»   » ಬೆಂಗಳೂರಲ್ಲಿ ಪತ್ತೆಯಾದ ಕಿಚ್ಚ ಸುದೀಪ್ ಹಳೇ ಗೆಳೆಯ

ಬೆಂಗಳೂರಲ್ಲಿ ಪತ್ತೆಯಾದ ಕಿಚ್ಚ ಸುದೀಪ್ ಹಳೇ ಗೆಳೆಯ

Posted By:
Subscribe to Filmibeat Kannada

ಬಂದೇ ಬಿಟ್ರು, ಇಲ್ಲೀವರೆಗೂ ಗೋವಾದಲ್ಲಿದ್ರೋ ಅಥವಾ ಇನ್ನೆಲ್ಲಿದ್ರೋ ಗೊತ್ತಿಲ್ಲ. 'ಕೆಂಪೇಗೌಡ' ಚಿತ್ರದ ನಿರ್ಮಾಪಕ ಶಂಕರೇಗೌಡರು ಕಾಣಿಸಿಕೊಂಡಿದ್ದಾರೆ, ಅದೂ ಕೂಡ ಅವ್ರ ಸಿನಿಮಾ ಗೋವಾ ರಿಲೀಸಾಗ್ತಿರೋ ಕಾರಣದಿಂದ.

2013 ಆಗಸ್ಟ್ ನಲ್ಲೇ 'ಗೋವಾ' ಸಿನಿಮಾ ರಿಲೀಸ್ ಮಾಡೇ ಮಾಡ್ತೀನಿ ಅಂತ ಅವರಿವರ ಮುಂದೆ ತೊಡೆ ತಟ್ಟಿದ್ದ ಶಂಕರೇಗೌಡ ತನ್ನ 'ಗೋವಾ' ಸಿನಿಮಾದಲ್ಲಿ ನಟ ಶ್ರೀಕಿಗೆ ಕೊಡಬೇಕಾದ ಕಾಸನ್ನೋ ಕೊಡದೇ ಕಾಡಿಸಿದ್ರಂತೆ. ['ಕೆಂಪೇಗೌಡ' ನಿರ್ಮಾಪಕ ಶಂಕರ್ ಗೌಡ ನಾಪತ್ತೆ!]

Goa movie working still

ಇದ್ರಿಂದಾಗಿ ಸಿಟ್ಟಿಗೆದ್ದ ಶ್ರೀಕಿ ಡಬ್ಬಿಂಗ್ ಮಾಡೋದಿಲ್ಲ ಅಂದಿದ್ರಂತೆ. ಈಗ ಡಬ್ಬಿಂಗೂ ಆಗಿದೆ ಸಿನಿಮಾ ರಿಲೀಸ್ ಗೂ ರೆಡಿಯಾಗಿದೆ. ಶಂಕರೇಗೌಡ ಕೂಡ ಬಂದಿದ್ದಾರೆ. ಆದ್ರೆ ಅರ್ಧ ಪತ್ರಿಕಾಗೋಷ್ಠಿ ಮುಗಿದ ಬಳಿಕ ಬಂದ ಶಂಕರೇಗೌಡ ಪತ್ರಕರ್ತರ ಮುಂದೆ ಕಾಣಿಸಿಕೊಳ್ಳಲಿಲ್ಲ.

ಇದಕ್ಕೆ ಕಾರಣವೂ ಇದೆ ಅಂತಿದೆ ಗಾಂಧಿನಗರದ ಪಡ್ಡೆ ಪಟಾಲಂ. ಯಾಕಂದ್ರೆ ಕಿಚ್ಚ ಸುದೀಪ್ ಜೊತೆ ಸಿಸಿಎಲ್, ಸಿನಿಮಾ ಸೇರಿದಂತೆ ಅಲ್ಲಿ ಇಲ್ಲಿ ಎಲ್ಲೆಲ್ಲೂ ಕುಚಿಕೂ ಗೆಳೆಯನಂತೆ ಪೋಸ್ ಕೊಡ್ತಿದ್ದ ಶಂಕರೇಗೌಡ ಇಷ್ಟು ದಿನ ಎಲ್ಲೂ ಸುದೀಪ್ ಜೊತೆ ಕಾಣಿಸಿಕೊಂಡಿರಲಿಲ್ಲ.

ಅದ್ಯಾಕೆ ಅಂತ ಹುಡುಕ್ತಾ ಹೋದಾಗ 'ವರದನಾಯಕ' ಸಿನಿಮಾ ನಿರ್ಮಾಣ ಮಾಡಿದ್ದ ಶಂಕರೇಗೌಡ ಗೆಳೆಯ ಕಿಚ್ಚ ಸುದೀಪುಗೆ ಆಪು ಇಟ್ಟಿದ್ರಂತೆ. ಒಂದು ಬಿಡಿಗಾಸನ್ನೂ ಪಡೆಯದೇ ಗೆಳೆಯ ಚಿರು ಮತ್ತು ಶಂಕರೇಗೌಡಗೆ ಅಂತಾನೇ ಸಿನಿಮಾ ಮಾಡಿದ ಕಿಚ್ಚನಿಗೆ ನಂಬಿಕೆ ದ್ರೋಹ ಮಾಡಿದ್ರಂತೆ ಅನ್ನೋ ಸುದ್ದಿ ಬಂದಿತ್ತು.

'ಜಸ್ಟ್ ಮಾತ್ ಮಾತಲ್ಲಿ' ಶುರುವಾದ ಕಿಚ್ಚ ಮತ್ತು ಶಂಕರೇಗೌಡ ಸ್ನೇಹ ಯಾಕ್ಹಿಂಗಾಯ್ತು. ಕಿಚ್ಚನಿಗೆ ಕಿಚ್ಚು ಹಚ್ಚುವಂತಹದ್ದೇನನ್ನ ಮಾಡಿದ್ರೂ ಶಂಕರೇಗೌಡ, ಈಗ್ಯಾಕೆ ಈ ಅಜ್ಞಾತವಾಸ? ಅವರೇ ಉತ್ತರ ಹೇಳ್ಬೇಕು.

English summary
Kichcha Sudeep's one of the old friend finally makes an appearance in Sandalwood. He is none other than producer of 'Kemegowda' movie Shankar Gowda. His latest movie 'Goa' also set for release on 6th March.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada