For Quick Alerts
  ALLOW NOTIFICATIONS  
  For Daily Alerts

  ಪ್ರಣಯದ ಸರಿಗಮ ಮೀಟಿದ ಸಿಲ್ಕ್ ಸ್ಮಿತಾ ಚಿತ್ರಗಳು

  By ರವಿಕಿಶೋರ್
  |

  ಮೋಹಕ ತಾರೆ ಸ್ಮಿಲ್ಕ್ ಸ್ಮಿತಾ ಭಾವಚಿತ್ರಗಳನ್ನು ನೋಡುತ್ತಿದ್ದರೆ "ಮನಮೆಚ್ಚಿದ ಮಡದಿ" ಚಿತ್ರದ "ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬ ಕೆಂಡ ಸಂಪಿಗೆ ಒಲವಿನೋಸಗೆ ಎದೆಯ ಬೇಸಗೆ ಈ ಬಗೆ ಹೊಸ ಬಗೆ ಹೊಸ ಬಗೆ..." ಹಾಡು ಹಾಗೇ ಹೊರಹೊಮ್ಮುತ್ತದೆ.

  ಈಗ್ಗೆ 16 ವರ್ಷಗಳ ಹಿಂದೆ ಐಟಂ ಗರ್ಲ್ ಸಿಲ್ಕ್ ಸ್ಮಿತಾ ಸತ್ತಾಗ ಅದು ಆತ್ಮಹತ್ಯೆಯೆಂದು ಪೊಲೀಸರು ಷರಾ ಬರೆದು ಕೇಸು ಮುಚ್ಚಿಹಾಕಿದ್ದರು. ಆದರೆ ಸ್ಮಿತಾಳೊಂದಿಗೆ ಎರಡು ಚಿತ್ರ ನಿರ್ಮಿಸಿದ್ದ ತಿರುಪತಿ ರಾಜಾ ಎಂಬ ನಿರ್ದೇಶಕ "ಆಕೆಯ ಸಾವು ಆತ್ಮಹತ್ಯೆ ಅಲ್ಲವೇ ಅಲ್ಲ" ಎಂದು ವಾದಿಸಿದ್ದ. ಅದು ಹತ್ಯೆಯೋ ಆತ್ಮಹತ್ಯೆಯೋ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ.

  ಸಿಲ್ಕ್ ಸ್ಮಿತಾ ಡರ್ಟಿ ಗರ್ಲ್ ಅಲ್ಲವೇ ಅಲ್ಲ ಬಿಡಿ

  ಸಿಲ್ಕ್ ಸ್ಮಿತಾ ಡರ್ಟಿ ಗರ್ಲ್ ಅಲ್ಲವೇ ಅಲ್ಲ ಬಿಡಿ

  ಈಕೆಯ ಜೀವನ ಕಥೆಯಾಧಾರಿತವಾಗಿಯೇ 'ದಿ ಡರ್ಟಿ ಪಿಕ್ಚರ್' ತೆಗೆಯಲಾಯಿತು. ಆದರೆ ಇದು ಸಿಲ್ಕ್ ಸ್ಮಿತಾರ ಕತೆಯಲ್ಲ ಎನ್ನಲಾಗಿತ್ತು. ತನ್ನ ವೃತ್ತಿಜೀವನದಲ್ಲು ಉತ್ತುಂಗಕ್ಕೆ ಏರಿ ತಳಮಟ್ಟಕ್ಕೆ ಇಳಿದ ತಾರೆಯೊಬ್ಬಳ ದುರಂತ ಅಂತ್ಯದ ಕಥೆ ಎನ್ನಲಾಗಿತ್ತು. ಆದರೂ ಡರ್ಟಿ ಪಿಕ್ಚರ್ ಚಿತ್ರಕ್ಕೂ ಸಿಲ್ಕ್ ಸ್ಮಿತಾ ಪಾತ್ರಕ್ಕೂ ಬಹಳಷ್ಟು ಸಾಮ್ಯತೆಗಳಿದ್ದವು.

  ಇವರೇ ಅಂತೆ ಸಿಲ್ಕ್ ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು

  ಇವರೇ ಅಂತೆ ಸಿಲ್ಕ್ ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು

  ವಿಜಯವಾಡದ ಏಲೂರಿನ ಹಿಟ್ಟಿನ ಗಿರಿಣಿಯೊಂದರ ಬಳಿ ತಮ್ಮ ಕಣ್ಣಿಗೆ ಬಿದ್ದು ಸಿಲ್ಕ್ ಸ್ಮಿತಾರನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದು ವಿನು ಚಕ್ರವರ್ತಿ ಎಂಬುವರು. ಆಕೆಗೆ ನಟನೆಯಲ್ಲಿ ಅತೀವ ಆಸಕ್ತಿ ಇದೆ ಎಂದು ಕೆಲವರು ಹೇಳಿದ್ದರು. ಸಿಲ್ಕ್ ಎಂದು ಆಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದೆ ಎನ್ನುತ್ತಾರೆ ಅವರು.

  ಡರ್ಟಿ ಪಿಕ್ಚರ್ ಆಯಿತು ಮತ್ತೊಂದು ಸಿಲ್ಕ್ ಕಥೆ

  ಡರ್ಟಿ ಪಿಕ್ಚರ್ ಆಯಿತು ಮತ್ತೊಂದು ಸಿಲ್ಕ್ ಕಥೆ

  ಐಟಂ ಪಾತ್ರಗಳಿಂದ ಹೆಸರಾಗಿದ್ದ ಸಿಲ್ಕ್ ಸ್ಮಿತಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದ ವಿನು ಚಕ್ರವರ್ತಿ, ಆಕೆಯನ್ನು ತುಂಬ ಹತ್ತಿರದಿಂದ ಕಂಡಿದ್ದರಂತೆ. ಆಕೆಯ ಜೀವನ ಚರಿತ್ರೆಯನ್ನು ತೆರೆಗೆ ತರುವುದಾಗಿ ತಿಳಿಸಿದ್ದಾರೆ. ಆದರೆ ಈ ಚಿತ್ರ ಹಿಂದಿ ಭಾಷೆಗೆ ಬದಲಾಗಿ ತಮಿಳು ಭಾಷೆಯಲ್ಲಿ ಮೂಡಿಬರಲಿದೆ. ಸಿಲ್ಕ್‌ರನ್ನು ತುಂಬ ಹತ್ತಿರದಿಂದ ಕಂಡಿದ್ದು ಆಕೆಯ ಜೀವನ ಚರಿತ್ರೆಯನ್ನು ತೆರೆಗೆ ತರುವುದಾಗಿ ತಿಳಿಸಿದ್ದಾರೆ. ಆದರೆ ಈ ಚಿತ್ರ ಹಿಂದಿ ಭಾಷೆಗೆ ಬದಲಾಗಿ ತಮಿಳು ಭಾಷೆಯಲ್ಲಿ ಮೂಡಿಬರಲಿದೆ.

  ಕನ್ನಡದಲ್ಲೂ ಕರೆಂಟು ಹರಿಸಿದ ಸಿಲ್ಕ್ ಸ್ಮಿತಾ

  ಕನ್ನಡದಲ್ಲೂ ಕರೆಂಟು ಹರಿಸಿದ ಸಿಲ್ಕ್ ಸ್ಮಿತಾ

  ಅಳಿಮಯ್ಯ, ಹಳ್ಳಿಮೇಷ್ಟ್ರು, ಪ್ರಚಂಡ ಕುಳ್ಳ, ಬೇಡಿ ಚಿತ್ರಗಳ ಮೂಲಕ ಸಿಲ್ಕ್ ಸ್ಮಿತಾ ಕನ್ನಡದಲ್ಲೂ ಪ್ರೇಕ್ಷಕರ ಹೃದಯದಲ್ಲಿ ಕರೆಂಟ್ ಹರಿಸಿದ್ದರು. ಬಂತು ಬಂತು ಕರೆಂಟು ಬಂತು ಎಂದು 'ಲಾಕಪ್ ಡೆತ್' ಚಿತ್ರದಲ್ಲಿ ಕುಣಿಯುವ ಮೂಲಕ ಪಡ್ಡೆಗಳ ಮೈಯಲ್ಲೂ ಮಿಂಚಿನ ಸಂಚಾರ ಉಂಟು ಮಾಡಿದ್ದರು.

  ಸಿಲ್ಕ್ ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣವೇ?

  ಸಿಲ್ಕ್ ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣವೇ?

  ಪ್ರೇಮ ವೈಫಲ್ಯ, ಆರ್ಥಿಕ ಕಷ್ಟಗಳು ಆಕೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದವೆ? 36ರ ವಯಸ್ಸಿನಲ್ಲಿ ಚೆನ್ನೈನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಆಕೆ ಆತ್ಮಹತ್ಯೆ ಶರಣಾಗಿದ್ದರು. ಇದರೊಂದಿಗೆ ಸಿಲ್ಕ್ ಸ್ಮಿತಾ ಯುಗ ಅಂತ್ಯವಾಯಿತು.

  ರಜನಿಕಾಂತ್ ಗೂ ಸಿಲ್ಕ್ ಸ್ಮಿತಾಗೂ ಏನು ಸಂಬಂಧ?

  ರಜನಿಕಾಂತ್ ಗೂ ಸಿಲ್ಕ್ ಸ್ಮಿತಾಗೂ ಏನು ಸಂಬಂಧ?

  ರಜನಿಕಾಂತ್ ಪಾತ್ರವನ್ನು ನಾಸಿರುದ್ದೀನ್ ಶಾ ಪೋಷಿಸಿದ್ದಾರೆ ಎಂಬ ಗುಮಾನಿ ದಿ ಡರ್ಟಿ ಪಿಕ್ಚರ್ ಚಿತ್ರದ ಮೇಲೆ ವ್ಯಕ್ತವಾಗಿತ್ತು. ರಜನಿ ಜೊತೆ ಸಿಲ್ಕ್ ಸ್ಮಿತಾ ಕೆಲವು ಚಿತ್ರಗಳಲ್ಲಿ ತೆರೆಹಂಚಿಕೊಂಡಿದ್ದರು. ಆದರೆ ಚಿತ್ರ ಬಿಡುಗಡೆಯಾದ ಮೇಲೆ ಆ ರೀತಿಯ ಯಾವುದೇ ಸನ್ನಿವೇಶಗಳು ಇರಲಿಲ್ಲ.

  ಸಿಲ್ಕ್ ಸ್ಮಿತಾ ಕಾಲ್ ಶೀಟ್ ಗಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದರು

  ಸಿಲ್ಕ್ ಸ್ಮಿತಾ ಕಾಲ್ ಶೀಟ್ ಗಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದರು

  ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಮೋಹನ್ ಲಾಲ್... ಹೀಗೆ ಎಲ್ಲ ಮಹಾಮಹಿಮರಿಗೂ ತಮ್ಮ ಚಿತ್ರಗಳಲ್ಲಿ ಸಿಲ್ಕ್ ಅತ್ಯಗತ್ಯವಾಗಿ ಬೇಕಿದ್ದ ನಟಿ. ನಿರ್ಮಾಪಕರು ಆಕೆಯ ಕಾಲ್ ಶೀಟ್ ಗಾಗಿ ತಿಂಗಾಳುನಗಟ್ಟಲೆ ದೇಹೀ ಎಂದು ಕಾಯುವ ಕಾಲವೊಂದಿತ್ತು.

  ನಯವಾದ ಅಶ್ಲೀಲ ನಟಿ ಸಿಲ್ಕ್ ಸ್ಮಿತಾ

  ನಯವಾದ ಅಶ್ಲೀಲ ನಟಿ ಸಿಲ್ಕ್ ಸ್ಮಿತಾ

  ಆಕೆಯ ಐಟಮ್ ಪಾತ್ರದ ಅಭಿನಯದ ಅಮರಾನ್ ನಂತಹ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅದ್ದೂರಿ ಪ್ರದರ್ಶನ ಕಂಡವು. ಕೆಲ ಚಿತ್ರ ವಿಮರ್ಶಕರು, ಇತಿಹಾಸಕಾರರು ಮತ್ತು ಪತ್ರಕರ್ತರು ಆಕೆಯನ್ನು "ನಯವಾದ ಅಶ್ಲೀಲ ನಟಿ ಎಂದು ಬಣ್ಣಿಸಿದ್ದಾರೆ.

  ಲಯನಮ್ ಚಿತ್ರ ವಯಸ್ಕರ ಯೋಗ್ಯ ಚಿತ್ರ

  ಲಯನಮ್ ಚಿತ್ರ ವಯಸ್ಕರ ಯೋಗ್ಯ ಚಿತ್ರ

  ಆಕೆಯ ಚಿತ್ರಗಳಲ್ಲೊಂದಾದ, ಲಯನಮ್ ಚಿತ್ರವು ಭಾರತದ ವಯಸ್ಕರ ಚಿತ್ರಗಳಲ್ಲಿ ಬಹಳಷ್ಟು ಯೋಗ್ಯವೆನಿಸಿದೆ. ಅದು ರೇಷ್ಮಾ ಕಿ ಜವಾನಿ ಎಂಬ ಹೆಸರಿನಿಂದ ಹಿಂದಿಯಲ್ಲಿ ರೀಮೇಕ್ ಆಯಿತು. ಆಕೆಯ ಅತ್ಯಂತ ಹೆಚ್ಚು ಗೌರವಾನ್ವಿತ ಮನೋಜ್ಞ ಅಭಿನಯದ ಚಿತ್ರ ಮೂಂದ್ರಮ್ ಪಿರಾಯ್ .


  ಇಷ್ಟಕ್ಕೂ ಸಿಲ್ಕ್ ಸ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? ಆಕೆಯ ವೃತ್ತಿ ಜೀವನದ ಗ್ರಾಫು ಅಧೋಗತಿಗೆ ಇಳಿದಿತ್ತು. ಇನ್ನೇನು ಆಕೆಗೆ ಅವಕಾಶಗಳೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಆಕೆಯನ್ನು ಬ್ಲೂ ಫಿಲಂ ಒಂದರಲ್ಲಿ ನಟಿಸುವಂತೆ ಬಲವಂತ ಮಾಡಲಾಯಿತು.

  ಮೊದಲೆ ಆರ್ಥಿಕ ಸಂಕಷ್ಟದಲ್ಲಿ ನರಳುತ್ತಿದ್ದ ಸ್ಮಿತಾ ಅತ್ತ ನಟಿಸಲೂ ಆಗದೆ ಇತ್ತ ತನ್ನ ಚಿಂತಾಜನಕ ಬದುಕನ್ನು ಒಪ್ಪಿಕೊಳ್ಳಲೂ ಆಗದೆ ಆತ್ಮಹತ್ಯೆಗೆ ಶರಣಾದರು ಎನ್ನುತ್ತವೆ ಮೂಲಗಳು. ಆತ್ಮಹತ್ಯೆಗೆ ಪ್ರೇಮ ವೈಫಲ್ಯವೂ ಕಾರಣ ಎನ್ನುತ್ತದೆ ಮತ್ತೊಂದು ಮೂಲ.

  English summary
  The moment you hear the name, Silk Smitha, the adjectives like sex siren, voluptuous, etc., automatically comes to your mind. That was the power of late actress, who took the bold acts in South cinema to a never-before level during her times.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X