»   » 'ಬಿಗ್ ಬಾಸ್' ನಿಂದ ನಟಿ ಶ್ರುತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?

'ಬಿಗ್ ಬಾಸ್' ನಿಂದ ನಟಿ ಶ್ರುತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?

By: ಹರಾ
Subscribe to Filmibeat Kannada

ವೀಕ್ಷಕರಿಗೆ ಇಷ್ಟ ಇದ್ಯೋ, ಇಲ್ವೋ..ಆದ್ರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ನಟಿ ಶ್ರುತಿ ಗೆಲುವಿನ ಕಿರೀಟ ತೊಟ್ಟಿದ್ದಾಗಿದೆ.

'ಬಿಗ್ ಬಾಸ್' ಕನ್ನಡದ ಮೂರು ಆವೃತ್ತಿಗಳಲ್ಲಿ ಮೊದಲ ಬಾರಿಗೆ ಮಹಿಳೆ ಗೆದ್ದಿರುವುದು ಸಂತಸದ ವಿಚಾರವೇ. ಆದ್ರೀಗ ವಿಷಯ ಅದಲ್ಲ. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ನಟಿ ಶ್ರುತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಅಂತ ಈ ಹಿಂದೆ ವರದಿ ಆಗಿತ್ತು. [ನಟಿ ಶ್ರುತಿ ಮುಡಿಗೆ 'ಬಿಗ್ ಬಾಸ್' ಗೆಲುವಿನ ಕಿರೀಟ]

ಅತಿ ಹೆಚ್ಚು ಸಂಭಾವನೆ ಜೊತೆಗೆ ಗೆಲುವಿನ ಪುರಸ್ಕಾರ ಪಡೆದಿರುವ ನಟಿ ಶ್ರುತಿ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಕಮಾಯಿ ಮಾಡಿರುವ ಒಟ್ಟು ಮೊತ್ತ ಎಷ್ಟು ಅಂತ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.! ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ...

ನಟಿ ಶ್ರುತಿಗೆ ಸಿಕ್ಕ ಬಹುಮಾನ ಮೊತ್ತ?

'ಬಿಗ್ ಬಾಸ್-3' ವಿಜೇತರಾದ ಕಾರಣ ಬಹುಮಾನವಾಗಿ ನಟಿ ಶ್ರುತಿ ಬರೋಬ್ಬರಿ 50 ಲಕ್ಷ ರೂಪಾಯಿ ಪಡೆದಿದ್ದಾರೆ. ['ಫೇಕ್ ಶೋ' ಬಿಗ್ ಬಾಸ್ ಗೆ ಛೀಮಾರಿ ಹಾಕಿದ ವೀಕ್ಷಕರು!]

ಟ್ರೋಫಿ ಕೂಡ ಪಡೆದರು!

ಇದರೊಂದಿಗೆ 'ಬಿಗ್ ಬಾಸ್' ಟ್ರೋಫಿ ಕೂಡ ಎತ್ತಿ ಹಿಡಿದಿರುವುದನ್ನ ನೀವೇ ನೋಡಿದ್ದೀರಿ. ['ಬಿಗ್ ಬಾಸ್' ಮನೆಗೆ ನಟ ರವಿಚಂದ್ರನ್ ಬಂದಿದ್ಯಾಕೆ ಗೊತ್ತಾ?]

ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಶ್ರುತಿ

ನಟಿ ಶ್ರುತಿ ಅವರಿಗೆ 'ಬಿಗ್ ಬಾಸ್' ಮನೆಯಲ್ಲಿ ಬಂಧಿಯಾಗಲು ಬರೋಬ್ಬರಿ 20 ಲಕ್ಷ ರೂಪಾಯಿ ನೀಡಲಾಗಿದೆ ಅಂತ ಈ ಹಿಂದೆ ಪತ್ರಿಕೆಗಳಲ್ಲಿ ವರದಿ ಆಗಿತ್ತು.

ಒಂದು ವಾರಕ್ಕೆ 20 ಲಕ್ಷ?

'ಬಿಗ್ ಬಾಸ್-3' ಕಾರ್ಯಕ್ರಮದ ಮೊದಲ ವಾರಕ್ಕೆ ಹೊರಬಿದ್ದ ನಟಿ ಮಾಧುರಿ ಇಟಗಿ ಅವರಿಗೆ ಒಂದು ವಾರಕ್ಕೆ 13 ಲಕ್ಷ ನೀಡಲಾಗಿದೆ ಅಂತ ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಮಾಧುರಿ ಇಟಗಿಗೆ ವಾರಕ್ಕೆ 13 ಲಕ್ಷ ಅಂದ್ರೆ ನಟಿ ಶ್ರುತಿ 98 ದಿನ ಮನೆಯಲ್ಲಿ ಇದ್ದಿದ್ದಕ್ಕೆ 20 ಲಕ್ಷ ರೂಪಾಯಿ ಕೊಡ್ತಾರಾ?

ಸಂಭಾವನೆ ಇನ್ನೂ ಹೆಚ್ಚಿರಬಹುದು!

ಬರೋಬ್ಬರಿ 98 ದಿನ ಮನೆಯಲ್ಲಿದ್ದು, ಯಾವುದೇ ವಿವಾದ ಮತ್ತು ಜಗಳಕ್ಕೆ ಮುನ್ನುಡಿ ಬರೆಯದ ನಟಿ ಶ್ರುತಿಗೆ 20 ಲಕ್ಷಕ್ಕಿಂತ ಹೆಚ್ಚು ಸಂಭಾವನೆ ನೀಡಲಾಗಿದೆ ಎನ್ನುತ್ತಿವೆ ಮೂಲಗಳು.

ಮುಕ್ಕಾಲು ಕೋಟಿ ಒಡತಿ ನಟಿ ಶ್ರುತಿ!?

ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ನಟಿ ಶ್ರುತಿಗೆ 'ಬಿಗ್ ಬಾಸ್' ಕಾರ್ಯಕ್ರಮದಿಂದ ಏನಿಲ್ಲಾ ಅಂದ್ರೂ (ಬಹುಮಾನ ಮೊತ್ತ 50 ಲಕ್ಷ ಸೇರಿ) ಮುಕ್ಕಾಲು ಕೋಟಿ (75 ಲಕ್ಷ) ಸಿಕ್ಕಿದೆ.

ಸಿನಿಮಾದಲ್ಲೂ ಇಷ್ಟು ಸಿಕ್ತಿರ್ಲಿಲ್ಲ!

ಸ್ಯಾಂಡಲ್ ವುಡ್ ನ ಈಗಿನ ಹೀರೋಯಿನ್ ಗಳಿಗೂ ಒಂದು ಸಿನಿಮಾಗೆ ಇಷ್ಟು ಮೊತ್ತ ಸಿಗುವುದಿಲ್ಲ. ಅದ್ರಲ್ಲೂ ನಟಿ ಶ್ರುತಿಗೆ ದೂರದ ಬೆಟ್ಟ. ಸಿನಿಮಾದಲ್ಲಿ ಕಷ್ಟವಾಗಿದ್ದನ್ನ ನಟಿ ಶ್ರುತಿ ಕಿರುತೆರೆಯಲ್ಲಿ ಸಂಪಾದಿಸಿದ್ದಾರೆ.

ಅದೃಷ್ಟ ಯಾರಿಗುಂಟು ಯಾರಿಗಿಲ್ಲ!

''ನನ್ನ ಜೀವನದಲ್ಲಿ ದುಡ್ಡು ಪ್ರಮುಖ ಪಾತ್ರ ವಹಿಸುತ್ತೆ. ಹಣವೊಂದೇ ಮುಖ್ಯ ಅಲ್ಲ. ಹಣದ ಜೊತೆ ತೃಪ್ತಿ ಕೂಡ ಬೇಕು'' ಅಂತ ಹೇಳಿದ್ದ ನಟಿ ಶ್ರುತಿಗೆ 'ಬಿಗ್ ಬಾಸ್' ಕಾರ್ಯಕ್ರಮದಿಂದ ಹಣ ಜೊತೆಗೆ ಜನಪ್ರಿಯತೆ ಕೂಡ ಲಭಿಸಿದೆ.

ಚಂದನ್ ಗೆ ಸಿಕ್ಕಿದ್ದು ಎಷ್ಟು?

ನಟಿ ಶ್ರುತಿ ಜೊತೆಗೆ ಕಡೆವರೆಗೂ 'ಬಿಗ್ ಬಾಸ್' ಮನೆಯಲ್ಲಿದ್ದ ನಟ ಚಂದನ್ ಕೈಗೆ ಸಿಕ್ಕಿರುವುದು ಸಂಭಾವನೆ ಮಾತ್ರ. (ಅಗ್ರೀಮೆಂಟ್ ಆದ ಪ್ರಕಾರ)

ಮಾಸ್ಟರ್ ಆನಂದ್ ಗೂ ಅಷ್ಟೇ

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಮಸ್ತ್ ಮನರಂಜನೆ ನೀಡಿ ಮೂರನೇ ಸ್ಥಾನ ಪಡೆದ ಮಾಸ್ಟರ್ ಆನಂದ್ ಕೂಡ ಕಲರ್ಸ್ ಕನ್ನಡ ವಾಹಿನಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಸಂಭಾವನೆಯನ್ನಷ್ಟೇ ಪಡೆದಿದ್ದಾರೆ ಎನ್ನಲಾಗಿದೆ. (ಎಷ್ಟು ಎನ್ನುವ ಮಾಹಿತಿ ಬಹಿರಂಗವಾಗಿಲ್ಲ.)

English summary
Do you know how much did Kannada Actress Shruthi get from Bigg Boss Kannada 3 as remuneration? Read the article for full details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada