»   » ಇರ್ಲಾರ್ದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇ, ಜಗ್ಗೇಶ್!

ಇರ್ಲಾರ್ದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇ, ಜಗ್ಗೇಶ್!

By: ಜೀವನರಸಿಕ
Subscribe to Filmibeat Kannada

ಈಗೇನಾಯ್ತು? ಸುಮ್ನೆ ಕೆಲಸ ಇಲ್ಲದ ಬಡಗಿ ಅದೇನೋ ಕೆತ್ತಿದ ಅನ್ನೋ ಹಾಗಾಯ್ತು ನವರಸನಾಯಕ ಜಗ್ಗೇಶ್ ಕಥೆ ಅಂತ ಮಾತಾಡಿಕೊಳ್ತಿದ್ದಾರೆ ಚಿತ್ರಪ್ರೇಮಿಗಳು! ಇದೆಲ್ಲಾ ಯಾಕೆ ಬೇಕಿತ್ತು ಒಬ್ಬ ಹಿರಿಯ ನಟನಿಗೆ? ಅಥ್ವಾ ಇದೆಲ್ಲಾ ಚಾಲ್ತಿಯಲ್ಲಿ ಇರೋಕೆ ಮಾಡಿಕೊಳ್ಳೋ ಸ್ವಯಂಕೃತ ವಿವಾದಗಳಾ?

ಆದ್ರೆ ಇದ್ರಿಂದ ಲಾಭ ಆಗಿದ್ದು ಮಾತ್ರ ರಿಯಲ್ಸ್ಟಾರ್ ಉಪ್ಪಿಗೆ. ಮೊದಲೇ ಉಪ್ಪಿ ಹೇಳಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನದ್ದೇನನ್ನೂ ಮಾತಾಡಲ್ಲ ಪಬ್ಲಿಸಿಟಿಯನ್ನೂ ದೊಡ್ಡದಾಗಿ ಮಾಡೋ ಪ್ಲಾನ್ ಇಲ್ಲ. ನಿಮ್ಮನ್ನ ನೀವು ನೋಡ್ಕೋಬೇಕು ಅನ್ನೋ ಆಸೆ ಇದ್ರೆ ಥಿಯೇಟರ್ಗೆ ಬರ್ಬಹುದು ಅಂತ. [ಫೇಸ್ ಬುಕ್ ನಲ್ಲಿ ಜಗ್ಗೇಶ್ ಬಯಲು ಮಾಡಿದ ಸತ್ಯ]

Jaggesh has given enough free publicity to Uppi 2

ನೀನು ಯಾರು ಅಂತ ಉಪ್ಪಿ-2 ಚಿತ್ರದ ಮೂಲಕ ಹೇಳೋಕೆ ಹೊರಟಿದ್ದ ಉಪ್ಪಿಯ ಸಿನಿಮಾಗೆ ಎಷ್ಟು ಬೇಕೋ ಅಷ್ಟು ಪಬ್ಲಿಸಿಟಿಯನ್ನ ನವರಸನಾಯಕ ಜಗ್ಗೇಶ್ ಪುಗಸಟ್ಟೆಯಾಗಿ ಕೊಟ್ಟಿದ್ದಾರೆ. ಉಪ್ಪಿ ಇನ್ನು ಚಾನೆಲ್ಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಕಮರ್ಷಿಯಲ್ ಕೊಟ್ಟು ಪಬ್ಲಿಸಿಟಿ ಮಾಡಿದ್ರೂ ಆಗುತ್ತೆ ಮಾಡದೇ ಇದ್ರೂ ಆಗುತ್ತೆ.

ಬೇಕಿತ್ತಾ ಇದೆಲ್ಲ ಜಗ್ಗೇಶ್ ರಂತಹಾ ಹೆಸರು ಮಾಡಿದ ಹಿರಿಯ ನಟನಿಗೆ ಅಂತಿದ್ದಾರೆ ಕರ್ನಾಟಕದ ಜನತೆ. ಈ ಹಿಂದೆ ಕೂಡ ಜಗ್ಗೇಶ್ ಇದೇ ತರಹ ಅನವಶ್ಯಕವಾಗಿ ಚಿತ್ರೋದ್ಯಮದ ಯಾರ್ಯಾರ ವಿಷ್ಯಗಳನ್ನ ಮೈಮೇಲೆ ಎಳೆದುಕೊಂಡು ವಿವಾದಕ್ಕೆ ಗುರಿಯಾಗಿದ್ದರು. ಇನ್ಮುಂದೆ ಹೀಗಾಗದಿರ್ಲಿ ಜಗ್ಗೇಶ್ ಕೂಲ್ ಗಣೇಶನಂತಿರ್ಲಿ ಅನ್ನೋದು ಅವ್ರ ಅಭಿಮಾನಿಗಳ ಮನವಿ.

English summary
Why is Navarasa Nayaka behaving like this, why is he raking up controversy unnecessarily, ask his hardcore fans. Versatile actor Jaggesh has been lambasting Read star Upendra for pulling his leg in a song in latest movie Uppi 2. By lambasting Upendra, Jaggesh has given enough free publicity to Uppi 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada