿಯಾದ ಕ್ಯೂಟ್ ಹುಡುಗಿ ಕೃತಿ ಖರಬಂಧ]

  ಗೌರವ್ ಜೊತೆಗೆ ಪ್ರಯಾಣ

  ಗೌರವ್ ಜೊತೆಗೆ ಪ್ರಯಾಣ

  ಜೊತೆಯಲ್ಲೇ ನಟಿಸುತ್ತಾರೆ ಅಂದ್ಮೇಲೆ ಕೃತಿ ಹಾಗೂ ಗೌರವ್ ಮಧ್ಯೆ ಫ್ರೆಂಡ್ ಶಿಪ್ ಇರಬಹುದು. ಆದ್ರೆ, ಇಬ್ಬರ ಫ್ರೆಂಡ್ ಶಿಪ್ ಎಕ್ಸ್ ಟ್ರಾ ಸ್ಪೆಷಲ್ ಅಂತ ಇಡೀ 'Raaz 4' ಚಿತ್ರತಂಡಕ್ಕೆ ಗೊತ್ತಾಗಿದ್ದು, ಗೌರವ್ ಜೊತೆ ಕೃತಿ Sibiu ಗೆ ಪ್ರಯಾಣ ಮಾಡಿದ್ಮೇಲೆ.

  ಪ್ರಯಾಣ ಯಾಕೆ?

  ಪ್ರಯಾಣ ಯಾಕೆ?

  Sinaia ಎಂಬ ಪ್ರದೇಶದಲ್ಲಿ ನಡೆಯುತ್ತಿದ್ದ ಚಿತ್ರೀಕರಣ Sibiu ಗೆ ಶಿಫ್ಟ್ ಆದಾಗ, ತಮಗೆ ನೀಡಿದ್ದ ಕಾರ್ ಬಿಟ್ಟು ಗೌರವ್ ಅರೋರ ಜೊತೆ 200 ಕೆ.ಮಿ ಪಯಣ ಕೈಗೊಂಡರಂತೆ ಕೃತಿ ಖರಬಂಧ.

  ನಿರ್ಮಾಪಕ ಮಹೇಶ್ ಭಟ್ ಏನಂತಾರೆ?

  ನಿರ್ಮಾಪಕ ಮಹೇಶ್ ಭಟ್ ಏನಂತಾರೆ?

  ''ಗಾಳಿ ಸುದ್ದಿ ಇರುವುದು ಸಹಜ. ಇಬ್ಬರ ಮಧ್ಯೆ ತೆರೆ ಮೇಲೆ ಕೆಮಿಸ್ಟ್ರಿ ನೋಡಿದ್ರೆ ಹಾಗೆ ಅನಿಸ್ಬಹುದು'' ಅಂತಾರೆ ನಿರ್ಮಾಪಕ ಮಹೇಶ್ ಭಟ್.

  ಜಗಳ ಕೂಡ ಮಾಡಿಕೊಂಡಿದ್ರಂತೆ!

  ಜಗಳ ಕೂಡ ಮಾಡಿಕೊಂಡಿದ್ರಂತೆ!

  Bucharest ನಲ್ಲಿ ಕೊನೆ ಶೆಡ್ಯೂಲ್ ನ ಚಿತ್ರೀಕರಣ ನಡೆಯುತ್ತಿದ್ದಾಗ ಕೃತಿ ಹಾಗೂ ಗೌರವ್ ನಡುವೆ ದೊಡ್ಡ ವಾಗ್ವಾದವೇ ನಡೆದಿತ್ತಂತೆ.

  ಈಗ ಪ್ಯಾಚ್ ಅಪ್!

  ಈಗ ಪ್ಯಾಚ್ ಅಪ್!

  ರೊಮೇನಿಯಾ ಬಿಟ್ಟು ಮುಂಬೈಗೆ ವಾಪಸ್ ಆಗುತ್ತಿದ್ದಂತೆ ಕೃತಿ ಮತ್ತು ಗೌರವ್ ಪ್ಯಾಚ್ ಆಪ್ ಆಗಿದ್ದಾರೆ ಎನ್ನಲಾಗಿದೆ.

  ಕೃತಿ ತುಟಿಕ್ ಪಿಟಿಕ್ ಎಂದಿಲ್ಲ

  ಕೃತಿ ತುಟಿಕ್ ಪಿಟಿಕ್ ಎಂದಿಲ್ಲ

  ಕೃತಿ ಬಗ್ಗೆ ಇಷ್ಟೆಲ್ಲಾ ಮಾತುಗಳು ಕೇಳಿಬಂದರೂ, ಆಕೆ ಏನನ್ನೂ ಹೇಳ ಬಯಸಿಲ್ಲ.

  2012 ರಲ್ಲೂ ಗುಸು ಗುಸು ಇತ್ತು!

  2012 ರಲ್ಲೂ ಗುಸು ಗುಸು ಇತ್ತು!

  ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಸಂಬಂಧಿ ಸುಮಂತ್ ಕುಮಾರ್ ಜೊತೆಗೂ ಕೃತಿ ಖರಬಂಧ ಹೆಸರು ತಳುಕು ಹಾಕಿಕೊಂಡಿತ್ತು.

  ಗೌರವ್ ಅರೋರ ರವರದ್ದೂ ಅದೇ ಕಥೆ

  ಗೌರವ್ ಅರೋರ ರವರದ್ದೂ ಅದೇ ಕಥೆ

  ಈಗಾಗಲೇ ಕೃತಿ ಸನೋನ್ ರಿಂದ ಬ್ರೇಕಪ್ ಆಗಿರುವ ಗೌರವ್ ಅರೋರ ಕೂಡ ತಮ್ಮ ಹೊಸ ಪ್ರೇಮಕಥೆ ಬಗ್ಗೆ ಎಲ್ಲೂ ಮಾತನಾಡಿಲ್ಲ.

  English summary
  Is Kriti Kharbanda dating someone? According to the rumor mills, Kriti Kharbanda is in a relationship with her 'Razz Reboot' Actor Gaurav Arora.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X