»   » 'ನಟ ಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರವೇನು.?

'ನಟ ಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರವೇನು.?

Posted By:
Subscribe to Filmibeat Kannada
ನಟ ಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರವೇನು.? | Filmibeat Kannada

ಕಾಲೇಜು ಹುಡುಗ, ಪೊಲೀಸ್ ಆಫೀಸರ್, ರೇಡಿಯೋ ಜಾಕಿ, ಐ.ಎ.ಎಸ್ ಆಫೀಸರ್... ಹೀಗೆ ಇಲ್ಲಿಯವರೆಗೂ ಭಿನ್ನ-ವಿಭಿನ್ನ ಪಾತ್ರಗಳಿಗಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಣ್ಣ ಹಚ್ಚಿದ್ದಾರೆ.

ಹಲವಾರು ಪಾತ್ರಗಳಿಗೆ ಜೀವ ತುಂಬಿರುವ ಅಣ್ಣಾವ್ರ ಮಗ ಅಪ್ಪು ಇದೀಗ ಪವನ್ ಒಡೆಯರ್ ನಿರ್ದೇಶನದ 'ನಟ ಸಾರ್ವಭೌಮ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ 'ನಟ ಸಾರ್ವಭೌಮ' ಚಿತ್ರದ ಫೋಟೋಶೂಟ್ ಮುಗಿದಿದ್ದು, ಚಿತ್ರೀಕರಣ ಆರಂಭಗೊಂಡಿದೆ. ಆದ್ರೆ, ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರ ಏನು ಎಂಬುದು ಮಾತ್ರ ಬಹಿರಂಗ ಆಗಿಲ್ಲ.

ಆದ್ರೆ, ಚಿತ್ರದ ಫೋಟೋಶೂಟ್ ಫೋಟೋಗಳನ್ನು ನೋಡಿದವರು ಮಾತ್ರ ಏನೇನೋ ಊಹಿಸಿಕೊಳ್ಳುತ್ತಿದ್ದಾರೆ. ಫೋಟೋಶೂಟ್ ನಲ್ಲಿ ಹಲವು ವಿಡಿಯೋ ಕ್ಯಾಮರಾಗಳನ್ನ ಬಳಸಿಕೊಳ್ಳಲಾಗಿದೆ. ಸಾಲದಕ್ಕೂ, ಅಪ್ಪು ಕೈಯಲ್ಲೂ ಒಂದು ಕ್ಯಾಮರಾ ನೀಡಲಾಗಿದೆ. ಹೀಗಾಗಿ, 'ನಟ ಸಾರ್ವಭೌಮ' ಚಿತ್ರದಲ್ಲಿ ಅಪ್ಪು ರಿಪೋರ್ಟರ್ ಅಥವಾ ಫೋಟೋ ಜರ್ನಲಿಸ್ಟ್ ಪಾತ್ರ ನಿರ್ವಹಿಸುತ್ತಿರಬಹುದು ಎಂಬುದು ಹಲವರ ಊಹೆ.

Is Puneeth Rajkumar playing Reporter role in Nata Sarvabhauma.?

'ನಟ ಸಾರ್ವಭೌಮ' ಚಿತ್ರದ ಇಂಟ್ರೊಡಕ್ಷನ್ ಸೀನ್ ಶೂಟಿಂಗ್

ಅಪ್ಪು ಫೋಟೋ ಜರ್ನಲಿಸ್ಟ್ ಅಥವಾ ರಿಪೋರ್ಟರ್ ಆಗಿದ್ದರೆ, ಚಿತ್ರಕ್ಕೆ 'ನಟ ಸಾರ್ವಭೌಮ' ಎಂಬ ಶೀರ್ಷಿಕೆ ಯಾಕೆ.? ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೆ ಕುತೂಹಲ ಕೆರಳಿಸಿರುವ ನಿರ್ದೇಶಕ ಪವನ್ ಒಡೆಯರ್, ಎಲ್ಲವನ್ನೂ ಸಸ್ಪೆನ್ಸ್ ನಲ್ಲೇ ಇಟ್ಟು ಶೂಟಿಂಗ್ ಮೇಲೆ ಗಮನ ಹರಿಸಿದ್ದಾರೆ.

Is Puneeth Rajkumar playing Reporter role in Nata Sarvabhauma.?

ಅಂದ್ಹಾಗೆ, 'ನಟ ಸಾರ್ವಭೌಮ' ಚಿತ್ರದಲ್ಲಿ ಪುನೀತ್ ಗೆ ರಚಿತಾ ರಾಮ್ ನಾಯಕಿ. ಅಪ್ಪು ಫೋಟೋ ಜರ್ನಲಿಸ್ಟ್ ಆಗಿದ್ದರೆ, ರಚಿತಾ ರಾಮ್ ಗೆ ಏನು ಕೆಲಸ ಅಂತ ಕೇಳ್ಬೇಡಿ. ಯಾಕಂದ್ರೆ, ಅದೂ ಕೂಡ ಸದ್ಯಕ್ಕೆ ಸಸ್ಪೆನ್ಸ್.

English summary
Is Puneeth Rajkumar playing Reporter role in Pawan Wadeyar directorial 'Nata Sarvabhauma'.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X