»   » ದರ್ಶನ್ 'ಕುರುಕ್ಷೇತ್ರ'ಕ್ಕೆ 'ಕುಂತಿ' ಆಯ್ಕೆ ಆದರು.!

ದರ್ಶನ್ 'ಕುರುಕ್ಷೇತ್ರ'ಕ್ಕೆ 'ಕುಂತಿ' ಆಯ್ಕೆ ಆದರು.!

Posted By:
Subscribe to Filmibeat Kannada

'ಕುರುಕ್ಷೇತ್ರ' ಚಿತ್ರದ ಮುಹೂರ್ತದ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಲಾವಿದರ ಆಯ್ಕೆ ಮತ್ತಷ್ಟು ವೇಗವಾಗಿದೆ. ದರ್ಯೋಧನ, ಕೃಷ್ಣ, ದ್ರೋಣಾಚಾರ್ಯ, ಧೃತರಾಷ್ಟ್ರ, ಭಾನುಮತಿ, ನರ್ತಕಿ, ಹೀಗೆ ಒಂದೊಂದೆ ಪಾತ್ರಗಳು ಬುಕ್ ಆಗುತ್ತಿದೆ.

ಈಗ 'ಕುಂತಿ' ಪಾತ್ರದ ಸರದಿ. ಪಾಂಡವ ಮಾತೆ ಕುಂತಿ ಪಾತ್ರವನ್ನ ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಿರಿಯ ನಟಿ ಜೂಲಿ ಲಕ್ಷ್ಮಿ 'ಕುಂತಿ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!

Julie Lakshmi Playing Kunthi in Kurukshetra

ನಟಿ ಲಕ್ಷ್ಮಿ ಕನ್ನಡದ ಹಲವು ಸ್ಟಾರ್ ನಟರಿಗೆ ತಾಯಿ ಪಾತ್ರವನ್ನ ಮಾಡಿದ್ದಾರೆ. ಹೀಗಾಗಿ, 'ಕುರುಕ್ಷೇತ್ರ'ದಲ್ಲಿ ಪಾಂಡವರ ತಾಯಿ ಪಾತ್ರಕ್ಕೆ ಸೂಕ್ತ ಆಯ್ಕೆ ಎನ್ನಲಾಗಿದೆ. ಆದ್ರೆ, ಇದು ಅಧಿಕೃತವಾಗಿ ಘೋಷಣೆ ಆಗಿಲ್ಲ.

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ರೆಜಿನಾ ನಿರ್ವಹಿಸುವ ಪಾತ್ರವೇನು.?

ಸದ್ಯಕ್ಕೆ, ದರ್ಶನ್ ದರ್ಯೋಧನ, ರವಿಚಂದ್ರನ್ ಕೃಷ್ಣ, ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯ, ಶ್ರೀನಾಥ್ ಧೃತರಾಷ್ಟ್ರರಾಗಿ ಬಣ್ಣ ಹಚ್ಚುವುದು ಬಹುತೇಕ ಖಚಿತ. ಇನ್ನು ಹರಿಪ್ರಿಯಾ, ರೆಜಿನಾ ಹಾಗೂ ಬಹುಭಾಷಾ ನಟಿ ಸ್ನೇಹ ಹೆಸರು ಕೂಡ 'ಕುರುಕ್ಷೇತ್ರ'ದಲ್ಲಿ ಕೇಳಿ ಬರುತ್ತಿದೆ. ಇದಕ್ಕೆಲ್ಲ ನಿರ್ಮಾಪಕ ಮುನಿರತ್ನ ಹುಟ್ಟುಹಬ್ಬದಂದು ಉತ್ತರ ಸಿಗಲಿದೆ.

English summary
According to Source Actress Julie Lakshmi Playing Kunthi in Darshan's 50th Movie Kurukshetra. Kurukshetra Movie Directed By Naganna and Produced By Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada