'ಬಿಗ್ ಬಾಸ್-3'ನಲ್ಲಿ ಹಾಟ್ ಅಂಡ್ ಹ್ಯಾಂಡ್ಸಮ್ ಚಂದನ್?
ಅಂತೂ 'ಬಿಗ್ ಬಾಸ್' ಸೀಸನ್ 3 ಗೆ ಅಧಿಕೃತ ಚಾಲನೆ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್-3' ಪ್ರಸಾರವಾಗಲಿದೆ. ಇತ್ತೀಚೆಗಷ್ಟೆ ಕಾರ್ಯಕ್ರಮದ ಪ್ರೋಮೋ ಶೂಟ್ ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿ, ಅಧಿಕೃತ ಚಾಲನೆ ನೀಡಿದರು.
ಅಲ್ಲಿಗೆ 'ಬಿಗ್ ಬಾಸ್-3'ನಲ್ಲಿ ಸುದೀಪ್ ಪಕ್ಕಾ ಅಂತಾಯ್ತು. ಈಗ ಸ್ಪರ್ಧಿಗಳ ಲೆಕ್ಕಾಚಾರ ಶುರುವಾಗಿದೆ. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಅನ್ನೋದು ಅಂತಿಮವಾಗಿಲ್ಲ. ಮೂಲಗಳ ಪ್ರಕಾರ ಕಿರುತೆರೆಯ ಸ್ಟಾರ್ ಚಂದನ್ ಗೆ ಆಫರ್ ಸಿಕ್ಕಿದೆ. ['ಬಿಗ್ ಬಾಸ್' ಸೀಸನ್ 3 - ಸುದೀಪ್ 20 ಕೋಟಿ ಡೀಲ್.!?]

'ಲಕ್ಷ್ಮಿ ಬಾರಮ್ಮ' ಸೀರಿಯಲ್ ನಿಂದ ಖ್ಯಾತಿ ಪಡೆದ ಚಂದನ್, ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಚಿತ್ರದಲ್ಲಿ ಮಿಂಚಿದ್ದರು. ನೋಡೋಕೆ ಹಾಟ್ ಅಂಡ್ ಹ್ಯಾಂಡ್ಸಮ್ ಆಗಿರುವ ಚಂದನ್ ಗೆ ಫೀಮೇಲ್ ಫ್ಯಾನ್ಸ್ ಸಂಖ್ಯೆ ಜಾಸ್ತಿ. ಹೀಗಾಗಿ ಚಂದನ್ ನ ಅಖಾಡಕ್ಕೆ ಇಳಿಸುವ ಬಗ್ಗೆ 'ಬಿಗ್ ಬಾಸ್-3' ಕಾರ್ಯಕ್ರಮದ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
'ಬಿಗ್ ಬಾಸ್-3'ನಲ್ಲಿ ಚಂದನ್ ಕಾಣಿಸಿಕೊಳ್ಳುವುದು ಇನ್ನೂ ಪಕ್ಕಾ ಆಗಿಲ್ಲ. ಆದ್ರೆ, ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚ ವೆಂಕಟ್, ನಿತ್ಯಾನಂದ, ರಾಗಿಣಿ ದ್ವಿವೇದಿ, ಮೈತ್ರಿಯಾ ಗೌಡ, ಮಾಸ್ಟರ್ ಆನಂದ್ ಫೇವರಿಟ್ ಕನ್ಟೆಸ್ಟೆಂಟ್ ಆಗಿದ್ದಾರೆ. [ಬಿಗ್ ಬಾಸ್-3ಗೆ ಸುದೀಪ್ ಪಕ್ಕಾ, ಇನ್ನುಳಿದವರ ಲೆಕ್ಕ?]
'ಬಿಗ್ ಬಾಸ್-3'ನಲ್ಲಿ ನೀವು ನೋಡಲು ಬಯಸುವ ನಿಮ್ಮ ಅಚ್ಚುಮೆಚ್ಚಿನ ಸ್ಪರ್ಧಿಯನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.....


Click it and Unblock the Notifications











