For Quick Alerts
  ALLOW NOTIFICATIONS  
  For Daily Alerts

  ಕಮಲ್ ಕಿಸ್ ಕೊಟ್ರೆ ಹಿಂದೂ ಪಕ್ಷ ಕೆಂಪಾಯ್ತು

  By Mahesh
  |

  ಕಮಲ್ ಹಾಸನ್ ಎಂದರೆ ಹಾಗೆ ವಿವಾದಗಳ ಜೊತೆ ಜೊತೆಗೆ ಬೆಳೆದ ಅದ್ಭುತ ನಟ. ಆದರೆ, ತಮ್ಮ ಸಾರ್ವಜನಿಕ ಜೀವನ ಏರುಪೇರುಗಳನ್ನು ಕೂಡಾ ಸಮರ್ಥಿಸಿಕೊಂಡು ಹತ್ತು ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಿದ್ದು ಸುಳ್ಳಲ್ಲ. ಇತ್ತೀಚೆಗೆ ಇದೇ ರೀತಿ ಆಯ್ತು. ಟಿವಿ ರಿಯಾಲಿಟಿ ಶೋವೊಂದರಲ್ಲಿ ಯುವತಿಯೊಬ್ಬಳಿಗೆ ಕಿಸ್ ಕೊಟ್ಟಿದ್ದಾರೆ. ಇದು ಹಿಂದೂ ಮಕ್ಕಳ ಕಚ್ಚಿ ರಾಜಕೀಯ ಪಕ್ಷದ ಕಣ್ಣು ಕೆಂಪಾಗಿಸಿದೆ.

  ಕೆಲವು ದಿನಗಳ ಹಿಂದೆ ಪ್ರಭುದೇವ ಅವರು ತಮ್ಮ ರಾಮೈಯಾ ವಸ್ತಾವೈಯಾ ಹಿಂದಿ ಚಿತ್ರಕ್ಕಾಗಿ ಶ್ರೀಲಂಕಾ ಮೂಲದ ಮಾಡೆಲ್ ಕಮ್ ನಟಿ ಜಾಕ್ವಲಿನ್ ಫರ್ನಾಂಡೀಸ್ ಆಯ್ಕೆ ಮಾಡಿಕೊಂಡಿದ್ದರು. ಇದನ್ನು ಹಿಂದೂ ಮಕ್ಕಳ್ ಕಚ್ಚಿ ತೀವ್ರವಾಗಿ ಖಂಡಿಸಿತ್ತು. ಈಗ ಯೂನಿರ್ವಸಲ್ ಸ್ಟಾರ್ ಕಮಲ್ ಹಾಸನ್ ವಿರುದ್ಧ ಕಚ್ಚಿ ತಿರುಗಿ ಬಿದ್ದಿದೆ.

  ಕನ್ನಡ ಕೋಟ್ಯಾಧಿಪತಿಯಂತೆ ನೀಂಗಳುಂ ವೆಲ್ಲಲಂ ಒರು ಕೋಟಿ ಎಂಬ ಕಾರ್ಯಕ್ರಮ ತಮಿಳು ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ. ಕನ್ನಡಿಗ ಪ್ರಕಾಶ್ ರೈ ಅವರ ನಿರೂಪಣೆ ಇರುವ ಈ ಕಾರ್ಯಕ್ರಮ ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ ಕಮಲ್ ಹಾಸನ್ ಅವರು ತಮ್ಮ ಲಿವ್ ಇನ್ ಸಂಗಾತಿ ಗೌತಮಿ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದರು.

  ಈ ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಎಂಬ ಯುವತಿಯನ್ನು ತಬ್ಬಿಕೊಂಡು ಕಮಲ್ ಕಿಸ್ ಕೊಟ್ಟಿದ್ದಕ್ಕೆ ಪ್ರೇಕ್ಷಕರು ವಿಷಲ್ ಹೊಡೆದರು. ಆದರೆ, ಹಿಂದೂ ಕಚ್ಚಿ ಕೆಂಡಾಮಂಡಲವಾಗಿಬಿಟ್ಟಿದೆ. ಮುಂದೆ ಕಥೆ ಏನಾಯ್ತು ಚಿತ್ರ ಸರಣಿಯಲ್ಲಿ ನೋಡಿ

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕೋಟಿ ಗೆಲ್ಲಬಹುದಾದ ಈ ಕಾರ್ಯಕ್ರಮವನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಸಾರ್ವಜನಿಕವಾಗಿ ದಿವ್ಯಾ ದರ್ಶಿನಿ, ಪ್ರಿಯದರ್ಶಿನಿ ಅವರು ಕಮಲ್ ಜೊತೆ ನಡೆದುಕೊಂಡಿದ್ದು ಸರಿಯಲ್ಲ ಎಂದು ಹಿಂದೂ ಪಕ್ಷ ಟೀಕಿಸಿದೆ.

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಸಾಮಾಜಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಬೇಕು. ನಮ್ಮ ಸಂಸ್ಕೃತಿಯಲ್ಲಿ ಈ ರೀತಿ ಸಾರ್ವಜನಿಕವಾಗಿ ತಬ್ಬಿಕೊಳ್ಳುವುದು, ಮುತ್ತಿಡುವುದಕ್ಕೆ ಅವಕಾಶವಿಲ್ಲ. ಇದರಿಂದ ಕಾಮಪ್ರಚೋದನೆಯಾಗತ್ತದೆ ಹೊರತೂ ಮತ್ತೇನು ಸಂದೇಶವನ್ನು ನೀಡಲು ಸಾಧ್ಯವಿಲ್ಲ ಎಂದು ಹಿಂದೂ ಪಕ್ಷ ಹೇಳಿದೆ.

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಇದಲ್ಲದೆ ಕಮಲ್ ಅವರು ಹಲವು ಮದುವೆ ಮುರಿದುಕೊಂಡು ಲಿವ್ ಇನ್ ಸಂಬಂಧದಲ್ಲಿದ್ದಾರೆ. ಮದುವೆಯಾಗದೆ ಹೆಣ್ಣು ಗಂಡು ಒಟ್ಟಿಗೆ ಬಾಳುವುದನ್ನು ಹೇಗೆ ಸಹಿಸಲು ಸಾಧ್ಯ. ಕ್ರೈಂ ರೇಟ್ ಹೆಚ್ಚಳಕ್ಕೆ ಕಮಲ್ ಇಂಬು ನೀಡುತ್ತಿದ್ದಾರೆ -HMK

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಸದ್ಯಕ್ಕೆ ಕಮಲ್ ಹಾಸನ್, ಗೌತಮಿ, ಪ್ರಕಾಶ್ ರಾಜ್, ಟಿವಿ ನಿರೂಪಕಿ ದಿವ್ಯದರ್ಶಿನಿ, ಸ್ಪರ್ಧಿ ಪ್ರಿಯಾ ಮೇಲೆ ಸಂಸ್ಕೃತಿ ಹಾಳು ಮಾಡಿದ ಆರೋಪದ ಮೇಲೆ ಹಿಂದೂ ಪಕ್ಷ ಕೇಸು ದಾಖಲಿಸಿದೆ.

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಹಿಂದೂ ಮಕ್ಕಳ ಪಕ್ಷ ಎತ್ತಿರುವ ಪ್ರಶ್ನೆಗಳಿಗೆ ಕಮಲ್ ಹಾಸನ್ ಆಗಲಿ, ಗೌತಮಿಯಾಗಲಿ ಅಥವಾ ಕಾರ್ಯಕ್ರಮದ ಆಯೋಜಕರು, ಸ್ಟಾರ್ ವಿಜಯ್ ಸಂಸ್ಥೆ ಯಾವುದೇ ಉತ್ತರ ನೀಡಿಲ್ಲ

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಮೊದಲಿನಿಂದಲೂ ಕಮಲ್ ಹಿಂದೆ ಬಿದ್ದಿರುವ ಹಿಂದೂ ಪರ ರಾಜಕೀಯ ಪಕ್ಷಕ್ಕೆ ಗೌತಮಿ ಜೊತೆ ಕಮಲ್ ಇಟ್ಟುಕೊಂಡಿರುವ ಸಂಬಂಧದ ಬಗ್ಗೆ ಆಕ್ಷೇಪ ಇದೆ. ಲಿವ್ ಇನ್ ಸಂಬಂಧವನ್ನು ತೀವ್ರವಾಗಿ ವಿರೋಧಿಸುವ ಹಿಂದೂ ಪಕ್ಷಕ್ಕೆ ಕಮಲ್ ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ರೀತಿ ಕೆಟ್ಟ ಸಂದೇಶ ನೀಡುತ್ತಿದೆಯಂತೆ.

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕಮಲ್ ಕೆಬಿಸಿ ಕಿಸ್ ಕಿರಿಕ್

  ವಾಣಿ ಗಣಪತಿ, ಸಾರಿಕಾ ಅವರೊಟ್ಟಿಗೆ ಅಧಿಕೃತವಾಗಿ ಮದುವೆ ಮುರಿದುಕೊಂಡ ಕಮಲ್ ಹಾಸನ್ ಅವರು ತಮ್ಮ ನೆಚ್ಚಿನ ನಟಿ ಗೌತಮಿ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದಾರೆ. ಇಬ್ಬರಿಗೂ ಸುಬ್ಬಲಕ್ಷ್ಮಿ ಎಂಬ ಹೆಣ್ಣು ಮಗು ಇದೆ. ಸಾರಿಕಾರಿಂದ ಕಮಲ್ ಅವರು ಅಕ್ಷರ ಹಾಗೂ ಶ್ರುತಿ ಹಾಸನ್ ಅವರ ತಂದೆಯಾಗಿದ್ದಾರೆ.

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕಮಲ್ ಕೆಬಿಸಿ ಕಿಸ್ ಕಿರಿಕ್

  ಕೋಟಿ ಗೆಲ್ಲುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮಲ್ ಅವರು ಗೆದ್ದ ಮೊತ್ತವನ್ನು ಎಚ್ ಐವಿ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ದಾನ ಮಾಡಿದ್ದಾರೆ

  English summary
  Kamal Hassan lands in trouble over kissing woman on TV. Kamal Hassan participated in the Prakash Raj hosted show Neengalum Vellalam Oru Kodi with partner Gauthami. The actor talked about marriage and live-in relationship. In one of the debates, it was opined that it was not wrong for a couple to be in a live-in relationship without getting married.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X