For Quick Alerts
  ALLOW NOTIFICATIONS  
  For Daily Alerts

  ಯಶ್ ಹೊಸ ಸಿನಿಮಾಗೆ ದಕ್ಷಿಣ ಭಾರತದ ಸ್ಟಾರ್ ನಟಿ ನಾಯಕಿ?

  |

  ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್-2 ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣ ಭಾಕಿಯುಳಿಸಿಕೊಂಡಿದೆ. ಲಾಕ್ ಡೌನ್ ಪರಿಣಾಮ ಚಿತ್ರೀಕರಣ ಸದ್ಯ ಸ್ಥಗಿತವಾಗಿದೆ.

  ನಿಮ್ಮ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಇದೆ | Pranitha Helping the needy | Filmibeat kannada

  ಸದ್ಯ ಲಾಕ್ ಡೌನ್ ಸಮಯವನ್ನು ಅನೇಕ ನಿರ್ದೇಶಕರು ಮತ್ತು ನಟರು ಮುಂದಿನ ಸಿನಿಮಾಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ನಿರ್ದೇಶಕರು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ, ನಾಯಕರು ಮುಂದಿನ ಸಿನಿಮಾದ ಮಾತುಕತೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಯಶ್ ಕೂಡ ಹೊಸ ಸಿನಿಮಾಗೆ ಸಹಿ ಮಾಡಿದ್ದು, ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

  ಕೆಜಿಎಫ್-2 ನಂತರ ಯಶ್ ಹೊಸ ಸಿನಿಮಾ

  ಕೆಜಿಎಫ್-2 ನಂತರ ಯಶ್ ಹೊಸ ಸಿನಿಮಾ

  ರಾಕಿಂಗ್ ಸ್ಟಾರ್ ಯಶ್ ಸಹ ಮುಂದಿನ ಸಿನಿಮಾದ ಮಾತುಕತೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಯಶ್ ಹೊಸ ಸಿನಿಮಾಗೆ ಸಹಿ ಮಾಡಿದ್ದಾರಂತೆ. ಈ ಲಾಕ್ ಡೌನ್ ಸಮಯದಲ್ಲಿ ಸುಮ್ಮನೆ ಕೂರದೆ ಯಶ್ ಮುಂದಿನ ಹೊಸ ಸಿನಿಮಾದ ತಯಾರಿಯಲ್ಲಿದ್ದು, ಪ್ರಿ-ಪ್ರೊಡಕ್ಷನ್ ಕೆಲಸ ಸಹ ನಡೆಯುತ್ತಿದೆಯಂತೆ.

  ಯಶ್ ಗೆ ಟಾಲಿವುಡ್ ಸ್ಟಾರ್ ನಟಿ ನಾಯಕಿ

  ಯಶ್ ಗೆ ಟಾಲಿವುಡ್ ಸ್ಟಾರ್ ನಟಿ ನಾಯಕಿ

  ವಿಶೇಷ ಅಂದರೆ ಯಶ್ ಮುಂದಿನ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಅದು ಮತ್ಯಾರು ಅಲ್ಲ ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

  ತಮನ್ನಾ ಗ್ರೀನ್ ಸಿಗ್ನಲ್ ಗೆ ಕಾಯುತ್ತಿದೆ ಚಿತ್ರತಂಡ

  ತಮನ್ನಾ ಗ್ರೀನ್ ಸಿಗ್ನಲ್ ಗೆ ಕಾಯುತ್ತಿದೆ ಚಿತ್ರತಂಡ

  ಈಗಾಗಲೆ ನಿರ್ಮಾಪಕರ ತಮನ್ನಾ ಜೊತೆ ಮಾತುಕತೆ ನಡೆಸಿದ್ದಾರಂತೆ. ಆದರೆ ತಮನ್ನಾ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲವಂತೆ. ಅಂದ್ಹಾಗೆ ಈಗಾಗಲೆ ತಮನ್ನಾ ಯಶ್ ಜೊತೆ ಕೆಜಿಎಫ್ ಸಿನಿಮಾದ ಹಾಡೋಂದರಲ್ಲಿ ಹೆಜ್ಜೆಹಾಕಿದ್ದಾರೆ. ಈಗ ಮತ್ತೆ ಯಶ್ ಮುಂದಿನ ಸಿನಿಮಾಗೆ ನಾಯಕಿಯಾಗುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  ಎರಡನೇ ಬಾರಿ ಯಶ್ ಜೊತೆ ತಮನ್ನಾ

  ಎರಡನೇ ಬಾರಿ ಯಶ್ ಜೊತೆ ತಮನ್ನಾ

  ಒಂದು ಹಾಡಿನಲ್ಲಿಯೆ ಮೋಡಿ ಮಾಡಿದ್ದ ಯಶ್ ಮತ್ತು ತಮನ್ನಾ ಜೋಡಿ ಸಂಪೂರ್ಣ ಸಿನಿಮಾದಲ್ಲಿ ಒಟ್ಟಿಗೆ ನಟಿಸುವುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅಂದ್ಹಾಗೆ ಯಶ್ ಮುಂದಿನ ಸಿನಿಮಾಗೆ ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗಿತ್ತು.

  ಪುರಿ ಜಗನ್ನಾಥ್ ಜೊತೆ ಯಶ್ ಸಿನಿಮಾ?

  ಪುರಿ ಜಗನ್ನಾಥ್ ಜೊತೆ ಯಶ್ ಸಿನಿಮಾ?

  ಈ ಬಗ್ಗೆ ಯಶ್ ತೆಲುಗು ಮಾಧ್ಯಮವೊಂದರಲ್ಲಿ ಮಾತನಾಡುವ ವೇಳೆ ಮಾತಕತೆ ನಡೆಯುತ್ತಿದೆ ಎಂದು ಹೇಳಿದ್ದರು. ಆದರೆ ಅಧಿಕೃತವಾಗಿ ಇನ್ನೂ ಬಹಿರಂಗವಾಗಿಲ್ಲ. ನ್ಯಾಶನಲ್ ಸ್ಟಾರ್ ಆಗಿ ಹೊರ ಹೊಮ್ಮಿರುವ ಯಶ್ ಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಕೆಜಿಎಫ್ ಸಿನಿಮಾ ನಂತರ ಯಶ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿರುತ್ತೆ. ಹಾಗಾಗಿ ಯಶ್ ಮುಂದಿನ ಸಿನಿಮಾ ಆಯ್ಕೆ ಕಠಿಣವಾಗಿದೆ. ಸದ್ಯ ಕೇಳಿ ಬರುತ್ತಿರುವ ಸುದ್ದಿಯ ಹಾಗೆ ಯಶ್ ಈಗಾಗಲೆ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ತಮನ್ನಾ ನಾಯಕಿಯಾಗಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಮತ್ತೊಂದು ಮನರಂಜನೆ ಫಿಕ್ಸ್.

  English summary
  Kannada Actor Yash to romance with Tollywood actress Tamanna Bhatia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X