»   » ಚೇತನ್-ಮೇಘನಾ ರಾಜ್ ಜೋಡಿಯ 'ನೂರೊಂದು ನೆನಪು' ಸದ್ಯಕ್ಕಿಲ್ಲ.!

ಚೇತನ್-ಮೇಘನಾ ರಾಜ್ ಜೋಡಿಯ 'ನೂರೊಂದು ನೆನಪು' ಸದ್ಯಕ್ಕಿಲ್ಲ.!

Written By:
Subscribe to Filmibeat Kannada

ಎಲ್ಲ ಅಂದುಕೊಂಡಂತೆ ಆಗಿದ್ದರೇ ಮೇ 19ಕ್ಕೆ ಸ್ಯಾಂಡಲ್ ವುಡ್ ನಲ್ಲಿ ಡಬಲ್ ಧಮಾಕ ಆಗಬೇಕಿತ್ತು. ಆದ್ರೀಗ, ಚಿತ್ರಪ್ರೇಮಿಗಳಿಗೆ ಸ್ವಲ್ಪ ನಿರಾಸೆ ಆಗಿದೆ. ಅದಕ್ಕೆ ಕಾರಣ 'ನೂರೊಂದು ನೆನಪು'.

ಹೌದು, ಮೇ 19 ರಂದು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ಬಿಡುಗಡೆಯಾಗುತ್ತಿದೆ. ಅದೇ ದಿನ 'ಆ ದಿನಗಳು' ಚೇತನ್ ಹಾಗೂ ನಟಿ ಮೇಘನಾ ರಾಜ್ ಅಭಿನಯದ 'ನೂರೊಂದು ನೆನಪು' ಚಿತ್ರವೂ ತೆರೆಕಾಣಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ 'ನೂರೊಂದು ನೆನಪು' ಮುಂದೋಗಿದೆ.[ಮೇ 19ರಂದು ಬೆಳ್ಳಿತೆರೆಯಲ್ಲಿ ಚಿತ್ತಾರಗೊಳ್ಳಲಿದೆ 'ನೂರೊಂದು ನೆನಪು' ]

Kannada Movie Noorondu Nenapu Postponed to June 09th

ಅಷ್ಟಕ್ಕೂ, ನೂರೊಂದು ನೆನಪು ಪೋಸ್ಟ್ ಪೋನ್ ಆಗಿರುವುದು ಯಾಕೆ ಎಂಬ ನಿಖರ ಮಾಹಿತಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಜೂನ್ 9 ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ.[ಟ್ರೈಲರ್: ನೆನಪುಗಳನ್ನ ಹೊತ್ತು ಬರುತ್ತಿದೆ 'ನೂರೊಂದು ನೆನಪು']

ಅಂದ್ಹಾಗೆ, 'ನೂರೊಂದು ನೆನಪು' ಮರಾಠಿಯ 'ದುನಿಯಾ ದಾರಿ' ಕಾದಂಬರಿ ಆಧಾರಿತ ಚಿತ್ರ. ಖ್ಯಾತ ಬರಹಗಾರ ಸುಹಾಸ್ ಶಿರ್ವ್ಕಾರ್ ಬರೆದಿರುವ ಮರಾಠಿ ಕಥೆಯನ್ನ ತಮ್ಮ ನೆಟಿವಿಟಿಗೆ ತಕ್ಕಂತೆ ಬದಲಿಸಿ ಸಿನಿಮಾ ಮಾಡಲಾಗಿದೆ.['ನೂರೊಂದು ನೆನಪು'ಗಳಲ್ಲಿ ಚೇತನ್-ಮೇಘನಾ ರಾಜ್]

Kannada Movie Noorondu Nenapu Postponed to June 09th

'ಆ ದಿನಗಳು' ಖ್ಯಾತಿಯ ಚೇತನ್ ಹಾಗೂ ನಟಿ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆಯಲ್ಲಿ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್, ಸುಶ್ಮಿತಾ ಜೋಶಿ, ಅರ್ಚನಾ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕುಮಾರೇಶ್ ಎಂಬುವರು ಆಕ್ಟನ್ ಕಟ್ ಹೇಳಿದ್ದು, ಇದು ಇವರಿಗೆ ಚೊಚ್ಚಲ ಚಿತ್ರ. ಬೆಳಗಾವಿ ಮೂಲದ ಸೂರಜ್ ದೇಸಾಯಿ, ಮನೀಶ್ ದೇಸಾಯಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

English summary
If everything had gone right, then 'Noorondu Nenapu' which is based on a Marathi novel called 'Duniyadari' written by Suhas Shivalkar was supposed to release 19th of May. Now the film has been postponed to June 09th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X