For Quick Alerts
  ALLOW NOTIFICATIONS  
  For Daily Alerts

  "ಹಿಂಸೆ ಕೊಟ್ಟ ಚೈತು.. ಅದಕ್ಕೆ ಡಿವೋರ್ಸ್": ಅತ್ತೆ ಬಳಿ ನೋವು ತೋಡಿಕೊಂಡ ಸಮಂತಾ?

  |

  ಸೌತ್ ಬ್ಯೂಟಿ ಸಮಂತಾ ರುತ್‌ಪ್ರಭ್ ಕಾರುಬಾರು ಮುಂದುವರೆದಿದೆ. ಸಿನಿಮಾ ಮಾಡಲಿ ಮಾಡದೇ ಇರಲಿ ಸ್ಯಾಮ್ ಸುದ್ದಿಯಲ್ಲಿ ಇರ್ತಾರೆ. ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರೂ ಸುದ್ದಿ, ಮಾಡದೆ ಇದ್ದರೂ ಸುದ್ದಿ ಎನ್ನುವಂತಾಗಿದೆ. 'ಪುಷ್ಪ' ಚಿತ್ರದ ಐಟಂ ಸಾಂಗ್‌ನಲ್ಲಿ ಕುಣಿದ ಮೇಲೆ ಚೆನ್ನೈ ಚೆಲುವೆ ಕ್ರೇಜ್ ಡಬ್ ಆಗಿಬಿಡ್ತು. ಅದಕ್ಕೆ ಕಾರಣ ನಾಗಚೈತನ್ಯಾಗೆ ಡೈವೋರ್ಸ್ ಕೊಟ್ಟಿದ್ದು. ಆರೇಳು ವರ್ಷ ಪ್ರೀತಿಸಿ ಮದುವೆ ಆಗಿದ್ದ ಜೋಡಿ ನಾಲ್ಕು ವರ್ಷ ಕೂಡ ಒಟ್ಟಿಗೆ ಇರದೇ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಸಮಂತಾ- ನಾಗಚೈತನ್ಯಾ ದೂರಾಗಲೂ ಕಾರಣ ಏನು ಎನ್ನುವುದು ರಹಸ್ಯವಾಗಿಯೇ ಉಳಿದಿದೆ.

  ಡೈವೋರ್ಸ್ ನಂತರ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಸಮಂತಾ ಇದ್ದಾರೆ. ಅತ್ತ ಚೈತು ಕೂಡ ಸಿನಿಮಾಗಳಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಸಮಂತಾ ಬಗ್ಗೆ ಸಾಕಷ್ಟು ಗುಸುಗುಸು ಕೇಳಿ ಬಂದಿತ್ತು. ಸ್ಯಾಮ್ ಆರೋಗಯದಲ್ಲಿ ಏರುಪೇರಾಗಿದೆ. ಆಕೆ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾರೆ, ಸದ್ಗುರು ಸಲಹೆಯಂತೆ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದಾರೆ ಹೀಗೆ ಹತ್ತು ಹಲವು ವದಂತಿಗಳು ಹರಿದಾಡಿತ್ತು. ಸಮಂತಾ ಪರ ಆಕೆಯ ಮ್ಯಾನೇಜರ್ ಪ್ರತಿಕ್ರಿಯಿಸಿ "ಸಮಂತಾ ಆರೋಗ್ಯವಾಗಿದ್ದಾರೆ, ವದಂತಿಗಳನ್ನು ಯಾರು ನಂಬಬೇಡಿ" ಎಂದು ಹೇಳಿದ್ದರು.

  ಬಾಲಿವುಡ್ ಬ್ಯೂಟಿ ಅಲ್ಲ, 'ಪುಷ್ಪ'- 2 ಐಟಂ ಸಾಂಗ್‌ನಲ್ಲಿ ಕುಣಿಯೋದು ಆ 'ಲೋಕಲ್' ಹುಡುಗಿ?ಬಾಲಿವುಡ್ ಬ್ಯೂಟಿ ಅಲ್ಲ, 'ಪುಷ್ಪ'- 2 ಐಟಂ ಸಾಂಗ್‌ನಲ್ಲಿ ಕುಣಿಯೋದು ಆ 'ಲೋಕಲ್' ಹುಡುಗಿ?

  ಇನ್ನು ಕಳೆದ ಕೆಲ ತಿಂಗಳುಗಳಿಂದ ಸಮಂತಾ ಹೆಸರು ಟ್ರೆಂಡಿಂಗ್‌ನಲ್ಲಿದೆ. ಹಾಲಿವುಡ್ ಸಿನಿಮಾದಲ್ಲೂ ಬಣ್ಣ ಹಚ್ಚಿ ನಟಿಸಿದ್ದಾರೆ. ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚಿದ್ದು, ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದ್ಕಡೆ ಯಶೋಧ ಎನ್ನುವ ಮತ್ತೊಂದು ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡಿದೆ.

  ಚೈತು ತಾಯಿಯನ್ನು ಭೇಟಿಯಾದ ಸ್ಯಾಮ್?

  ಚೈತು ತಾಯಿಯನ್ನು ಭೇಟಿಯಾದ ಸ್ಯಾಮ್?

  ಸಮಂತಾ ಕುರಿತು ದಿನಕ್ಕೊಂದು ಸುದ್ದಿ ವೈರಲ್ ಆಗ್ತಿದೆ. ಸದ್ಯ ಸ್ಯಾಮ್ ನಾಗಚೈತನ್ಯಾ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. "ನಿಮ್ಮ ಮಗ ನನಗೆ ಹಿಂಸೆ ಕೊಟ್ಟ, ಅದೇ ಕಾರಣಕ್ಕೆ ನಾನು ಡೈವೋರ್ಸ್ ಕೊಟ್ಟೆ, ಮದುವೆ ನಂತರ ಚೈತು ಬದಲಾಗಿದ್ದರು, ನನ್ನನ್ನು ಕಂಟ್ರೋಲ್ ಮಾಡುತ್ತಿದ್ದರು. ಇದು ನನಗೆ ಇಷ್ಟವಾಗಲಿಲ್ಲ" ಎಂದು ಮಾಜಿ ಅತ್ತೆ ಬಳಿ ಹೇಳಿಕೊಂಡಿದ್ದಾರೆ ಎನ್ನುವ ಚರ್ಚೆ ಫಿಲ್ಮ್‌ನಗರ್‌ನಲ್ಲಿ ನಡೀತಿದೆ.

  ಚರ್ಮ ಸಮಸ್ಯೆಯ ಚಿಕಿತ್ಸೆಗಾಗಿ ಅಮೆರಿಕಾಗೆ ಸಮಂತಾ? ಮ್ಯಾನೇಜರ್ ಹೇಳಿದ್ದೇನು?ಚರ್ಮ ಸಮಸ್ಯೆಯ ಚಿಕಿತ್ಸೆಗಾಗಿ ಅಮೆರಿಕಾಗೆ ಸಮಂತಾ? ಮ್ಯಾನೇಜರ್ ಹೇಳಿದ್ದೇನು?

  ಈ ಸಿನಿಮಾ ಮಾಡ್ಬೇಡ, ಆ ಡ್ರೆಸ್ ಹಾಕ್ಬೇಡ!

  ಈ ಸಿನಿಮಾ ಮಾಡ್ಬೇಡ, ಆ ಡ್ರೆಸ್ ಹಾಕ್ಬೇಡ!

  "ಮದುವೆ ನಂತರ ಮೊದಲಿನ ತರ ಚೈತು ಇರಲಿಲ್ಲ. ಈ ಸಿನಿಮಾ ಮಾಡಬೇಡ, ಆ ಡ್ರೆಸ್ ಹಾಕಬೇಡ, ಅವರ ಜೊತೆ ಮಾತನಾಡಬೇಡ ಎಂದು ಹೇಳುತ್ತಿದ್ದರು. ಇದರಿಂದ ನನ್ನ ಫ್ರೀಡಂ ಹೋಯ್ತು. ಅಷ್ಟೇ ಅಲ್ಲ ಎಷ್ಟು ದಿನ ಮಾತು ಬಿಟ್ಟರು ಚೈತು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಅಕ್ಕಿನೇನಿ ಫ್ಯಾಮಿಲಿ ಕೂಡ ಆತನಿಗೆ ಬೆಂಬಲವಾಗಿ ನಿಂತಿದ್ದರು. ನನ್ನ ಆತ್ಮಾಭಿಮಾನಕ್ಕೆ ಕುಂದು ಬಂದ ಹಿನ್ನೆಲೆಯಲ್ಲಿ ಡೈವೋರ್ಸ್ ತೆಗೆದುಕೊಂಡೆ" ಎಂದು ಸಮಂತಾ ಅತ್ತೆ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದು ಎಷ್ಟು ನಿಜ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ಅಂದಹಾಗೆ ಚೈತು ನಾಗಾರ್ಜುನಾ ಹಾಗೂ ಲಕ್ಷ್ಮಿ ದಗ್ಗುಬಾಟಿ ಪುತ್ರ. ಲಕ್ಷ್ಮಿ ದಗ್ಗುಬಾಟಿ ಅವರಿಗೆ ನಾಗ್ ಡೈವೋರ್ಸ್ ಕೊಟ್ಟು ನಟಿ ಅಮಲಾ ಅವರನ್ನು ಮದುವೆ ಆಗಿದ್ದರು.

  ಸಮಂತಾ ಪೋಸ್ಟ್ ವೈರಲ್

  ಸಮಂತಾ ಪೋಸ್ಟ್ ವೈರಲ್

  ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿ ಇರುತ್ತಿದ್ದ ಸಮಂತಾ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದರು. ಯಾವುದೇ ಪೋಸ್ಟ್ ಮಾಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಸಮಂತಾ ತನ್ನ ಮುದ್ದಿನ ನಾಯಿಯ ಫೋಟೊ ಶೇರ್ ಮಾಡಿ ''ಹಿಂದಡಿ ಇಟ್ಟೆ ಆದರೆ ಸೋತಿಲ್ಲ" ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾಕಷ್ಟು ಜನ ಸೆಲೆಬ್ರೆಟಿಗಳು ಪ್ರತಿಕ್ರಿಯಿಸಿ "ಮೋರ್ ಪವರ್ ಟು ಯು, ಬಿ ಸ್ಟ್ರಾಂಗ್" ಎಂದು ಕಾಮೆಂಟ್ ಮಾಡಿದ್ದರು.

  'ದಿ ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಸ್ಯಾಮ್

  'ದಿ ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಸ್ಯಾಮ್

  ಭಾರತೀಯ ಚಿತ್ರರಂಗದಲ್ಲಿ ಸದ್ಯ ವೆಬ್‌ ಸೀರಿಸ್ ಟ್ರೆಂಡ್ ನಡೀತಿದೆ. ಸೂಪರ್ ಸ್ಟಾರ್‌ಗಳೇ ವೆಬ್‌ ಸಿರೀಸ್‌ನಲ್ಲಿ ನಟಿಸಲು ಮುಂದಾಗಿದ್ದಾರೆ. 'ದಿ ಫ್ಯಾಮಿಲಿಮ್ಯಾನ್- 2' ಸೀರಿಸ್‌ ನಂತರ ಸಮಂತಾ 'ದಿ ಸಿಟಾಡೆಲ್' ಅನ್ನೋ ಮತ್ತೊಂದು ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದಕ್ಕಾಗಿ ಹಿಂದಿ ಭಾಷೆಯನ್ನು ಕಲಿಯುತ್ತಿದ್ದಾರಂತೆ. 90ರ ದಶಕದಲ್ಲಿ ನಡೆಯುವ ಈ ಕಥೆಯನಲ್ಲಿ ಬಹಳ ವಿಭಿನ್ನ ಪಾತ್ರದಲ್ಲಿ ಸ್ಯಾಮ್ ನಟಿಸ್ತಿದ್ದಾರೆ. ನವೆಂಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ.

  English summary
  Is this the actual reason why Samantha divorced Naga Chaitanya. Know more.
  Monday, October 10, 2022, 12:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X