ಬಾಲಿವುಡ್ ನಲ್ಲೂ ರಾಗಿಣಿ ಅವರ ತುಪ್ಪ ಘಮ ಘಮ ಅನ್ನುತ್ತಿದೆ
ಚಂದನವನದ ಅತ್ಯಂತ ಎತ್ತರದ ನಟಿ ಹಾಗೂ ತುಪ್ಪದ ಬೆಡಗಿ ಅಂತಾನೇ ಖ್ಯಾತಿ ಗಳಿಸಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಬರ್ಜರಿ ಅದೃಷ್ಟವೊಂದು ಖುಲಾಯಿಸಿದಂತಿದೆ. ಆ ಕಾರ್ಯಕ್ರಮ, ಈ ಕಾರ್ಯಕ್ರಮ, ಜಾಹೀರಾತು ಲೋಕ ಮುಂತಾದವುಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಇದೀಗ ಹಲವಾರು ಪ್ರಾಜೆಕ್ಟ್ ಗಳಿಗೂ ಸಹಿ ಹಾಕಿದ್ದಾರೆ.
ಹೌದು ಈ ನಡುವೆ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ರಾಗಿಣಿ ದ್ವಿವೇದಿ ಅವರು ಬಾಲಿವುಡ್, ಕಾಲಿವುಡ್ ಸೇರಿದಂತೆ ಟಾಲಿವುಡ್ ಕ್ಷೇತ್ರಗಳಲ್ಲಿ ಒಂದೊಂದು ಚಿತ್ರಗಳಿಗೆ ಸಹಿ ಹಾಕಿದ್ದಾರಂತೆ.[ತುಪ್ಪದ ಬೆಡಗಿ ರಾಗಿಣಿ ಅಭಿನಯದ 'ಅಮ್ಮ' ಸಿನಿಮಾ ನಿಂತ್ಹೋಯ್ತಾ?]
ಈ ಮೊದಲು ಬಾಲಿವುಡ್ ನಟ ಶಾಹೀದ್ ಕಪೂರ್ ಮತ್ತು ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದ, ನಿರ್ದೇಶಕ ಪ್ರಭುದೇವ ಆಕ್ಷನ್-ಕಟ್ ಹೇಳಿದ್ದ 'ರಾ...ರಾಜ್ ಕುಮಾರ್' ಚಿತ್ರದಲ್ಲಿ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಇದೀಗ ಬರೀ ಡ್ಯಾನ್ಸ್ ಮಾತ್ರವಲ್ಲದೇ, ಒಂದು ಚಿತ್ರಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ['ತುಪ್ಪದ ಬೆಡಗಿ'ಗೆ ಸಿಕ್ಕ ಹೊಸ ಬಿರುದು ಯಾವುದು ಗೊತ್ತಾ?]
ಈಗಾಗಲೇ ತಮಿಳು ಚಿತ್ರವೊಂದರಲ್ಲಿ ನಟ ಜಯಂರವಿ ಅವರ ಜೊತೆ ಮಿಂಚಿದ್ದ ರಾಗಿಣಿ ಅವರು ಸದ್ಯಕ್ಕೆ 2 ತಮಿಳು ಚಿತ್ರಗಳಿಗೆ ಸಹಿ ಹಾಕಿದ್ದಾರೆ.['ನಾಟಿ ಕೋಳಿ' ನಿರ್ದೇಶಕನ ಮೇಲೆ ರಾಗಿಣಿ ಕೋಪವೇಕೆ?]
ಇದೀಗ ಬಾಲಿವುಡ್ ಚಿತ್ರ ಯಾವುದು?, ಯಾರು ನಿರ್ದೇಶಕರು?, ಅನ್ನೋದರ ಬಗ್ಗೆ ಗುಟ್ಟು ರಟ್ಟಾಗದಿದ್ದರೂ ರಾಗಿಣಿ ಅವರ ಬಾಲಿವುಡ್ ಪ್ರಾಜೆಕ್ಟ್ ಓಕೆ ಆಗಿ ಅವರು ಬಿಟೌನ್ ನಲ್ಲಿ ಕಾಣಿಸಿಕೊಳ್ಳೋದು ಮಾತ್ರ ಪಕ್ಕಾ.


Click it and Unblock the Notifications













