»   » 'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.!

'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಸಿನಿಮಾದ ಮೇಲೆ ಇಡೀ ದಕ್ಷಿಣ ಭಾರತದ ಕಣ್ಣು ಬಿದ್ದಿದೆ ಎನ್ನುವುದು ವಾಸ್ತವ. ಅದಕ್ಕೆ ತೆಲುಗು, ತಮಿಳು ಡಬ್ಬಿಂಗ್ ಹಕ್ಕುಗಳಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ.

ಅಚ್ಚರಿ ವಿಷ್ಯವಂದ್ರೆ ನಿರೀಕ್ಷೆ ಮೀರಿದ ವ್ಯವಹಾರ ಬಾಲಿವುಡ್ ನಿಂದ ಆಗಿದೆ. ಹೌದು, ಶೂಟಿಂಗ್ ಹಂತದಲ್ಲೇ ಹಿಂದಿಯ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದ್ದು, ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಇಷ್ಟೊಂದು ಬೆಲೆ ಸಿಕ್ಕಿದೆ ಎನ್ನಲಾಗಿದೆ.

ಹಾಗಿದ್ರೆ, 'ಕುರುಕ್ಷೇತ್ರ' ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎಂದು ಮುಂದೆ ಓದಿ....

ಬರೋಬ್ಬರಿ 9 ಕೋಟಿಗೆ ಸೇಲ್

ಮೂಲಗಳ ಪ್ರಕಾರ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'ದ ಹಿಂದಿ ಡಬ್ಬಿಂಗ್ ರೈಟ್ಸ್ ಸುಮಾರು 9 ಕೋಟಿಗೆ ಮಾರಾಟವಾಗಿದೆಯಂತೆ.

'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ದರ್ಶನ್ ಪತ್ನಿಯಾದ ನಟಿ ರಮ್ಯಾ!

'ಬಿಡ್ಡಿಂಗ್'ನಲ್ಲಿ ಹೆಚ್ಚಿದ ಬೇಡಿಕೆ

ಆರಂಭದಲ್ಲಿ 4 ಕೋಟಿಗೆ ಕೋಟ್ ಮಾಡಲಾಗಿತ್ತಂತೆ. ಆದ್ರೆ, ಬಿಡ್ಡಿಂಗ್ ನಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಅಂತಿಮವಾಗಿ 9 ಕೋಟಿಗೆ ದರ್ಶನ್ ಸಿನಿಮಾ ಸೇಲ್ ಆಗಿದೆ ಎನ್ನಲಾಗುತ್ತಿದೆ.

'ಕುರುಕ್ಷೇತ್ರ' ಶೂಟಿಂಗ್ ಬಿಡುವಿನ ವೇಳೆ 'ದುರ್ಯೋಧನ' ಏನ್ ಮಾಡ್ತಾರೆ?

ತಮಿಳು, ತೆಲುಗಿನಲ್ಲಿ ಸೋಲ್ಡ್ ಔಟ್.!

ಈಗಾಗಲೇ 'ಕುರುಕ್ಷೇತ್ರ' ಚಿತ್ರದ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳ ಡಬ್ಬಿಂಗ್ ರೈಟ್ಸ್ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದೆಯಂತೆ.

'ಕುರುಕ್ಷೇತ್ರ' ಬಜೆಟ್ ಎಷ್ಟು?

ಅಂದಾಜಿನ ಪ್ರಕಾರ ಮುನಿರತ್ನ ಅವರು ನಿರ್ಮಾಣ ಮಾಡುತ್ತಿರುವ 'ಕುರುಕ್ಷೇತ್ರ' ಚಿತ್ರದ ಬಜೆಟ್ ಸುಮಾರು 80 ಕೋಟಿ ದಾಟಬಹುದು ಎನ್ನಲಾಗಿದೆ.

ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ

ಇದುವರೆಗೂ ಹಿಂದಿ ಡಬ್ಬಿಂಗ್ ರೈಟ್ಸ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿರುವ ಕನ್ನಡ ಸಿನಿಮಾ 'ಕುರುಕ್ಷೇತ್ರ' ಎಂಬ ಹೊಸ ದಾಖಲೆ ಮಾಡಿದೆ.

ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

ಚಿತ್ರೀಕರಣ ನಡೆಯುತ್ತಿದೆ

ಕಳೆದ ಒಂದೂವರೆ ತಿಂಗಳಿನಿಂದ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕುರುಕ್ಷೇತ್ರ ಚಿತ್ರೀಕರಣ ನಡೆಯುತ್ತಿದೆ. ದರ್ಶನ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಶಶಿಕುಮಾರ್, ಸೋನು ಸೂದ್, ಯಶಸ್ ಸೂರ್ಯ ಡ್ಯಾನಿಶ್ ಅಖ್ತರ್ ಸೇರಿದಂತೆ ಬಹುದೊಡ್ಡ ತಾರಬಳಗ ಚಿತ್ರದಲ್ಲಿ ಅಭಿನಯಿಸುತ್ತಿದ್ದೆ. ನಾಗಣ್ಣ ನಿರ್ದೇಶನ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.

English summary
Challenging star darshan's 50th movie Kurukshetra’s Hindi dubbing rights sold for epic Rs 9 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X