For Quick Alerts
  ALLOW NOTIFICATIONS  
  For Daily Alerts

  'ಭಿಕ್ಷುಕ' ಆಗ್ತಾರಾ 'ಕೃಷ್ಣ' ಅಲಿಯಾಸ್ ಅಜೇಯ್ ರಾವ್.?

  By Suneetha
  |

  ಸ್ಯಾಂಡಲ್ ವುಡ್ ನ 'ಕೃಷ್ಣ' ಅಲಿಯಾಸ್ ಅಜೇಯ್ ರಾವ್ ಅವರು ಇದೀಗ ಮತ್ತೊಂದು ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ. 'ಕೃಷ್ಣ ರುಕ್ಕು' ಚಿತ್ರದ ಸಾಧಾರಣ ಯಶಸ್ಸಿನ ನಂತರ ಇದೀಗ 'ಜಾನ್ ಜಾನಿ ಜನಾರ್ದನ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವಾಗಲೇ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

  ಅಂದಹಾಗೆ ಈ ಬಾರಿ ಅಜೇಯ್ ರಾವ್ ಕಾಣಿಸಿಕೊಳ್ಳುತ್ತಿರುವುದು ಕಾಲಿವುಡ್ ನಟ ವಿಜಯ್ ಆಂಟನಿ ಅವರ 'ಪಿಚ್ಚಕಾರನ್' (ಭಿಕ್ಷುಕ) ಎಂಬ ತಮಿಳು ಚಿತ್ರದಲ್ಲಿ. ಮಾರ್ಚ್ ನಲ್ಲಿ ತೆರೆಕಂಡಿದ್ದ ಈ ತಮಿಳು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ, ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು.[ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ]

  ಇದೀಗ ಅದೇ ಸಿನಿಮಾದ ರೀಮೇಕ್ ಹಕ್ಕನ್ನು ಜಾಕ್ ಮಂಜುನಾಥ್ ಮತ್ತು ನಿರ್ಮಾಪಕ ಯೋಗಿ ದ್ವಾರಕೀಶ್ ಅವರು ಜಂಟಿಯಾಗಿ ಖರೀದಿ ಮಾಡಿದ್ದು, ಅಜೇಯ್ ರಾವ್ ಅವರ ಜೊತೆ ಮಾತು-ಕತೆ ನಡೆದಿದೆ.

  ನಟ ಅಜೇಯ್ ರಾವ್ ಮತ್ತು ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರು ಹೊಸ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ ಎಂದು ನಾವು ನಿಮಗೆ ಈ ಮೊದಲು ಹೇಳಿದ್ವಿ. ಆದರೆ ಯಾವ ಸಿನಿಮಾ, ನಿರ್ದೇಶಕರು ಯಾರು ಅಂತ ಹೇಳಿರಲಿಲ್ಲ.[ದ್ವಾರಕೀಶ್ ಪ್ರೊಡಕ್ಷನ್ಸ್ ನಲ್ಲಿ ಅಜೇಯ್ ರಾವ್ ಹೊಸ ಚಿತ್ರ.?]

  ಆದರೆ ಇದೀಗ ತಮಿಳು ಚಿತ್ರ 'ಪಿಚ್ಚಕಾರನ್' ರೀಮೇಕ್ ಹಕ್ಕು ಖರೀದಿಸಿರುವ ಯೋಗೀಶ್ ಅವರು ಅಜೇಯ್ ರಾವ್ ಜೊತೆ ಇದೇ ಸಿನಿಮಾ ಮಾಡುತ್ತಿರಬಹುದು ಎಂಬ ಅನುಮಾನ ಕಾಡುತ್ತದೆ.

  ಜಾಕ್ ಮಂಜು ಅವರ 'ಮೈಸೂರು ಟಾಕೀಸ್' ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಇತ್ತೀಚೆಗೆ 'ಮೈಸೂರು ಟಾಕೀಸ್' ಬ್ಯಾನರ್ ಜೊತೆ ನಿರ್ಮಾಪಕ ಯೋಗೀಶ್ ಅವರು ಕೂಡ ಕೈ ಜೋಡಿಸಿದ್ದಾರೆ.

  ಸದ್ಯಕ್ಕೆ ನಿರ್ಮಾಪಕ ಯೋಗೀಶ್ ಅವರ ಕಡೆಯಿಂದ ಹೊರಬಿದ್ದಿರುವ ಖಾಸ್ ಖಬರ್ ಇಷ್ಟು. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕ ತಕ್ಷಣ ನಾವೇ ನಿಮಗೆ ತಿಳಿಸುತ್ತೇವೆ.

  English summary
  Kannada Actor Ajai Rao, who is back to the success track after his home production 'Krishna Leela' and 'Krishna Rukku', is busy with the shoot of the multi-starrer 'John Jani Janaardhan'.Now Ajai Rao has been signed to play the lead role in remake of Tamil Actor Vijay Antony starrer Tamil film 'Pichaikkaran'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X