»   » ಹೇಮಂತ್ ಹೆಗ್ಡೆಗೆ ಕೈಕೊಟ್ಟ ನಿಂಬೆಹಣ್ಣಿನಂತ ಬೆಡಗಿ

ಹೇಮಂತ್ ಹೆಗ್ಡೆಗೆ ಕೈಕೊಟ್ಟ ನಿಂಬೆಹಣ್ಣಿನಂತ ಬೆಡಗಿ

Posted By:
Subscribe to Filmibeat Kannada

ನಟ ಕಮ್ ನಿರ್ದೇಶಕ ಹೇಮಂತ್ ಹೆಗ್ಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ನಿಂಬೆಹಣ್ಣಿನಂತ ಬೆಡಗಿ ಅವರಿಗೆ ಕೈಕೊಟ್ಟಿದ್ದಾರೆ. ಈ ಸಂಬಂಧ ಅವರು ದೂರು ನೀಡಲು ಮುಂದಾಗಿದ್ದಾರೆ. ಆಕೆ ಬೇರಾರು ಅಲ್ಲ 'ನಿಂಬೆಹುಳಿ' ಚಿತ್ರದ ನಟಿ ಕೋಮಲ್ ಝಾ.

ಹೇಮಂತ್ ಹೆಗ್ಡೆ ನಟಿಸಿ, ನಿರ್ದೇಶಿಸುತ್ತಿರುವ ನಿಂಬೆಹುಳಿ ಚಿತ್ರದ ಮೂವರು ಹೀರೋಯಿನ್ ಗಳಲ್ಲಿ ಕೋಮಲ್ ಝಾ ಸಹ ಒಬ್ಬರು. ಆದರೆ ಈಕೆ ಚಿತ್ರೀಕರಣಕ್ಕೆ ಬಾರದೆ ಪತ್ರಿಕೆಗಳಿಗೆ ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಮಂತ್ ಆರೋಪಿಸಿದ್ದಾರೆ.


ಕೋಮಲ್ ಝಾ ಅವರ ಕಿರಿಕ್ ಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ ಹೇಮಂತ್. 'ನಿಂಬೆಹುಳಿ' ಮೊದಲ ಹಂತದ ಚಿತ್ರೀಕರಣದ ಬಳಿಕ ಕೋಮಲ್ ಝಾ ನಾಪತ್ತೆಯಾಗಿದ್ದಾರೆ ಎಂದು ಅವರು ದೂರಿದ್ದಾರೆ.

ಆಕೆ ಕೈಕೊಟ್ಟ ಕಾರಣ ತಾನು ಮತ್ತೊಬ್ಬ ಖ್ಯಾತ ನಟ ಅನುಪಮ್ ಖೇರ್ ಅವರನ್ನು ಕಳೆದುಕೊಳ್ಳಬೇಕಾಯಿತು. ಅವರು ಕೊಟ್ಟ ಕಾಲ್ ಶೀಟ್ ಘಳಿಗೆ ಕೂಡ ಮುಗಿಯಿತು. ಕೋಮಲ್ ಝಾ ಮೂರು ತಿಂಗಳು ಸತಾಯಿಸಿದ್ದಕ್ಕೇ ಹೀಗಾಯಿತು ಎನ್ನುತ್ತಾರೆ ಹೇಮಂತ್.

ಈಗ ಅನುಪಮ್ ಖೇರ್ ಸ್ಥಾನಕ್ಕೂ ಬೇರೆ ನಟರನ್ನು ಕರೆತರಲು ಹೆಗ್ಡೆ ನಿರ್ಧರಿಸಿದ್ದಾರೆ. ಬಹುಶಃ ರಂಗಾಯಣ ರಘು ಅಥವಾ ರಮೇಶ್ ಅರವಿಂದ್ ಅವರನ್ನು ಕರೆತರುವ ಸಾಧ್ಯತೆಗಳಿವೆ. ಮಧುರಿಮಾ ಹಾಗೂ ನಿವೇದಿತಾ ಚಿತ್ರದ ಇನ್ನಿಬ್ಬರು ನಾಯಕಿಯರು.

'ನಿಂಬೆಹುಳಿ' ಚಿತ್ರದ ಹಾಡು "ರಾಮ ರಾಮಾ ಶ್ರೀರಾಮ ಫಸ್ಟ್ ನೈಟೇ ಟ್ರಾಫಿಕ್ ಜಾಮಾ..." (ವಿಡಿಯೋ ನೋಡಿ) ಎಂಬ ಹಾಡು ಯೂಟ್ಯೂಬ್ ನಲ್ಲಿ ಹೊಸ ಹವಾ ಎಬ್ಬಿಸಿದೆ. ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಬರೆದವರು ಜನಪ್ರಿಯ ಹನಿಗವಿ ಎಚ್ ದುಂಡಿರಾಜ್. (ಒನ್ಇಂಡಿಯಾ ಕನ್ನಡ)

English summary
Actor and director Hemath Hegde decided to filing a complaint at KFCC against actress Komal Jha. The actress not attending shooting and making false allegations said Hegde.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada