Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಕ್ಕಿ ಕೌಶಲ್‌ಗೆ ಷರತ್ತು ವಿಧಿಸಿ ಮದುವೆಯಾಗಿದ್ದ ಕತ್ರಿನಾ ಕೈಫ್! ಏನದು ಷರತ್ತು
ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರದ್ದೊಂದು. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ವಿವಾಹವಾಗಿ ಒಂದು ವರ್ಷವಾಗಿದೆ.
ಕತ್ರಿನಾ ಹಾಗೂ ವಿಕ್ಕಿ ಕೌಶಲ್ ವಿವಾಹವಾಗುತ್ತಿರುವುದು ಘೋಷಿಸಿದಾಗ ಹಲವರಿಗೆ ಆಶ್ಚರ್ಯವಾಗಿತ್ತು. ಏಕೆಂದರೆ ಕತ್ರಿನಾ ಕೈಫ್ ಎ ಸಾಲಿನ ನಟಿ ಆದರೆ ವಿಕ್ಕಿ ಕೌಶಲ್ ಬಿ ಸಾಲಿನ ನಟರಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ, ವಿಕ್ಕಿ ಕೌಶಲ್ ಬಾಲಿವುಡ್‌ನ ಜನಪ್ರಿಯ ಕುಟುಂಬದವರಲ್ಲ, ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರು.
ಸಲ್ಮಾನ್ ಖಾನ್, ರಣ್ಬೀರ್ ಕಪೂರ್ ಅಂಥಹಾ ದಿಗ್ಗಜರನ್ನು ಡೇಟ್ ಮಾಡಿದ್ದ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಜೊತೆಗೆ ಮದುವೆಗೆ ಸೈ ಎಂದಿದ್ದು ಹಲವರಿಗೆ ಆಶ್ಚರ್ಯ ತಂದಿತ್ತು. ಆದರೆ ಕತ್ರಿನಾ ಸಹ, ಸಾಕಷ್ಟು ಸಮಯ ತೆಗೆದುಕೊಂಡು, ಷರತ್ತುಗಳನ್ನು ವಿಧಿಸಿದ ಬಳಿಕವೇ ವಿಕ್ಕಿ ಅವರನ್ನು ವಿವಾಹವಾಗಿದ್ದರು.

ಸಲ್ಮಾನ್, ರಣ್ಬೀರ್ ಜೊತೆ ಡೇಟ್ ಮಾಡಿದ್ದ ಕತ್ರಿನಾ
ರಣ್ಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಕತ್ರಿನಾ ಬಹು ಸಮಯ ಒಂಟಿಯಾಗಿದ್ದರಂತೆ. ವೃತ್ತಿ, ಕುಟುಂಬದ ಕಡೆಗಷ್ಟೆ ಗಮನ ಹರಿಸಿದ್ದರಂತೆ. ಆದರೆ ಅದೆ ಸಮಯಕ್ಕೆ ವಿಕ್ಕಿ ಕೌಶಲ್‌ಗೆ ಕತ್ರಿನಾ ಮೇಲೆ ಲವ್ ಆಗಿದೆ. ಕೆಲವು ಬಾಲಿವುಡ್ ಪಾರ್ಟಿಗಳಲ್ಲಿ ಭೇಟಿಯಾಗಿದ್ದ ಈ ಜೋಡಿಯ ಪರಿಚಯ ಸ್ನೇಹಕ್ಕೆ ತಿರುಗಿದೆ. ಬಳಿಕ ಸ್ನೇಹ ಪ್ರೀತಿಗೆ. ವಿಕ್ಕಿ ಕೌಶಲ್ ಅವರೇ ಕತ್ರಿನಾ ಹಿಂದೆ ಬಿದ್ದು 'ಪ್ರೀತ್ಸೆ' ಎಂದು ಕೇಳಿ ಕೊಂಡಿದ್ದರಂತೆ.

ಮೊದಲ ಷರತ್ತು ಏನಾಗಿತ್ತು?
ಪ್ರೀತಿ ಕನ್‌ಫರ್ಮ್ ಆದ ಬಳಿಕ ಹೆಚ್ಚು ಸಮಯ ಕಾಯದೆ ಇಬ್ಬರೂ ಮದುವೆಯಾಗಿದ್ದಾರೆ. ಆದರೆ ಮದುವೆಯಾಗುವ ಮುನ್ನ ಕತ್ರಿಕಾ ಕೈಫ್ ಕೆಲವು ಷರತ್ತುಗಳನ್ನು ವಿಕ್ಕಿಗೆ ವಿಧಿಸಿದ್ದರಂತೆ. ವಿವಾಹವಾದ ಮೇಲೆ ನಟಿಸಲು ಅವಕಾಶ ನೀಡುವುದು ಕತ್ರಿನಾ ಕೈಫ್ ಹಾಕಿದ್ದ ಮೊದಲನೇ ಷರತ್ತಾಗಿದ್ದರೆ, ಮತ್ತೊಂದು ಷರತ್ತು ಕುಟುಂಬಕ್ಕೆ ಸಂಬಂಧಸಿದ್ದಾಗಿದೆ.

ಏಳು ಮಂದಿ ಸಹೋದರ-ಸಹೋದರಿಯರು ಕತ್ರಿನಾಗೆ
ಕತ್ರಿನಾ ಕೈಫ್ ಅವರಿಗೆ ಬರೋಬ್ಬರಿ ಆರು ಸಹೋದರಿಯರು ಹಾಗೂ ಒಬ್ಬ ಸಹೋದರ ಇದ್ದಾನೆ. ಎಲ್ಲರಿಗೂ ಕತ್ರಿನಾ ಕೈಫ್ ಹಿರಿಯರು. ಹಾಗಾಗಿ ತಾನು ಮದುವೆಯಾಗುವ ವ್ಯಕ್ತಿ ತಮ್ಮ ಕುಟುಂಬದವರನ್ನು ಅವರ ಕುಟುಂಬದವರೇ ಎಂಬಂತೆ ಕಾಣಬೇಕು, ಗೌರವಿಸಬೇಕು ಎಂಬುದು ಕತ್ರಿನಾರ ಷರತ್ತಾಗಿತ್ತು. ಆ ಷರತ್ತಿಗೆ ವಿಕ್ಕಿ ಕೌಶಲ್ ಒಪ್ಪಿಕೊಂಡ ಬಳಿಕವೇ ಕತ್ರಿನಾ, ವಿಕ್ಕಿ ಜೊತೆಗೆ ಮದುವೆಗೆ ಸೈ ಎಂದರಂತೆ.

ಸ್ಟಂಟ್‌ಮ್ಯಾನ್ ಮಗ ವಿಕ್ಕಿ
ವಿಕ್ಕಿ ಕೌಶಲ್ ಮಧ್ಯಮ ವರ್ಗದ ಕುಟುಂಬದಿಂದ ಬಂದು ಸ್ಟಾರ್ ಆಗಿ ಬೆಳೆದವರು. ವಿಕ್ಕಿ ಅವರ ತಂದೆ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದವರು. ಆ ನಂತರ ಫೈಟ್ ಮಾಸ್ಟರ್, ಸ್ಟಂಟ್ ಕೊರಿಯಾಗ್ರಾಫರ್ ಆಗಿ ಕೆಲಸ ಮಾಡಿದರು. ಅವರ ಪುತ್ರಿ ವಿಕ್ಕಿ ಕೌಶಲ್ ಎಂಜಿನಿಯರಿಂಗ್ ಪದವಿ ಗಳಿಸಿ ಕೊನೆಗೆ ನಟನೆಯತ್ತ ಬಂದರು. ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಕಾಣಿಸಿಕೊಂಡ ವಿಕ್ಕಿ ಇತ್ತೀಚೆಗೆ ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.