For Quick Alerts
  ALLOW NOTIFICATIONS  
  For Daily Alerts

  ಸಂತೋಷ್ ಗೆ ಬ್ರೇಕ್ ಕೊಡ್ತಾರಾ 'ಜಿಗರ್ ಥಂಡ' ಶಿವ ಗಣೇಶ್.?

  By Suneetha
  |

  'ನೂರು ಜನ್ಮಕೂ' ಚಿತ್ರದಲ್ಲಿ ನಟಿ ಐಂದ್ರಿತಾ ರೇ ಅವರ ಜೊತೆ ಡ್ಯುಯೆಟ್ ಹಾಡಿದ್ದ ನಟ ಸಂತೋಷ್ ಅವರು ಎಲ್ಲರಿಗೂ ನೆನಪಿರಬೇಕಲ್ವಾ.?. ಹಲವು ಸಿನಿಮಾಗಳಲ್ಲಿ ಸಣ್ಣ-ಸಣ್ಣ ಪಾತ್ರ ಮಾಡುತ್ತಿದ್ದ ಸಂತೋಷ್ ಅವರಿಗೆ 'ನೂರು ಜನ್ಮಕೂ' ಚಿತ್ರ ಬ್ರೇಕ್ ಕೊಡಬಹುದು ಅಂತ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.

  ಆದರೆ ಆ ಸಿನಿಮಾ ಸಂತೋಷ್ ಅವರಿಗೆ ಬ್ರೇಕ್ ಕೂಡ ಕೊಡಲಿಲ್ಲ, ಬಾಕ್ಸಾಫೀಸ್ ನಲ್ಲಿ ಜಾಸ್ತಿ ದಿನ ಸದ್ದು ಕೂಡ ಮಾಡಲಿಲ್ಲ. ತದನಂತರ ಸಂತೋಷ್ ಅವರು 'ಬಿಗ್ ಬಾಸ್' ಮನೆಯಲ್ಲಿ ಕೊಂಚ ಸೌಂಡ್ ಮಾಡಿದರು.

  ಅಲ್ಲಿಂದ ಹೊರಬಂದ ತಕ್ಷಣ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫು' ರಿಯಾಲಿಟಿ ಶೋ ನಡೆಸಿಕೊಟ್ಟರು. ಎಲ್ಲಾ ಕಡೆ ಒಂದು ಸುತ್ತು ಹಾಕಿ ಬಂದ ಸಂತೋಷ್, 'ಭುಜಂಗ' ಚಿತ್ರದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿದರು. ಆದರೆ ದುರಾದೃಷ್ಟಕ್ಕೆ ಅದೂ ಬ್ರೇಕ್ ಕೊಡಲಿಲ್ಲ.

  ಇದೀಗ ಮತ್ತೆ ಹೊಸ ಚಿತ್ರದ ಮೂಲಕ, ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚಲು ತಯಾರಿ ನಡೆಸಿದ್ದಾರೆ.

  ಈ ಬಾರಿ ಸಂತೋಷ್ ಅವರಿಗೆ ಒಂದೊಳ್ಳೆ ಬ್ರೇಕ್ ಕೊಡಬೇಕು ಅಂತ ಪಣ ತೊಟ್ಟು ಬಂದವರು 'ಜಿಗರ್ ಥಂಡ' ಚಿತ್ರಕ್ಕೆ ನಿರ್ದೇಶನ ಮಾಡಿದ್ದ ನಿರ್ದೇಶಕ ಶಿವ ಗಣೇಶ್ ಅವರು.['ಜಿಗರ್ ಥಂಡ' ವಿಮರ್ಶೆ: ಆರ್ಮುಗಂಗೇ 'ಆಪ್' ಇಟ್ಟ ರಾಹುಲ್]

  'Jigar Thanda' fame director Shiva Ganesh to direct Actor Santhosh

  ನಟ ರಾಹುಲ್ ಅವರಿಗೆ ಕೊಂಚ ರಿಲೀಫ್ ನೀಡಿದ ಶಿವ ಗಣೇಶ್, ಸಂತೋಷ್ ಅವರನ್ನು ಕೈ ಹಿಡಿದು ಮೇಲೆತ್ತುತ್ತಾರಾ.?, ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

  ಈ ಚಿತ್ರದ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಸಂತೋಷ್ ಅವರು ಈ ಚಿತ್ರದಲ್ಲಿ ನ್ಯೂ ಲುಕ್ ನಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ನಾಯಕಿ ನಟಿಯ ಹುಡುಕಾಟ ನಡೆದಿದ್ದು, ಮುಂದಿನ ತಿಂಗಳು ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆಯಂತೆ.

  English summary
  Director Shiva Ganesh who recently directed Rahul starrer Kannada Movie 'Jigar Thanda' is all set to direct another film. This time, Shiva Ganesh is directing Kannada Actor Santhosh fame of 'Nooru Janmaku' in a new film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X