'KGF 2' ಪ್ಯಾನ್ ಇಂಡಿಯಾ ಮಾತ್ರವಲ್ಲ, ಹಾಲಿವುಡ್ ಚಿತ್ರ ಆಗಲಿದೆ!
ಕೆಜಿಎಫ್ 2 ಚಿತ್ರದ ಬಿಡುಗಡೆಗೆ ದಿನ ಗಣನೆ ಶುರುವಾಗಿದೆ. ಭಾರತದಾದ್ಯಂತ ಕೆಜಿಎಫ್ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕೆಜಿಎಫ್ ವತಿಯಿಂದ ಹೊಸದೊಂದು ಸುದ್ದಿ ಬಂದಿದೆ. ಈ ಸುದ್ದಿ ಸದ್ಯ ಕನ್ನಡಿಗರ ಮೈ ರೋಮಾಂಚನ ಗೊಳಿಸುತ್ತಿದೆ.
ಕೆಜಿಎಫ್ 2 ಚಿತ್ರಕ್ಕಾಗಿ ಇಂಡಿಯಾ ಮಾತ್ರವಲ್ಲಾ, ಜಗತ್ತಿನಾದ್ಯಂತ ಇರುವ ಪ್ರೇಕ್ಷಕರು ಕಾಯುತ್ತಿದ್ದಾರೆ. ಹಾಗಾಗಿ ಕೆಜಿಎಫ್ ಕೇವಲ ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿಲ್ಲ. ಬದಲಿಗೆ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿದೆ. ಹೌದು ಕೆಜಿಎಫ್ 2 ಚಿತ್ರ, ಇಂಗ್ಲಿಷ್‌ನಲ್ಲೂ ರಿಲೀಸ್ ಆಗಲಿದೆಯಂತೆ.
ಕೆಜಿಎಫ್ ಈಗಾಲೇ ಒಂದೊಂದೇ ದಾಖಲೆಗಳನ್ನ ಪುಡಿ ಪುಡಿ ಮಾಡಿ ಕೀರ್ತಿ ದಕ್ಕಿಸಿಕೊಂಡಿದೆ. ಈಗ ಹಾಲಿವುಡ್ ಗೂ ಎಂಟ್ರಿ ಕೊಡಲು ಕನ್ನಡ ಸಿನಿಮಾ ಸಜ್ಜಾಗುತ್ತಿದೆ. ಈ ಮೂಲಕ ಕೆಜಿಎಫ್ ಮತ್ತೊಂದು ದಾಖಲೆ ಬರೆಯೋಕೆ ಸಜ್ಜಾಗಿದೆ. ಬಾಲಿವುಡ್ ಎಂಬ ದೊಡ್ಡ ದೈತ್ಯನನ್ನು ಗೆದ್ದ ಕೆಜಿಎಫ್ ಈಗ ಹಾಲಿವುಡ್ ಮೇಲೆ ಕಣ್ಣಿಟ್ಟಿದೆ.

KGF 2 ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಇದರ ಜೊತೆಗೆ 'ಕೆಜಿಎಫ್-2' ಚಿತ್ರವನ್ನ ಇಂಗ್ಲಿಷ್ ಭಾಷೆಯಲ್ಲೂ ರಿಲೀಸ್ ಮಾಡಲು ಚಿತ್ರ ತಂಡ ಮುಂದಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಐದು ಭಾಷೆಗಳಲ್ಲಿ ಚಿತ್ರ ಸಿದ್ಧವಾಗಿದ್ದು, ಇಂಗ್ಲಿಷ್‌ನಲ್ಲೂ ರಿಲೀಸ್ ಆಗುವ ಮೂಲಕ ಹಾಲಿವುಡ್ ಅಂಗಳದಲ್ಲೂ ಹವಾ ಎಬ್ಬಿಸಲು ರಾಕಿ ಭಾಯ್ ಸಜ್ಜಾಗಿದ್ದಾರೆ.
'ಕೆಜಿಎಫ್-2' ಇಂಗ್ಲಿಷ್‌ನಲ್ಲೂ ತೆರೆ ಕಂಡರೆ ಅದು ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಹೆಮ್ಮೆಯ ಸಂಗತಿ. ಕನ್ನಡ ಸಿನಿಮಾ ಹಾಲಿವುಡ್ ಸಿನಿಮಾಗಳಿಗೂ ಸ್ಪರ್ಧೆ ನೀಡುವ ಮಟ್ಟಿಗೆ ಬೆಳೆದು ನಿಲ್ಲುವುದು ಹೆಮ್ಮೆಯ ವಿಚಾರ. ಹೀಗಾಗಿ 'ಕೆಜಿಎಫ್-2' ಇಂಗ್ಲಿಷ್ ಅವತರಣಿಕೆಗೆ ಕೂಡ ಕನ್ನಡಿಗರು ಕಾಯುವಂತಾಗಿದೆ. ಹಾಲಿವುಡ್ ಪರದೆ ಮೇಲೆ ಕನ್ನಡದ ನಿರ್ದೇಶಕ ಹಾಗೂ ಕನ್ನಡದ ಹೀರೋ ಮಿಂಚುವುದನ್ನು ನೋಡಲು ಕೌಂಟ್‌ಡೌನ್ ಶುರುವಾಗಿದೆ.


Click it and Unblock the Notifications











