For Quick Alerts
  ALLOW NOTIFICATIONS  
  For Daily Alerts

  ಸ್ಪಾಟ್ ಫಿಕ್ಸಿಂಗ್ ನಲ್ಲಿ ಇಬ್ಬರು ಕನ್ನಡ ಸಿನಿ ನಟಿಯರು

  By ಉದಯರವಿ
  |
  ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಪಾಟ್ ಫಿಕ್ಸಿಂಗ್ ನಲ್ಲಿ ಇಬ್ಬರು ಕನ್ನಡ ಸಿನಿಮಾ ನಟಿಯರ ಹೆಸರು ಕೇಳಿಬಂದಿದೆ. ಇವರಿಬ್ಬರೂ ಫಿಕ್ಸಿಂಗ್ ನಲ್ಲಿ 'ಲಿಂಕ್ ಏಜೆಂಟ್'ಗಳಾಗಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

  ಒಬ್ಬ ನಟಿ ಹೈ ಹೀಲ್ಸ್ ಬಳಸುತ್ತಾರೆ ಹಾಗೂ ಈಕೆ ರೂಪದರ್ಶಿಯೂ ಹೌದು. ಇನ್ನೊಬ್ಬ ತಾರೆಯ ಮುಖ ತ್ರಿಕೋನ ಆಕಾರದಲ್ಲಿದೆ ಎನ್ನುತ್ತವೆ ಮೂಲಗಳು. ಇವರಿಬ್ಬರೂ 'ಸಾಹು' ಎಂಬ ಕೋಡ್ ಹೊಂದಿರುವ ಬುಕ್ಕಿಂಗ್ ಏಜೆಂಟ್ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

  ಕನ್ನಡ ಸಿನಿಮಾ ನಟಿಯರು ಸ್ಪಾಟ್ ಫಿಕ್ಸಿಂಗ್ ದಂಧೆಯಲ್ಲಿ ತೊಡಗಿದ್ದರು ಎಂಬ ರಹಸ್ಯವನ್ನು ಮಾಧ್ಯಮಗಳಿಗೆ "ಕೆಎಂಆರ್" ಎಂಬ ಮತ್ತೊಬ್ಬ ಬುಕ್ಕಿ ಬಯಲು ಮಾಡಿದ್ದಾನೆ. ಇನ್ನೊಂದು ಮಾಹಿತಿಯ ಪ್ರಕಾರ ಇವರಿಬ್ಬರೂ ನಟಿಯರೂ ಕ್ರಿಕೆಟ್ ಆಟಗಾರರಿಗೆ ತೀರಾ ಹತ್ತಿರವಾಗಿದ್ದರು ಎನ್ನಲಾಗಿದೆ.

  ಆದರೆ ಬಹಳ ಹಿಂದೆಯೇ ಇವರಿಬ್ಬರೂ ತಮ್ಮ ಸಂಪರ್ಕವನ್ನು ಕ್ರಿಕೆಟ್ ಆಟಗಾರರ ಜೊತೆ ಕಳಚಿಕೊಂಡಿದ್ದಾರಂತೆ. ಒಟ್ಟಾರೆಯಾಗಿ ಎಲ್ಲಿಂದಲೋ ಆರಂಭವಾದ ಬೆಟ್ಟಿಂಗ್ ಲಿಂಕ್ ಗಳೂ ಬಾಲಿವುಡ್ ನಿಂದ ಈಗ ಸ್ಯಾಂಡಲ್ ವುಡ್ ತನಕ ಬಂದಿದೆ. ಆದರೆ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ನಟಿಯರ ಹೆಸರು ಮಾತ್ರ ಬಹಿರಂಗವಾಗಿಲ್ಲ.

  ಇತ್ತೀಚೆಗೆ ಸ್ಪಾಟ್ ಫಿಕ್ಸಿಂಗ್ ನಲ್ಲಿ ನಟಿ ಲಕ್ಷ್ಮಿ ಪಾತ್ರವೇನಾದರೂ ಇದೆಯೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು. ಅವರು ಕ್ರಿಕೆಟಿಗೆ ಶ್ರೀಶಾಂತ್ ಗೆ ಕ್ಲೋಸ್ ಆಗಿದ್ದದ್ದೇ ಈ ಅನುಮಾನಕ್ಕೆ ಕಾರಣವಾಗಿತ್ತು. ಆದರೆ ಲಕ್ಷ್ಮಿ ರೈ ಅವರು ಪತ್ರಿಕಾಗೋಷ್ಠಿ ಕರೆದು ಈ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿದ್ದರು.

  English summary
  The speculation news rounds in media is that, two Kannada actresses are working as 'link agents,' in cricket betting. One is "wearing high-heels and is a model-turned-actress," while the other is a "triangle-faced-actress." 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X