For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಪುತ್ರ ನಿರಾಕರಿಸಿದ ಆಫರ್ ಸೈಪ್ ಅಲಿ ಖಾನ್‌ ಪುತ್ರನಿಗೆ!

  |

  ಬಾಲಿವುಡ್‌ನಲ್ಲಿ ನೆಪೊಟಿಸಂ ಅಥವಾ ಸ್ವಜನಪಕ್ಷಪಾತದ ಚರ್ಚೆ ನಡೆಯುತ್ತಲೇ ಬಂದಿದೆ. ಆದರೆ ನೆಪೊಟಿಸಂ ಅಂತ್ಯವಾಗುತ್ತಿಲ್ಲ ಹತ್ತಿರದಲ್ಲಿ ಅಂತ್ಯವಾಗುವ ಲಕ್ಷಣಗಳೂ ಇಲ್ಲ.

  ಸುಶಾಂತ್ ಸಿಂಗ್ ಅಕಾಲಿಕ ಸಾವಿನ ಬಳಿಕವಂತೂ ನೆಪೊಟಿಸನ್ ವಿರುದ್ಧ ದೊಡ್ಡ ಅಭಿಯಾನವೇ ಸಾಮಾಜಿಕ ಜಾಲತಾಣದಲ್ಲಿ ನಡೆಯಿತು ಆದರೂ ಅದೇನು ಹೆಚ್ಚು ಪರಿಣಾಮ ಬೀರಿಲ್ಲ. ಈಗಲೂ ಸ್ಟಾರ್ ನಟರ ಮಕ್ಕಳೇ ಹೆಚ್ಚು ಸಿನಿಮಾ ಗಿಟ್ಟಿಸಿಕೊಳ್ಳುತ್ತಿದ್ದಾರೆ.

  ಅದರಲ್ಲಿಯೂ ಕರಣ್ ಜೋಹರ್ ಅನ್ನು ಬಾಲಿವುಡ್‌ನ ನೆಪೊಟಿಸಮ್ ಕಿಂಗ್ ಎಂದೇ ಕರೆಯಲಾಗುತ್ತದೆ. ಹೊಸಬರನ್ನು ಗಣನೆಗೇ ತೆಗೆದುಕೊಳ್ಳದ ಕರಣ್ ಜೋಹರ್ ತಮ್ಮ ಸಿನಿಮಾಗಳಲ್ಲಿ ಸ್ಟಾರ್ ನಟರ ಮಕ್ಕಳಿಗೆ ಅವಕಾಶ ನೀಡುವುದೇ ಹೆಚ್ಚು. ಅದೂ ಅಲ್ಲದೆ, ಬಾಲಿವುಡ್‌ನ ಹಲವು ಸ್ಟಾರ್ ನಟರ ಮಕ್ಕಳಿಗೆ ಮೊದಲ ಅವಕಾಶವನ್ನು ಕರಣ್ ಜೋಹರ್ ಅವರೇ ನೀಡುತ್ತಾ ಬಂದಿದ್ದಾರೆ. ಇದೀಗ ಶಾರುಖ್ ಖಾನ್ ಪುತ್ರನಿಗೂ ಹೊಸ ಸಿನಿಮಾ ಮಾಡಲು ಮುಂದಾಗಿದ್ದರು ಆದರೆ ಆ ಅವಕಾಶ ಈಗ ಸೈಫ್ ಅಲಿ ಖಾನ್ ಪುತ್ರನ ಪಾಲಾಗಿದೆ.

  ಶಾರುಖ್ ಖಾನ್‌ರ ಪುತ್ರ ಆರ್ಯನ್ ಖಾನ್‌ಗಾಗಿ ಹೊಸ ಸಿನಿಮಾ ನಿರ್ಮಾಣ ಮಾಡುವ ಯೋಚನೆ ಕರಣ್ ಜೋಹರ್ ಅವರದ್ದಾಗಿತ್ತು. ಆದರೆ ಆರ್ಯನ್ ಖಾನ್, ಕರಣ್‌ ಜೋಹರ್‌ ನೀಡಿದ ಅವಕಾಶವನ್ನು ನಿರಾಕರಿಸಿದ್ದಾರೆ. ಕರಣ್ ಮಾತ್ರವಲ್ಲ ಇದಕ್ಕೆ ಮುನ್ನ ಜೋಯಾ ಅಖ್ತರ್ ಸಹ ಆರ್ಯನ್‌ಗೆ ಅವಕಾಶ ಆಫರ್ ಮಾಡಿದ್ದರು ಆದರೆ ಅದನ್ನೂ ಆರ್ಯನ್ ನಿರಾಕರಿಸಿದ್ದರು.

  ಆರ್ಯನ್ ತಮ್ಮ ಆಫರ್‌ ಅನ್ನು ನಿರಾಕರಿಸಿದ ಕಾರಣ ಕರಣ್ ಜೋಹರ್ ಈಗ ಆ ಅವಕಾಶವನ್ನು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಮ್ ಖಾನ್‌ಗೆ ನೀಡಿದ್ದಾರೆ. ಬಾಲಿವುಡ್‌ನ ಮೂಲಗಳ ಪ್ರಕಾರ, ಇಬ್ರಾಹಿಂ ಗಾಗಿ ಕರಣ್ ತಮ್ಮ ಧರ್ಮಾ ಪ್ರೊಡಕ್ಷನ್‌ನಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದು ಇಬ್ರಾಹಿಂರ ಮೊದಲ ಸಿನಿಮಾ ಆಗಿರಲಿದೆ. ಅಲ್ಲದೆ ಆ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಸಹ ಸ್ಟಾರ್ ನಟನ ಪುತ್ರನೇ!

  ಬಾಲಿವುಡ್‌ನ ಖ್ಯಾತ ನಟ ಬೊಮನ್ ಇರಾನಿಯ ಪುತ್ರ ಕಯೋಜೆ ಇರಾನಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಸಿನಿಮಾವು 2023 ರಂದು ಸೆಟ್ಟೇರಲಿದೆ.

  ಇಬ್ರಾಹಿಂ ನಟಿಸಲಿರುವ ಮೊದಲ ಸಿನಿಮಾಕ್ಕೆ ನಾಯಕಿಯೂ ಸ್ಟಾರ್ ನಟನ ಮಗಳೇ ಆಗಿದ್ದಾಳೆ. ಸಂಜಯ್ ಕಪೂರ್ ಹಾಗೂ ಮಹೀಪ್ ಕಪೂರ್‌ರ ಪುತ್ರಿ ಶನಾಯಾ ಕಪೂರ್ ಅನ್ನು ಈ ಸಿನಿಮಾಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  English summary
  Director and producer Karan Johar to launch Saif Ali Khan's son Ibrahim Khan soon to Bollywood.
  Friday, November 18, 2022, 9:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X