For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಅಂಗಳಕ್ಕೆ ಜಿಗಿತ್ತಾರಾ ಯಶ್? ದೇವ್ ಅಥವಾ ಕರ್ಣ ಆಗ್ತಾರಾ ರಾಕಿಂಗ್ ಸ್ಟಾರ್?

  |

  KGF- 2 ನಂತರ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವು ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಇದೇ ಒತ್ತಡದಲ್ಲಿ ಇರುವ ಯಶ್ ಅಳೆದು ತೂಗಿ ಕಥೆ ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಇದೀಗ ಬಾಲಿವುಡ್‌ನ 2 ಕ್ರೇಜಿ ಪ್ರಾಜೆಕ್ಟ್‌ಗಳಿಗೆ ರಾಕಿ ಭಾಯ್ ಹೆಸರು ಕೇಳಿಬರ್ತಿದೆ.

  ರಾಕಿ ಭಾಯ್ ಆಗಿ ಯಶ್ ಬಾಲಿವುಡ್ ಅಂಗಳದಲ್ಲೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿಕೊಂಡಿದ್ದಾರೆ. ಬಿಟೌನ್ ಮಂದಿ ಕೂಡ ಯಶ್ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಈ ನಡುವೆ ಕೆಲ ಹಿಂದಿ ಫಿಲ್ಮ್ ಮೇಕರ್ಸ್ ಯಶ್‌ನ ಹೀರೊ ಮಾಡಿ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಈ ಬಗ್ಗೆ ತೆರೆಮರೆಯಲ್ಲಿ ಕಸರತ್ತು ಕೂಡ ನಡೆಸುತ್ತಿದ್ದಾರೆ. ಯಾರಿಗೆ ಗೊತ್ತು ಎಲ್ಲಾ ಕೂಡಿ ಬಂದು ಯಶ್ ಬಾಲಿವುಡ್ ಅಂಗಳಕ್ಕೆ ಜಿಗಿದರೂ ಅಚ್ಚರಿಪಡಬೇಕಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದರಿಂದ ಎಲ್ಲಾ ಭಾಷೆಗೂ ಸಿನಿಮಾ ಡಬ್ ಮಾಡಬಹುದು. ಯಾವುದೇ ಸಮಸ್ಯೆ ಇಲ್ಲ.

  ರಾಕಿಂಗ್ ಫ್ಯಾಮಿಲಿ ರಾಕಿಂಗ್ ದೀಪಾವಳಿ ಪೋಸ್ಟ್ ದಾಖಲೆ: ಇನ್ನು 'ಯಶ್19' ಅಪ್‌ಡೇಟ್ ಸಿಕ್ಕರೆ?ರಾಕಿಂಗ್ ಫ್ಯಾಮಿಲಿ ರಾಕಿಂಗ್ ದೀಪಾವಳಿ ಪೋಸ್ಟ್ ದಾಖಲೆ: ಇನ್ನು 'ಯಶ್19' ಅಪ್‌ಡೇಟ್ ಸಿಕ್ಕರೆ?

  2 ಬಾಲಿವುಡ್ ಪ್ರಾಜೆಕ್ಟ್‌ಗಳಿಗೆ ರಾಕಿಂಗ್ ಸ್ಟಾರ್ ಹೆಸರು ಕೇಳಿಬರ್ತಿದೆ ಎಂದು ಬಿಟೌನ್‌ಗಳಲ್ಲಿ ಗಲ್ಲಿಗಳಲ್ಲಿ ಗುಲ್ಲಾಗಿದೆ. ಸದ್ಯ ಯಶ್ ಯಾವುದೇ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹಾಗಾಗಿ ಬಿಟೌನ್‌ ಕಥೆಗೆ ಸೈ ಎನ್ನುತ್ತಾರಾ ಅನ್ನೋದನ್ನ ಕಾದು ನೋಡಬೇಕು.

  'ಬ್ರಹ್ಮಾಸ್ತ್ರ' ಸೀಕ್ವೆಲ್‌ನಲ್ಲಿ ಯಶ್?

  'ಬ್ರಹ್ಮಾಸ್ತ್ರ' ಸೀಕ್ವೆಲ್‌ನಲ್ಲಿ ಯಶ್?

  ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್‌ ಶೇಕ್ ಮಾಡಿದ್ದು ಗೊತ್ತೇಯಿದೆ. ಈ ಚಿತ್ರದ ಸೀಕ್ವೆಲ್ ಬಗ್ಗೆಯೂ ಚರ್ಚೆ ನಡೀತಿದೆ. ಮೊದಲ ಭಾಗದಲ್ಲಿ ರಣ್‌ಬೀರ್ ಕಪೂರ್ ಶಿವ ಆಗಿ ದರ್ಬಾರ್ ನಡೆಸಿದರು. ಎರಡನೇ ಭಾಗದಲ್ಲಿ ದೇವ್ ಆರ್ಭಟ ನಡೆಯಲಿದೆ. ಯಾರು ದೇವ್ ಪಾತ್ರವನ್ನು ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹೃತಿಕ್ ರೋಷನ್ ಸೇರಿದಂತೆ ಬಾಲಿವುಡ್‌ನ ಕೆಲ ನಟರ ಹೆಸರುಗಳು ಕೇಳಿಬರ್ತಿತ್ತು. ಈಗ ಆ ಲಿಸ್ಟ್‌ಗೆ ಯಶ್ ಹೆಸರು ಸೇರಿಕೊಂಡಿದೆ.

  ನಮ್ಮ ಅಪ್ಪು ಸರ್ ಹೆಸರಿನಲ್ಲಿ ಈ ಕೆಲಸ ಮಾಡ್ತೀನಿ ಎಂದ ಯಶ್; ಸೀಟಿನಿಂದ ಎದ್ದು ಕೈಮುಗಿದ ಪ್ರಕಾಶ್ ರಾಜ್ನಮ್ಮ ಅಪ್ಪು ಸರ್ ಹೆಸರಿನಲ್ಲಿ ಈ ಕೆಲಸ ಮಾಡ್ತೀನಿ ಎಂದ ಯಶ್; ಸೀಟಿನಿಂದ ಎದ್ದು ಕೈಮುಗಿದ ಪ್ರಕಾಶ್ ರಾಜ್

  ಮಹಾಭಾರತದ ಕರ್ಣ ಆಗ್ತಾರಾ ರಾಕಿ?

  ಮಹಾಭಾರತದ ಕರ್ಣ ಆಗ್ತಾರಾ ರಾಕಿ?

  KGF ಸರಣಿ ಹಿಂದಿ ವರ್ಷನ್ ವಿತರಣೆ ಮಾಡಿದ್ದ ಎಕ್ಸೆಲ್ ಮೂವೀಸ್ ಸಂಸ್ಥೆ ಮಹಾಭಾರತ ಕಾವ್ಯ ಆಧರಿಸಿ ಸಿನಿಮಾ ಮಾಡಲು ಮುಂದಾಗಿದೆ. ಯಶ್ ಜೊತೆ ಸಿನಿಮಾ ಮಾಡಲು ಎಕ್ಸೆಲ್ ಸಂಸ್ಥೆ ಪ್ರಯತ್ನಿಸುತ್ತಿದೆ. ಓಂ ಪ್ರಕಾಶ್ ಮೆಹ್ರಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ. ಕರ್ಣನ ಕಥೆಯನ್ನು ಆಧರಿಸಿ 2 ಭಾಗಗಳಾಗಿ ಸಿನಿಮಾ ಮಾಡುವ ಪ್ರಯತ್ನ ನಡೀತಿದ್ದು, ಕರ್ಣನ ಪಾತ್ರಕ್ಕೆ ಯಶ್ ಹೆಸರು ಪರಿಶೀಲನೆ ನಡೆಸುತ್ತಿದ್ದಾರಂತೆ. ಈ ಬಗ್ಗೆ ಚರ್ಚೆ ನಡೀತಿದೆ ಎನ್ನುವ ಗುಸುಗುಸು ಬಾಲಿವುಡ್‌ನಲ್ಲಿ ಶುರುವಾಗಿದೆ.

  ಎಲ್ಲಿಗೆ ಬಂತು ನರ್ತನ್ - ಯಶ್ ಸಿನಿಮಾ?

  ಎಲ್ಲಿಗೆ ಬಂತು ನರ್ತನ್ - ಯಶ್ ಸಿನಿಮಾ?

  'ಮಫ್ತಿ' ನಿರ್ದೇಶಕ ನರ್ತನ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸ್ತಾರೆ ಎನ್ನುವ ಮಾತುಗಳು ಹಲವು ದಿನಗಳಿಂದ ಕೇಳಿಬರ್ತಿತ್ತು. ರಾಕಿ ಭಾಯ್‌ಗಾಗಿ ನರ್ತನ್ ಕಥೆ ಮಾಡಿದ್ದು ಕೂಡ ನಿಜ. ಆದರೆ ಕಥೆ ಇಷ್ಟವಾಗದ ಕಾರಣ ತಿದ್ದಿ ತೀಡುವ ಕೆಲಸ ನಡೀತಾನೇ ಇದೆ. ಯಾವಾಗ ಕಥೆ ಫೈನಲ್ ಆಗುತ್ತೋ ಗೊತ್ತಿಲ್ಲ. ಇತ್ತೀಚೆಗೆ ತಮಿಳು ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸ್ತಾರೆ ಎನ್ನುವು ವದಂತಿ ಕೂಡ ಹರಿದಾಡಿತ್ತು.

  ಬರ್ತ್‌ಡೇಗೆ ಯಶ್19 ಘೋಷಣೆ?

  ಬರ್ತ್‌ಡೇಗೆ ಯಶ್19 ಘೋಷಣೆ?

  ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಯಶ್19 ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಜನವರಿ 8ಕ್ಕೆ ರಾಕಿ ಭಾಯ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ ತಮ್ಮ ಮುಂದಿನ ಸಿನಿಮಾ ಘೋಷಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಟ್ನಲ್ಲಿ ಯಶ್19 ಸಿನಿಮಾ ಯಾವಾಗ ಶುರುವಾಗುತ್ತೋ? ಯಾರ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರುತ್ತೋ ಕಾದು ನೋಡಬೇಕು.

  English summary
  KGF star Yash set to make his Bollywood entry Yash offered Brahmastra 2 and Karna. know More.
  Thursday, October 27, 2022, 23:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X