»   » ಮತ್ತೆ ಖಳನಟ ಆಗ್ತಾರಾ ಲೂಸ್ ಮಾದ ಯೋಗೇಶ್.?

ಮತ್ತೆ ಖಳನಟ ಆಗ್ತಾರಾ ಲೂಸ್ ಮಾದ ಯೋಗೇಶ್.?

By: ಸೋನು ಗೌಡ
Subscribe to Filmibeat Kannada

ಸಿನಿಮಾಗಳಲ್ಲಿ ಹೀರೋ ಪಾತ್ರ ಮಾಡುತ್ತಿದ್ದವರು, ಹೀರೋ ಆಗಿಯೇ ಮುಂದುವರಿಯೋ ಕಾಲ ಕೊಂಚ ಕಡಿಮೆ ಆಗುತ್ತಿದೆ. ಈಗೇನಿದ್ದರೂ ಹೀರೋಗಳು, ಸ್ಟೈಲಿಷ್ ಲುಕ್ ನಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸೋದು ಟ್ರೆಂಡ್.

'ಡೈರೆಕ್ಟರ್ ಸ್ಪೆಷಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಧನಂಜಯ್ ಅವರು ಸುಮಾರು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ ನಂತರ, ಇದೀಗ ಚೆಂದದ ಕೂದಲಿಗೆ ಕತ್ತರಿ ಹಾಕಿಕೊಂಡು ವಿಲನ್ ಆಗಲು ತಯಾರಾಗಿದ್ದಾರೆ.[ಎಕ್ಸ್ ಕ್ಲ್ಯೂಸಿವ್: ಗುಮ್ಮೋ 'ಟಗರಿಗೆ' ಎದುರಾಗಿ ನಿಂತ ಧನಂಜಯ್]

ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ 'ಟಗರು' ಚಿತ್ರದಲ್ಲಿ ಧನಂಜಯ್ ಅವರು ವಿಲನ್ ಆಗಿ ಶಿವಣ್ಣನಿಗೆ ಟಕ್ಕರ್ ಕೊಡಲಿದ್ದಾರೆ. ಇದೀಗ ಇನ್ನೊಬ್ಬ ಹೀರೋ ವಿಲನ್ ಆಗಲು ಹೊರಟಿದ್ದಾರೆ. ಅವರು ಬೇರಾರು ಅಲ್ಲ, ನಟ ಲೂಸ್ ಮಾದ ಯೋಗಿ ಅಲಿಯಾಸ್ ಯೋಗೇಶ್ ಅವರು.

ಅಂದಹಾಗೆ ಯೋಗಿ ಅವರು ಮೊದಲು ಬೆಳ್ಳಿತೆರೆಗೆ ಪರಿಚಯ ಆಗಿದ್ದೇ, ವಿಲನ್ ಆಗಿ. 'ದುನಿಯಾ' ಚಿತ್ರದಲ್ಲಿ ಲೂಸ್ ಮಾದ ಅನ್ನೋ ರೌಡಿ ಪಾತ್ರದ ಮೂಲಕ ಮನೆ ಮಾತಾದರು. ಅದೇ ಯೋಗಿ ಇದೀಗ ಮತ್ತೆ ರೌಡಿ ಆಗುತ್ತಿದ್ದಾರಂತೆ. ಯಾರ ಜೊತೆ, ಯಾವ ಚಿತ್ರದಲ್ಲಿ?, ಅನ್ನೋ ಮಾಹಿತಿಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ....

ಲೀಡರ್ ನಲ್ಲಿ ಯೋಗೇಶ್

ಹಲವು ದಿನಗಳಿಂದ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದ ನಟ ಲೂಸ್ ಮಾದ ಯೋಗೇಶ್ ಅವರು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಲೀಡರ್' ಚಿತ್ರದಲ್ಲಿ ಒಂದು ಪಾತ್ರ ವಹಿಸಲಿದ್ದಾರೆ ಅನ್ನೋ ವಿಚಾರ ಗೊತ್ತೆ ಇದೆ. ಆದರೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ತಿಳಿದಿರಲಿಲ್ಲ.[ಶಿವಣ್ಣ 'ಲೀಡರ್' ಅವತಾರ ತಾಳುವುದು ಯಾವಾಗ.?]

ವಿಲನ್ ಆಗ್ತಾರಾ ಯೋಗಿ.?

ಮೂಲಗಳ ಪ್ರಕಾರ ಲೂಸ್ ಮಾದ ಯೋಗೇಶ್ ಅವರು ಶಿವಣ್ಣ ಅಭಿನಯದ 'ಲೀಡರ್' ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.[ಸೋಲಿನಿಂದ ಕಂಗೆಟ್ಟಿರುವ ಯೋಗಿಗೆ ಕೈ ಹಿಡಿಯುತ್ತಾನಾ 'ಕಾಲಭೈರವ'?]

ಯೋಗಿ ದಿಲ್ ಖುಷ್

ಹಲವು ದಿನಗಳಿಂದ ಶಿವಣ್ಣ ಅವರ ಜೊತೆ ತೆರೆ ಹಂಚಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದ ಯೋಗೇಶ್ ಅವರಿಗೆ 'ಲೀಡರ್' ಚಿತ್ರದಲ್ಲಿ ಅವಕಾಶ ಸಿಕ್ಕಾಗ, ಪಾಸಿಟಿವೋ-ನೆಗೆಟಿವೋ ಅಂತ ಹಿಂದೆ-ಮುಂದೆ ನೋಡದೇ, ನಟಿಸಲು ಒಪ್ಪಿಕೊಂಡರಂತೆ.

ಶಿವಣ್ಣ ಅಭಿಮಾನಿ ಯೋಗಿ

ಅಂದಹಾಗೆ ಯೋಗಿ ಅವರು ಶಿವಣ್ಣ ಅವರ ದೊಡ್ಡ ಫ್ಯಾನ್ ಅಂತೆ. ಅದಕ್ಕಾಗಿ ಅವರ ಪಕ್ಕ ನಿಂತು ನಟಿಸಬೇಕು ಅಂತ ಹಲವು ದಿನಗಳಿಂದ ಕನಸು ಕಟ್ಟಿಕೊಂಡಿದ್ದರಂತೆ. ಇದೀಗ ಆ ಅವಕಾಶ ಸಿಕ್ಕಾಗ, ಯಾವ ಪಾತ್ರವಾದರೇನು ಎಂದು ನೆಗೆಟಿವ್ ರೋಲ್ ನಲ್ಲೂ ಮಿಂಚಲು ಯೋಗಿ ಅವರು ತಯಾರಾಗಿದ್ದಾರೆ ಎನ್ನಲಾಗುತ್ತಿದೆ.

ಅಧೀಕೃತ ಘೋಷಣೆ ಆಗಬೇಕಿದೆ.

ಸದ್ಯಕ್ಕೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಇಷ್ಟು, ಇನ್ನೇನಿದ್ದರೂ ಚಿತ್ರತಂಡದಿಂದ ಅಧೀಕೃತ ಮಾಹಿತಿ ಹೊರಬೀಳಬೇಕಿದೆ. ತದನಂತರವಷ್ಟೇ ಏನು ಅಂತ ಕನ್ಫರ್ಮ್ ಆಗಿ ಹೇಳಬಹುದು.

'ಲೀಡರ್' ತಾರಾಗಣ

'ಲೀಡರ್' ಚಿತ್ರದಲ್ಲಿ ಶಿವಣ್ಣ ಅವರ ಜೊತೆ ನಾಯಕಿಯಾಗಿ ನಟಿ ಪ್ರಣೀತಾ ಸುಭಾಷ್ ಅವರು ಕಾಣಿಸಿಕೊಂಡಿದ್ದಾರೆ. ಜೊತೆಗೆ ನಟಿ ದೀಪಿಕಾ ಕಾಮಯ್ಯ ಅವರು ಪತ್ರಕರ್ತೆಯ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ಶ್ರೀನಗರ ಕಿಟ್ಟಿ ಮಗಳು ಪರಿಣಿತಾ ಶಿವಣ್ಣ ಅವರ ಮಗಳಾಗಿ ಕಾಣಿಸಿಕೊಂಡಿದ್ದಾಳೆ. ನಟ ವಿಜಯ್ ರಾಘವೇಂದ್ರ ಗುರು ಜಗ್ಗೇಶ್ ಮತ್ತು ವಂಶಿ ಕೃಷ್ಣ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರಕ್ಕೆ 'ರೋಸ್' ಖ್ಯಾತಿಯ ಸಹನಾ ಮೂರ್ತಿ ಆಕ್ಷನ್-ಕಟ್ ಹೇಳಲಿದ್ದು, ತರುಣ್ ಶಿವಣ್ಣ ಬಂಡವಾಳ ಹೂಡಲಿದ್ದಾರೆ

English summary
Kannada Actor Yogesh to be play Villain in Kannada Actor Shiva Rajkumar starrer Kannada Movie 'Leader'. Actress Pranitha, Actor Vijay Raghavendra, Actor Guru Jaggesh in the lead. The movie is directed by Sahana Murthy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada