For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿ' ರೀ ಶೂಟ್.. ಹೊಸ ರಿಲೀಸ್ ಡೇಟ್ ಫಿಕ್ಸ್: ಪೋಸ್ಟರ್ ಡಿಸೈನರ್ ಬದಲಾದ್ರಾ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ರಿಲೀಸ್ ಯಾವಾಗ ಎನ್ನುವ ಪ್ರಶ್ನೆಗೆ ಇನ್ನು ಪಕ್ಕಾ ಲೆಕ್ಕ ಸಿಕ್ಕಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ರಾಜ್ಯೋತ್ಸವ ಸಂಭ್ರಮದಲ್ಲಿ ತೆರೆಗೆ ಬರಬೇಕಿತ್ತು. ಶೂಟಿಂಗ್ ತಡವಾಗಿದ್ದರಿಂದ ರಿಲೀಸ್ ಡೇಟ್ ಮುಂದಿನ ವರ್ಷಕ್ಕೆ ಮುಂದೂಡಿರುವ ಸುಳಿವು ಸಿಕ್ತಿದೆ. ಇನ್ನು ಸಿನಿಮಾ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬರ್ತಿದೆ.

  ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರಕ್ಕೆ ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಬಂಡವಾಳ ಹೂಡಿದ್ದಾರೆ. 'ಯಜಮಾನ' ಸಿನಿಮಾ ಮಾಡಿದ್ದ ಅದೇ ತಂಡ ಈ ಚಿತ್ರಕ್ಕೂ ಜೊತೆಯಾಗಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಮ್ಮೆ ದರ್ಶನ್ ಜೋಡಿಯಾಗಿ ಮಿಂಚಿದ್ದಾರೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು ಉಮಾಶ್ರೀ ಸೇರಿದಂತೆ ದೊಡ್ಡ ತಾರಾಗಣ 'ಕ್ರಾಂತಿ' ಚಿತ್ರದಲ್ಲಿದೆ. ಅಭಿಮಾನಿಗಳು ಸಿನಿಮಾ ಬಗ್ಗೆ ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಶೂಟಿಂಗ್ ಕಂಪ್ಲೀಟ್ ಆಗುವರೆಗೂ ಮಾತನಾಡುವುದು ಬೇಡ ಎಂದು ತಂಡ ಸುಮ್ಮನಿದೆ. ಆದರೆ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿ ಬರ್ತಾನೇ ಇದೆ.

  'ಗಂಧದ ಗುಡಿ' ಬರೀ ಚಿತ್ರವಲ್ಲ ಎಂದ ದರ್ಶನ್; ಈ ಥರ ಯಾರಿಂದಲೂ ಸಾಧ್ಯವಿಲ್ಲ ಎಂದ ಪ್ರಶಾಂತ್ ನೀಲ್'ಗಂಧದ ಗುಡಿ' ಬರೀ ಚಿತ್ರವಲ್ಲ ಎಂದ ದರ್ಶನ್; ಈ ಥರ ಯಾರಿಂದಲೂ ಸಾಧ್ಯವಿಲ್ಲ ಎಂದ ಪ್ರಶಾಂತ್ ನೀಲ್

  'ಕ್ರಾಂತಿ' ಸಿನಿಮಾ ರಿಲೀಸ್ ಡೇಟ್ ಘೋಷಣೆಗೂ ಮೊದಲೇ ಅಭಿಮಾನಿಗಳು ಪ್ರಮೋಷನ್ ಶುರು ಮಾಡಿದ್ದರು. ರಾಜ್ಯದ ಮೂಲೆ ಮೂಲೆಯಲ್ಲಿ ರ್ಯಾಲಿಗಳನ್ನು ಮಾಡಿ ಸದ್ದು ಮಾಡಿದ್ದರು. ಅಭಿಮಾನಿಗಳ ಪ್ರೀತಿಗೆ ದರ್ಶನ್ ತಲೆ ಬಾಗಿದ್ದರು. ಇದೀಗ ರಿಲೀಸ್ ಡೇಟ್ ಫಿಕ್ಸ್ ಆಯ್ತು ಎನ್ನುವ ಸುದ್ದಿ ಹರಿದಾಡ್ತಿದೆ.

  ಜನವರಿ 26ಕ್ಕೆ ದರ್ಶನ್ 'ಕ್ರಾಂತಿ'?

  ಜನವರಿ 26ಕ್ಕೆ ದರ್ಶನ್ 'ಕ್ರಾಂತಿ'?

  ಕನ್ನಡ ರಾಜ್ಯೋತ್ಸವ ಬದಲು ಗಣ ರಾಜ್ಯೋತ್ಸವಕ್ಕೆ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಮೊದಲಿಗೆ ಸಂಕ್ರಾತಿಗೆ ಸಿನಿಮಾ ತೆರೆಗೆ ತರುವ ಮಾತುಗಳು ಕೇಳಿಬಂದಿತ್ತು. ಆದರೆ ಸುಗ್ಗಿ ಹಬ್ಬಕ್ಕೆ 'ಆದಿಪುರುಷ್', 'ವಾರೀಸು', 'ತುನಿವು', 'ವಾಲ್ತೇರು ವೀರಯ್ಯ', 'ವೀರಸಿಂಹ ರೆಡ್ಡಿ' ರೀತಿಯ ತಮಿಳು ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿದೆ. 'ಕ್ರಾಂತಿ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ದೊಡ್ಡ ಸಂಖ್ಯೆಯ ಸ್ಕ್ರೀನ್‌ಗಳು ಬೇಕಾಗುತ್ತದೆ. ಹಾಗಾಗಿ ರಿಲೀಸ್ ಡೇಟ್ ಮುಂದೂಡಲಾಗ್ತಿದೆ ಎನ್ನುವ ಚರ್ಚೆ ನಡೀತಿದೆ.

  'ಕ್ರಾಂತಿ' Vs 'ಪಠಾನ್'

  'ಕ್ರಾಂತಿ' Vs 'ಪಠಾನ್'

  ಗಣರಾಜ್ಯೋತ್ಸವ ಸಂಭ್ರಮದಲ್ಲಿ ಶಾರುಕ್ ಖಾನ್ ನಟನೆಯ 'ಪಠಾನ್' ಸಿನಿಮಾ ರಿಲೀಸ್ ಆಗುವುದು ಕನ್ಫರ್ಮ್‌ ಆಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಿಂಗ್ ಖಾನ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಸಿದ್ಧಾರ್ಥ್‌ ಆನಂದ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ದೊಡ್ಡಮಟ್ಟದಲ್ಲಿ ತೆರೆಗೆತರುವ ಪ್ರಯತ್ನ ನಡೀತಿದೆ. 'ಪಠಾನ್' ಎದುರು ದರ್ಶನ್ 'ಕ್ರಾಂತಿ' ನಡೆಯುತ್ತದೆ ಎನ್ನಲಾಗ್ತಿದೆ. ಇದೇ ಡೇಟ್ ಚಿತ್ರತಂಡ ಫೈನಲ್ ಮಾಡುತ್ತಾ ಕಾದು ನೋಡಬೇಕಿದೆ.

  'ಕ್ರಾಂತಿ' ರೀಶೂಟ್ ನಿಜಾನಾ?

  'ಕ್ರಾಂತಿ' ರೀಶೂಟ್ ನಿಜಾನಾ?

  ಬಹಳ ಹಿಂದೆಯೇ ಸೆಟ್ಟೇರಿದ 'ಕ್ರಾಂತಿ' ಸಿನಿಮಾ ರಿಲೀಸ್ ಯಾಕೆ ತಡವಾಗುತ್ತಿದೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಅಕ್ಷರ ಕ್ರಾಂತಿಯ ಕುರಿತಾದ ಸಿನಿಮಾ ರಾಜ್ಯೋತ್ಸವಕ್ಕೆ ಬಂದಿದ್ದರೆ ಚೆನ್ನಾಗಿತ್ತು ಎನ್ನುವುದು ಕೆಲವರ ವಾದ. ಚಿತ್ರತಂಡ ಕೂಡ ಅದಕ್ಕೆ ಪ್ರಯತ್ನಿಸಿತ್ತು. ಆದರೆ ಒಂದಷ್ಟು ಸನ್ನಿವೇಶಗಳನ್ನು ರೀಶೂಟ್ ಮಾಡುತ್ತಿದ್ದಾರಂತೆ. ಇದೇ ಕಾರಣಕ್ಕೆ ರಿಲೀಸ್ ಡೇಟ್ ಮುಂದಿನ ವರ್ಷಕ್ಕೆ ಮುಂದೂಡುವಂತಾಗಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಚಿತ್ರತಂಡ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

  ಪೋಸ್ಟರ್ ಡಿಸೈನರ್ ಬದಲಾದ್ರಾ?

  ಪೋಸ್ಟರ್ ಡಿಸೈನರ್ ಬದಲಾದ್ರಾ?

  'ಕ್ರಾಂತಿ' ಸಿನಿಮಾ ಪೋಸ್ಟರ್‌ಗಳ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಾ ಬಂದಿದ್ದರು. ಗಣೇಶ ಹಬ್ಬಕ್ಕೆ ಬಂದಿದ್ದ ಪೋಸ್ಟರ್ ಅಂತೂ ಕೆಟ್ಟದಾಗಿತ್ತು ಎಂದಿದ್ದರು. ಪ್ಯಾನ್ ಇಂಡಿಯಾ ಚಿತ್ರಕ್ಕೆ ತಕ್ಕಂತೆ ಇಲ್ಲ, ಪೋಸ್ಟರ್ ಡಿಸೈನರ್‌ನ ಬದಲಾಯಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದರು. ಇದೀಗ ಡಿಸೈನರ್‌ನ ಬದಲಾಯಿಸಿದ್ದಾರೆ ಎನ್ನಲಾಗ್ತಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಪೋಸ್ಟರ್ ರಿಲೀಸ್ ಆಗಿರಲಿಲ್ಲ. ರಾಜ್ಯೋತ್ಸವಕ್ಕೆ ಬೊಂಬಾಟ್ ಪೋಸ್ಟರ್ ಸಿದ್ಧವಾಗುತ್ತಿದೆ.

  English summary
  Kranti vs Pathaan Darshan Starrer much-awaited film locks release date. The movie will release next year on January 25, a day before Republic day. Know More.
  Sunday, October 30, 2022, 9:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X