For Quick Alerts
  ALLOW NOTIFICATIONS  
  For Daily Alerts

  ಬರೋಬ್ಬರಿ 46 ಕಥೆ ಕೇಳಿ 'ಓಕೆ' ಎಂದ್ರಾ 'ಈ' ನಟ ಮಹಾಶಯ

  By Suneetha
  |

  ನಟಿಸಿದ ಮೂರ್ನಾಲ್ಕು ಸಿನಿಮಾಗಳು ಕೈಕೊಟ್ಟು, ಯಾವುದಾದರೂ ಒಂದು ಸಿನಿಮಾ ಕೈ ಹಿಡಿದರೆ, ತದನಂತರ ಆ ನಟರು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಕೊಂಚ ಚ್ಯುಸಿಯಾಗಿ ಬಿಡುತ್ತಾರೆ.

  ಇದೀಗ ನಟ ಅನಿಶ್ ತೇಜೇಶ್ವರ್ ಅವರು ಕೂಡ ತಮ್ಮ ಮುಂದಿನ ಚಿತ್ರಕ್ಕಾಗಿ ಕಥೆ ಆಯ್ಕೆ ಮಾಡಿಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಹಿಂದೆ-ಮುಂದೆ ನೋಡುತ್ತಿದ್ದಾರೆ. ಸಿಕ್ಕಿದ್ದೆ ಸೀರುಂಡೆ ಅಂತ ಇದ್ದ-ಬದ್ದ ಸಿನಿಮಾಗಳಿಗೆ ಸಹಿ ಹಾಕುವ ಸಾಹಸಕ್ಕೆ ಅನಿಶ್ ಕೈ ಹಾಕುತ್ತಿಲ್ಲ.

  'ನಮ್ ಏರಿಯಾಲ್ ಒಂದಿನಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಅನಿಶ್ ಅವರು ನಟಿಸಿದ್ದು ಮಾತ್ರ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ. ಅದ್ರಲ್ಲೂ ಗುರುತಿಸಿಕೊಳ್ಳುವಂತಹ ಸಿನಿಮಾದಲ್ಲಿ ಮಿಂಚಿದ್ದು ಬಹಳ ಕಡಿಮೆಯೇ.[ನಾಲ್ಕು ತಿಂಗಳಲ್ಲಿ ನಾಲ್ಕೇ ಸಲ ಊಟ ಮಾಡಿದ್ರಂತೆ ಅನಿಶ್]

  ಇತ್ತೀಚೆಗಷ್ಟೇ ತೆರೆಕಂಡು ಬಾಕ್ಸಾಫೀಸ್ ನಲ್ಲಿ ಸಾಧಾರಣ ಯಶಸ್ಸು ಕಂಡ 'ಅಕಿರ' ಚಿತ್ರದ ಮೂಲಕ ಸ್ಪಲ್ಪ ಮಟ್ಟಿಗೆ ಗುರುತಿಸಿಕೊಂಡರು. ಟ್ರೈಯಾಂಗಲ್ ಲವ್ ಸ್ಟೋರಿ ಇರುವ 'ಅಕಿರ' ಚಿತ್ರ ಮ್ಯೂಸಿಕಲ್ ಹಿಟ್ ಎನ್ನಬಹುದು.

  ಇದೀಗ ಹೊಸ ಚಿತ್ರವನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಿರುವ ಅನಿಶ್ ಅವರು ತಮ್ಮ ನೆಚ್ಚಿನ ಗುರು-ಗೆಳೆಯನ ಮಾರ್ಗದರ್ಶನದ ಮೇರೆಗೆ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದೆ ಓದಿ....

  ನಾಪತ್ತೆಯಾಗಿದ್ದ ಅನೀಶ್

  ನಾಪತ್ತೆಯಾಗಿದ್ದ ಅನೀಶ್

  'ಅಕಿರ' ಚಿತ್ರದ ನಂತರ ಗಾಂಧಿನಗರದಿಂದ ನಾಪತ್ತೆಯಾಗಿದ್ದ ನಟ ಅನೀಶ್ ಅವರು ಇದೀಗ ಮತ್ತೆ ಹೊಸ ಚಿತ್ರದ ಮೂಲಕ ವಾಪಸಾಗಿದ್ದಾರೆ. ಈ ಬಾರಿ ಅಳೆದು-ತೂಗಿ ಹೊಸ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.['ಅಕಿರ' ವಿಮರ್ಶೆ: ಪ್ರೀತಿ-ಗೀತಿ, ಸೆಂಟಿಮೆಂಟ್ ವಗೈರ ವಗೈರ]

  ಎಲ್ಲಿ ಹೋಗಿದ್ರು ಅನೀಶ್

  ಎಲ್ಲಿ ಹೋಗಿದ್ರು ಅನೀಶ್

  ಅಷ್ಟಕ್ಕೂ ಅನೀಶ್ ಅವರು ಇಷ್ಟು ದಿನ ಎಲ್ಲಿ ಹೋಗಿದ್ರು, ಏನ್ ಮಾಡ್ತಾ ಇದ್ರೂ ಅಂತ ನೀವು ಯೋಚನೆ ಮಾಡಬಹುದು. ಆದ್ರೆ ಅನೀಶ್ ಅವರು ಎಲ್ಲೂ ಹೋಗಿರಲಿಲ್ಲ. ಸುಮ್ಮನೆ ಮನೆಯಲ್ಲಿ ಕುಳಿತು ಮುಂದಿನ ಸಿನಿಮಾಗಳ ಕಥೆ ಕೇಳುತ್ತಿದ್ದರಂತೆ.['ಫಿಲ್ಮಿಬೀಟ್' ವಿಶೇಷ; 'ಅಕಿರ' ನಾಯಕ ಅನೀಶ್ ಸಂದರ್ಶನ]

  ಬರೋಬ್ಬರಿ 45 ಕಥೆ ಕೇಳಿದ ಅನೀಶ್

  ಬರೋಬ್ಬರಿ 45 ಕಥೆ ಕೇಳಿದ ಅನೀಶ್

  ಅಂದಹಾಗೆ ಅನೀಶ್ ಅವರು ಎಷ್ಟು ಕಥೆ ಕೇಳಿದ್ರು ಗೊತ್ತಾ?, ಬರೋಬ್ಬರಿ 45 ಕಥೆ ಕೇಳಿ, ಕೊನೆಗೋ 46ನೇ ಕಥೆಯನ್ನು ಓಕೆ ಮಾಡಿದ್ದಾರೆ.

  46ನೇ ಕಥೆ ಯಾರದ್ದು.?

  46ನೇ ಕಥೆ ಯಾರದ್ದು.?

  ಇದೀಗ ಅನೀಶ್ ಅವರು ಒಪ್ಪಿಕೊಂಡ 46ನೇ ಕಥೆ ಡಾ.ಸೂರಿ ಅವರದ್ದು. ನಿರ್ದೇಶಕ ಕಮ್ ನಿರ್ಮಾಪಕರಾಗಿರುವ ಡಾ.ಸೂರಿ ಅವರು ಈ ಮೊದಲು ಯಶ್ ಅವರ 'ಲಕ್ಕಿ' ಸಿನಿಮಾಗೆ ಆಕ್ಷನ್-ಕಟ್ ಹೇಳಿ, ನೀನಾಸಂ ಸತೀಶ್ ಅವರ 'ಕ್ವಾಟ್ಲೆ ಸತೀಶ' ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದರು.

  ಯಶ್ ಹೇಳಿದ್ದಕ್ಕೆ ಒಪ್ಪಿಕೊಂಡ ಅನೀಶ್

  ಯಶ್ ಹೇಳಿದ್ದಕ್ಕೆ ಒಪ್ಪಿಕೊಂಡ ಅನೀಶ್

  ಇನ್ನು ಡಾ.ಸೂರಿ ಅವರನ್ನು ಚಿತ್ರವನ್ನು ಅನೀಶ್ ಒಪ್ಪಿಕೊಳ್ಳಲು ಮುಖ್ಯ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು. 'ಅಕಿರ' ಸಿನಿಮಾ ನೋಡಿ ಮೆಚ್ಚಿಕೊಂಡ ಯಶ್ ಅವರು ಅನೀಶ್ ಗೆ ಕರೆ ಮಾಡಿ ಸೂರಿ ಅವರ ಹತ್ತಿರ ಒಂದು ಕಥೆ ಇದೆ ಕೇಳು ಎಂದಿದ್ದರಂತೆ. ಆತ್ಮೀಯ ಸ್ನೇಹಿತನಂತಿರುವ ಯಶ್ ಅವರ ಮಾತಿನಂತೆ ಕಥೆ ಕೇಳಿ ಖುಷಿಪಟ್ಟ ಅನೀಶ್ ಅವರು ಇದೀಗ ಮುಂದಿನ ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ.

  'ಅಕಿರ' ನಿರ್ಮಾಪಕರ ಸಾರಥ್ಯದಲ್ಲಿ

  'ಅಕಿರ' ನಿರ್ಮಾಪಕರ ಸಾರಥ್ಯದಲ್ಲಿ

  ಇದೀಗ ಡಾ.ಸೂರಿ ಮತ್ತು ಅನೀಶ್ ಅವರ ಕಾಂಬಿನೇಷನ್ ನ ಇನ್ನೂ ಹೆಸರಿಡದ ಹೊಸ ಸಿನಿಮಾ ಸೆಟ್ಟೇರುವ ಲೆವೆಲ್ ಗೆ ಬಂದಿದ್ದು, 'ಅಕಿರ' ಚಿತ್ರದ ನಿರ್ಮಾಪಕರೇ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ಸದ್ಯಕ್ಕೆ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ.

  English summary
  Kannada Actor Anish Tejeshwar and the makers of 'Akira' are all set to join hands for another film. This time, they will have of the Dr. Suri Actor Yash and actress Ramya starrer 'Lucky' directing it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X